ಮಿತಿಮೀರಿದ ಕೋವಿಡ್ ಕೇಸ್, ಚೀನಾದಲ್ಲಿ ರಕ್ತಕ್ಕಾಗಿ ಹಾಹಾಕಾರ

Social Share

ನವದೆಹಲಿ,ಡಿ.26- ಕೋವಿಡ್ ಸೋಂಕಿನ ಪ್ರಕರಣಗಳ ತೀವ್ರ ಹೆಚ್ಚಳದ ನಡುವೆ ಚೀನಾದಲ್ಲಿ ರಕ್ತದ ಕೊರತೆ ಎದುರಾಗಿರುವುದು ಮತ್ತಷ್ಟು ಆತಂಕಗಳನ್ನು ಸೃಷ್ಟಿಸಿದೆ. ವೈಯಕ್ತಿಕ ಸುರಕ್ಷತೆಯ ಖಾತ್ರಿಯೊಂದಿಗೆ ರಕ್ತ ದಾನ ಮಾಡಲು ಜನ ಮುಂದೆ ಬರಬೇಕು ಎಂದು ಚೀನಾ ಸರ್ಕಾರ ಮನವಿ ಮಾಡಿದೆ.

ಕೋವಿಡ್ ಪ್ರಕರಣಗಳು ಹಾಗೂ ಶೀತವಾತಾವರಣದಿಂದ ರಕ್ತದ ಬೇಡಿಕೆ ಹೆಚ್ಚಾಗಿದೆ ಎಂದು ಸರಳವಾಗಿ ವಿಷಯ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆದಿದೆ. ಆದರೆ, ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಕೋವಿಡ್ ರೂಪಾಂತರಿ ಯಾವ ರೀತಿಯಲ್ಲಿದೆ ಎಂದು ಅಂದಾಜಿಸಲು ಕಷ್ಟವಾಗುತ್ತಿದೆ.

ವುಹಾನ್‍ನ ವೈರಾಣು ಪ್ರಯೋಗಾಲಯದಿಂದ ಕೋವಿಡ್ ಸೋಂಕು ಸೋರಿಕೆಯಾಗಿದೆ ಎಂದು ಹೇಳಿದ ದಿನದಿಂದಲೂ ಈವರೆಗೂ ಚೀನಾ ಕೋವಿಡ್ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಮೊದಲ, ಎರಡನೇ ಮತ್ತು ಮೂರನೇ ಅಲೆಯಲ್ಲಿ ಚೀನಾ ಹೆಚ್ಚಿನ ಅನಾವುಗಳಾಗದಂತೆ ರಕ್ಷಣೆ ಪಡೆದಿತ್ತು.

ಪ್ರಸ್ತುತ ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತಲೂ ಚೀನಾದಲ್ಲಿ ಹೆಚ್ಚಿನ ಅಪಾಯ ಸಂಭವಿಸಿದೆ. ಕಳೆದ ಡಿಸೆಂಬರ್ ಒಂದರಿಂದ 20ರವರೆಗೂ ಸುಮಾರು 24.8 ಕೋಟಿ ಜನರಿಗೆ ಸೋಂಕು ಹರಡಿದೆ ಎಂದು ಸೋರಿಕೆಯಾಗಿರುವ ದಾಖಲೆಗಳು ಬಹಿರಂಗ ಪಡಿಸಿವೆ. ಕೋವಿಡ್ ನಿಯಂತ್ರಣ ನಿಯಮಾವಳಿಗಳನ್ನು ಸಡಿಲಗೊಳಿಸಿದ ಬೆನ್ನಲ್ಲೇ ಸೋಂಕು ವೇಗವಾಗಿ ಹರಡಲಾರಂಭಿಸಿದೆ.

ಶಾಲಾ ಮೈದಾನದಲ್ಲೇ ಇಬ್ಬರು ಯುವಕರ ಭೀಕರ ಕೊಲೆ..

ಓಮಿಕ್ರಾನ್ ಮೊದಲಿನಿಂದಲೂ ವೇಗವಾಗಿ ಹರಡುವ ರೂಪಾಂತರಿ ಎಂದು ಗುರುತಿಸಿಕೊಂಡಿದೆ. ಅದರ ಉಪತಳಿ ಬಿಎ.5ನಿಂದ ರೂಪಾಂತರಗೊಂಡ ಬಿಎಫ್.7 ದೊಡ್ಡ ದುರಂತಗಳನ್ನೇ ಸೃಷ್ಟಿಸಿದೆ. ಸೋಂಕಿನ ಪ್ರಕರಣಗಳು ಹೆಚ್ಚಾದ ಬಳಿಕ ಮತ್ತು ಸಾವುನೋವುಗಳು ಮಿತಿ ಮೀರಿದ್ದರಿಂದ ಚೀನಾ ದೈನಂದಿನ ಸೋಂಕಿನ ಪ್ರಕರಣಗಳ ವಾರ್ತಾಸಂಚಯ ಬಿಡುಗಡೆಯನ್ನೇ ನಿಲ್ಲಿಸಿದೆ. ಅಲ್ಲಿ ಏನು ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿಯದೆ ಇತರ ದೇಶಗಳು ಗೊಂದಲಕ್ಕೆ ಒಳಗಾಗಿವೆ.

ಮೊದಲ ಮೂರು ಅಲೆಗಳಲ್ಲೂ ಕೋವಿಡ್ ಪ್ರಮುಖವಾಗಿ ಉಸಿರಾಟದ ಸಮಸ್ಯೆಗಳನ್ನು ಸೃಷ್ಟಿಸಿತ್ತು. ಭಾರತದಂತಹ ದೇಶದಲ್ಲಿ ಆಮ್ಲಜನಕದ ಕೊರತೆಯಿಂದ ಹಲವಾರು ಸಾವುನೋವುಗಳಾದವು. ಇದರಿಂದ ಎಚ್ಚೆತ್ತುಕೊಂಡ ಭಾರತ ದೇಶಾದ್ಯಂತ ದ್ರವರೂಪದ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಮತ್ತು ದಾಸ್ತಾನು ಸಾಮಥ್ರ್ಯವನ್ನು ವೃದ್ಧಿಸಿದೆ. ಜೊತೆ ವೈದ್ಯಕೀಯ ಸೌಲಭ್ಯಗಳಾದ ಹಾಸಿಗೆ, ತೀವ್ರ ನಿಗಾ ಘಟಕಗಳು, ಆ್ಯಂಬುಲೆನ್ಸ್ ಸೇರಿದಂತೆ ಹಲವು ಸೌಕರ್ಯಗಳನ್ನು ಮೇಲ್ದರ್ಜೆಗೆರಿಸಿದೆ.

ಈಗಿನ ಧಾರಣ ಸಾಮಥ್ರ್ಯದ ಪ್ರಕಾರ ಕೋವಿಡ್ ವೇಗವಾಗಿ ಹರಡಿದರೂ ಅದನ್ನು ನಿಭಾಯಿಸುವ ಶಕ್ತಿ ಭಾರತಕ್ಕಿದೆ. ಮುನ್ನೆಚ್ಚರಿಕೆಯಾಗಿ ನಾಳೆಯಿಂದ ಎಲ್ಲೆಡೆ ವೈದ್ಯಕೀಯ ಸೌಲಭ್ಯಗಳ ಸಕ್ರಿಯತೆ ಪರೀಕ್ಷೆಗೆ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಪ್ರತಿ ದಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ.

ಅಧಿವೇಶನ ಆರಂಭವಾಗಿ ವಾರಕಳೆದರೂ ನಿಲ್ಲದ ಸಾಲು ಸಾಲು ಪ್ರತಿಭಟನೆಗಳು

ಆಮ್ಲಜನಕ ಹಾಗೂ ಇತರ ವೈದ್ಯಕೀಯ ಸೌಲಭ್ಯ ಸುಧಾರಿಸಿರುವ ಕೇಂದ್ರ ಸರ್ಕಾರಕ್ಕೆ ಚೀನಾದಿಂದ ಕೇಳಿ ಬರುತ್ತಿರುವ ರಕ್ತದ ಕೊರತೆ ಎಂಬ ವರದಿಗಳು ಆತಂಕ ಮೂಡಿಸಿವೆ. ಬಿಎಫ್.7 ತಳಿಯಿಂದ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ರಕ್ತದ ಕೊರತೆ ಕಂಡು ಬರುಬಹುದೇ ಎಂಬ ವಿಷಯಗಳ ಪರಿಶೀಲನೆ ನಡೆಯಲಾರಂಭಿಸಿದೆ.

ಆಮ್ಲಜನಕ ಹಾಗೂ ಇತರ ಮಾನವ ನಿರ್ಮಿತ ಸೌಲಭ್ಯಗಳನ್ನು ಸುಧಾರಿಸಲು ಸಾಧ್ಯವಿದೆ. ಆದರೆ ಪ್ರಕೃತಿ ದತ್ತವಾದ ರಕ್ತದ ಕೊರತೆ ಎದುರಾದರೆ ನಿಭಾಯಿಸುವುದೇ ಹೇಗೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ರಕ್ತದ ಕೊರತೆಗೆ ಹೊರರೋಗಿಗಳ ವಿಭಾಗ ಹಾಗೂ ಶಸ್ತ್ರ ಚಿಕಿತ್ಸೆಯ ಪ್ರಕರಣಗಳು ಕಾರಣ ಎಂದು ಹೇಳಲಾಗುತ್ತಿದೆ.

ಚೀನಾದಲ್ಲಿ ಕೋವಿಡ್ ಭಯದಿಂದ ಜನ ರಕ್ತ ದಾನ ಮಾಡಲು ಮುಂದೆ ಬರುತ್ತಿಲ್ಲ. ರಕ್ತದ ಕೊರತೆಯಿಂದ ಸಾಕಷ್ಟು ಸಮಸ್ಯೆಗಳಾಗಿವೆ ಎಂಬ ವರದಿಗಳಾಗಿವೆ. ಚೀನಾ ಸರ್ಕಾರ ರಕ್ತ ದಾನಿಗಳಿಗೆ ನಿಯಮಗಳನ್ನು ಸಡಿಲಗೊಳಿಸಿದೆ. ಸೋಂಕಿತರೊಂದಿಗಿನ ಸಂಪರ್ಕಿತರು ರಕ್ತದಾನ ಮಾಡಲು ಮುಂದೆ ಬರುವಂತೆ ಮನವಿ ಮಾಡಲಾಗಿದೆ.

ಚೀನಾದ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ದಿನಕ್ಕೆ 1200 ಮಂದಿ ರಕ್ತದಾನಿಗಳ ಕೊರತೆ ಕಂಡು ಬರುತ್ತಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ತಮಿಳುನಾಡಿನ ಕರಾವಳಿಯಲ್ಲಿ ಚಂಡಮಾರುತ ಎಚ್ಚರಿಕೆ ಕೇಜ್ ಅಳವಡಿಕೆ

ಹೀಗಾಗಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ರಕ್ತದ ಕೊರತೆಗೂ ಕೋವಿಡ್ ಉಪತಳಿಯ ಅವಾಂತರಗಳಿಗೂ ಏನಾದರೂ ಸಂಬಂಧ ಇದೆಯೇ ಎಂದು ಪರಿಶೀಲನೆ ನಡೆಸಲಾರಂಭಿಸಿವೆ.

China, face, blood shortage, amid, rise, Covid-19 cases,

Articles You Might Like

Share This Article