ಸಂಸದೆ ನವನೀತ್ ರಾಣಾ ಮತ್ತು ತಂದೆ ವಿರುದ್ಧ ಜಾಮೀನು ರಹಿತ ವಾರಂಟ್

Social Share

ಮುಂಬೈ, ನ.8 – ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಕೆ ಪ್ರಕರಣದಲ್ಲಿ ಅಮರಾವತಿ ಲೋಕಸಭಾ ಸದಸ್ಯೆ ನವನೀತ್ ರಾಣಾ ಮತ್ತು ಆಕೆಯ ತಂದೆ ವಿರುದ್ಧ ಮುಂಬೈ ನ್ಯಾಯಾಲಯವು ಮತ್ತೆ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ನ್ಯಾಯಾಲಯವು ಕಳೆದ ಸೆಪ್ಟೆಂಬರ್‍ನಲ್ಲಿ ರಾಣಾ ಮತ್ತು ಆಕೆಯ ತಂದೆಯ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು ಇದನ್ನು ಜಾರಿಗೊಳಿಸಲು ಪೊಲೀಸರು ಹೆಚ್ಚಿನ ಸಮಯ ಕೋರಿದ್ದರು ಆದರೆ, ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಕೂಡಲೇ ಕ್ರಮಕೈಗೊಳ್ಳುವಂತೆ ಸೂಚಿಸಿದೆ.

ಹಿಂದುತ್ವಕ್ಕೆ ಅಪಮಾನವಾದಾಗ ನಾ ಮೌನಿಯಾಗಲಾರೆ: ಸಚಿವ ಸುನಿಲ್ ಕುಮಾರ್

ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಿಐ ಮೊಕಾಶಿ ಅವರು ಮತ್ತೆ ಇಬ್ಬರ ವಿರುದ್ಧ ಹೊಸ ಎನ್‍ಬಿಡಬ್ಲ್ಯೂ ಹೊರಡಿಸಿದ್ದು .ವರದಿ ಸಲ್ಲಿಸಲು ನ್ಯಾಯಾಲಯವು ನವೆಂಬರ್ 28 ಕ್ಕೆ ಪ್ರಕರಣವನ್ನು ಮುಂದೂಡಿದೆ.
ಮುಂಬೈನ ಮುಲುಂಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ, ರಾಣಾ ಮತ್ತು ಆಕೆಯ ತಂದೆ ಅವರು ಚುನಾಯಿತರಾದ ಕ್ಷೇತ್ರ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿರುವುದರಿಂದ ಜಾತಿ ಪ್ರಮಾಣಪತ್ರವನ್ನು ನಕಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

BIG NEWS: ವಿಶ್ವಕಪ್‍ ಸೆಮಿಫೈನಲ್‌ನಿಂದ ರೋಹಿತ್ ಶರ್ಮಾ ಔಟ್?

ಇದರ ನಡುವೆ ಸಂಸದರಿಗೆ ನೀಡಲಾದ ಜಾತಿ ಪ್ರಮಾಣಪತ್ರವನ್ನು 2021 ರಲ್ಲಿ ಬಾಂಬೆ ಹೈಕೋರ್ಟ್ ರದ್ದುಗೊಳಿಸಿತು, ಇದನ್ನು ನಕಲಿ ದಾಖಲೆಗಳನ್ನು ಬಳಸಿ ಮೋಸದಿಂದ ಪಡೆಯಲಾಗಿದೆ ಎಂದು ಹೇಳಿತ್ತು.

Articles You Might Like

Share This Article