ಮುಳ್ಳಯ್ಯನಗಿರಿ ಗುಡ್ಡ ಕುಸಿತ, ಭೂವಿಜ್ಞಾನಿಗಳ ತಂಡದಿಂದ ಪರಿಶೀಲನೆ

ಚಿಕ್ಕಮಗಳೂರು,ಆ.10– ಸತತ ಮಳೆಯಿಂದ ಮುಳ್ಳಯ್ಯನಗಿರಿ ಪರ್ವತ ಪ್ರದೇಶದಲ್ಲಿ ಗುಡ್ಡಕುಸಿತವಾಗುತ್ತಿದ್ದು, ಚಿಕ್ಕಮಗಳೂರಿನ ಐದು ತಾಲ್ಲೂಕುಗಳ 78 ಸ್ಥಳಗಳಲ್ಲಿ ಭೂವಿಜ್ಞಾನಿಗಳ ತಂಡ ಇಂದು ಪರಿಶೀಲನೆ ನಡೆಸಿದೆ. ಕೊಪ್ಪ, ಶೃಂಗೇರಿ, ಕಳಸ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಲಾಗುತ್ತಿದೆ. ಮಲೆನಾಡು ಪ್ರದೇಶ ಹಿಮಾಲಯ ಪರ್ವತದಂತೆ ರಕ್ಷಣಾತಕವಾಗಿತ್ತು. ಆದರೆ ಇತ್ತೀಚೆಗೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಅಲ್ಲಲ್ಲಿ ಗುಡ್ಡಗಳ ಕುಸಿತವಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿ ಅನಾಹುತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಭೂ ತಜ್ಞರು, ಭೂ ವಿಜ್ಞಾನಿಗಳು ಅಧಿಕಾರಿಗಳ ತಂಡ ಸ್ಥಳೀಯ ಅಧಿಕಾರಿಗಳ … Continue reading ಮುಳ್ಳಯ್ಯನಗಿರಿ ಗುಡ್ಡ ಕುಸಿತ, ಭೂವಿಜ್ಞಾನಿಗಳ ತಂಡದಿಂದ ಪರಿಶೀಲನೆ