ಉದ್ಯಮಿಯಿಂದ ಸುಲಿಗೆ : ಛೋಟಾ ಶಕೀಲ್‍ ಸಂಬಂಧಿ ರಿಯಾಜ್ ಭಾಟಿಯ ಬಂಧನ

Social Share

ಮುಂಬೈ, ಸೆ.27 (ಪಿಟಿಐ) – ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆ ಸಂಪರ್ಕ ಹೊಂದಿದ್ದ ಉದ್ಯಮಿ ರಿಯಾಜ್ ಭಾಟಿಯನ್ನು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ಎಇಸಿ ತಂಡ ಬಂಧಿಸಿದೆ.

ಕಳೆದ ರಾತ್ರಿ ಉಪನಗರ ಅಂಧೇರಿಯಿಂದ ರಿಯಾಜ್‍ಭಾಟಿಯನ್ನು ಸುಲಿಗೆ ನಿಗ್ರಹ ದಳ (ಎಇಸಿ) ಬಂಧಿಸಿ ಆತನ ಬಳಿ ಇದ್ದ ಎರಡು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದೆ ಹಿರಿಯ ಪೊಲೀಸ್ ಅಕಾರಿಗಳು ತಿಳಿಸಿದ್ದಾರೆ.

ಛೋಟಾ ಶಕೀಲ್‍ನ ಸಂಬಂಯಾದ ರಿಯಾಜ್ ಭಾಟಿ ಮತ್ತು ಮೊಹಮ್ಮದ್ ಸಲೀಂ ಇಕ್ಬಾಲ್ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್ ವಸೋರ್‍ವಾದ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿ 30 ಲಕ್ಷ ರೂಪಾಯಿ ಮೌಲ್ಯದ ಕಾರು ಮತ್ತು 7.5 ಲಕ್ಷ ನಗದು ಹಣವನ್ನು ಸುಲಿಗೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಎಇಸಿ ಕಚೇರಿಯಲ್ಲಿ ವಿಚಾರಣೆಯ ನಂತರ, ಭಾಟಿಯನ್ನು ಸೋಮವಾರ ಬಂಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಂಬೈನ ವಸೋರವಾ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ದಾಖಲಾಗಿತ್ತು.ಈ ಹಿಂದೆ ಸುಲಿಗೆ, ಭೂಕಬಳಿಕೆ ಮತ್ತು ಗುಂಡಿನ ದಾಳಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಟಿಯನ್ನು ಬಂಸಲಾಗಿತ್ತು. ಈತ 2015 ಮತ್ತು 2020 ರಲ್ಲಿ ನಕಲಿ ಪಾಸ್‍ಪೋರ್ಟ್ ಬಳಸಿ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಈ ಹಿಂದೆ ಡಿ ಕಂಪನಿ ಸಿಂಡಿಕೇಟ್ ವಿರುದ್ಧದ ಪ್ರಕರಣದಲ್ಲಿ ಸಲೀಂ ಫ್ರೂಟ್‍ನನ್ನಿ ಬಂಧನ ಮಾಡಿತ್ತು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಹೇಳಿದ್ದಾರೆ.

Articles You Might Like

Share This Article