ಮುಂಬೈನಲ್ಲಿ ಜಾನುವಾರು ಸಾಗಾಟ ನಿಷೇಧ

Social Share

ಮುಂಬೈ, ಸೆ.19- ಚರ್ಮ ರೋಗ ಹರಡುವುದನ್ನು ತಡೆಯುವ ಸಲುವಾಗಿ ಮುಂಬೈ ಪೊಲೀಸರು ನಗರದಲ್ಲಿ ಜಾನುವಾರು ಸಾಗಣೆಯನ್ನು ನಿಷೇಸಿದ್ದಾರೆ. ಮುಂಬೈ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪ್ರದೇಶ ವ್ಯಾಪ್ತಿಯಲ್ಲಿ ಮುಂಬರುವ ಅಕ್ಟೋಬರ್ 13ರವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ಪೊಲೀಸ್‍ಅಕಾರಿಯೊಬ್ಬರು ತಿಳಿಸಿದ್ದಾರೆ.

ಜಾನುವಾರುಗಳನ್ನು ಮಾರುಕಟ್ಟೆ ಅಥವಾ ಪ್ರದರ್ಶನ ಕೇಂದ್ರಗಳಿಗೆ ಸಾಗಿಸುವುದು, ಮೇವು ಹುಲ್ಲು ಅಥವಾ ಉಪಕರಣಗಳ ಸಾಗಣೆಯನ್ನು ನಿಷೇಧಿಸಲಾಗಿದೆ. ಯಾರಾದರೂ ಆದೇಶವನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಚರ್ಮ ರೋಗವು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಇದು ಜಾನುವಾರುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ , ಜ್ವರ, ಚರ್ಮದ ಮೇಲೆ ಗಂಟುಗಳು ಮೂಡಿ ಸಾವಿಗೆ ಕಾರಣವಾಗಬಹುದು.

ಗುಜರಾತ್, ರಾಜಸ್ಥಾನ, ಪಂಜಾಬï, ಹರಿಯಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ಎಂಟಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಾವಿರಾರು ಜಾನುವಾರುಗಳು ರೋಗದಿಂದ ಸಾವನ್ನಪ್ಪಿವೆ.

Articles You Might Like

Share This Article