ಭಾರತದಲ್ಲಿ ಕಳುವಾಗುತ್ತಿದ್ದ ಮೊಬೈಲ್ ನೇಪಾಳ-ಬಾಂಗ್ಲಾದಲ್ಲಿ ಮಾರಾಟ

Social Share

ಮುಂಬೈ, ಜು.24 – ನಮ್ಮ ದೇಶದಲ್ಲಿ ಕಳುವಾಗುತ್ತಿದ್ದ ಮೊಬೈಲ್ ಫೋನ್‍ಗಳನ್ನು ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಮಾರಾಟ ಮಾಡುತ್ತಿದ್ದ ಅಕ್ರಮ ದಂಧೆಯನ್ನು ಮುಂಬೈ ಪೊಲೀಸರು ಬೇಧಿಸಿದ್ದಾರೆ. ಹವಾಲಾ ಜಾಲದ ರೀತಿಯಲ್ಲಿ ನಡೆಯುತ್ತಿದ್ದ ಕಳ್ಳ ದಂಧೆಯನ್ನು ಬಯಲಿಗೆಳೆಯಲಾಗಿದೆ.

ಕಳೆದ ಜುಲೈ 15 ರಂದು ಇಲ್ಲಿನ ಮನ್ಖುರ್ದ್ ಪ್ರದೇಶದ ಪೊಲೀಸರ ದಾಳಿಯ ಸಮಯದಲ್ಲಿ ಐಫೋನ್‍ಗಳು ಸೇರಿದಂತೆ 480 ಮೊಬೈಲ್ ಹ್ಯಾಂಡ್‍ಸೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಾಥಮಿಕ ತನಿಖೆ ಪ್ರಕಾರ ಈ ಗ್ಯಾಂಗ್‍ನ ಸದಸ್ಯರು ವಿದೇಶಗಳಲ್ಲಿಯೂ ಸಂಪರ್ಕ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್ ಫೋನ್‍ಗಳಲ್ಲದೆ, ಪೊಲೀಸರು ದಾಳಿಯ ವೇಳೆ 9.5 ಕೆಜಿ ಗಾಂಜಾ, 174 ವಿದೇಶಿ ಮದ್ಯದ ಬಾಟಲಿಗಳು, ಎರಡು ಕತ್ತಿಗಳು ಮತ್ತು ಲ್ಯಾಪ್‍ಟಾಪ್ ವಶಪಡಿಸಿಕೊಂಡಿದ್ದಾರೆ. ಗ್ಯಾಂಗ್‍ನ ಇಬ್ಬರು ಸದಸ್ಯರಾದ ಮೆಹಬೂಬ್ ಅಲಿಯಾಸ್ ಲಲ್ಲು ಬದ್ರುದ್ದೀನ್ ಖಾನ್ (37) ಮತ್ತು ಫೈಯಾಜ್ ಶೇಖ್ (31)ಬಂಧಿಸಲಾಗಿದ್ದು, ಮತ್ತೊಬ್ಬ ಆಸಿಫ್ ಇದ್ರಿಸಿ (25)ನನ್ನು ಮುಂಬೈ ಅಪರಾಧ ವಿಭಾಗವು ಉತ್ತರ ಪ್ರದೇಶದ ಜಹಾಂಗೀರಾಬಾದ್ ಪಟ್ಟಣದಲ್ಲಿ ಬಂಧಿಸಿದೆ.

ತನಿಖೆಯ ಸಮಯದಲ್ಲಿ ಈ ಗ್ಯಾಂಗ್ ನಗರದಲ್ಲಿ ಕಳ್ಳರಿಂದ ಮೊಬೈಲ್ ಫೋನ್‍ಗಳನ್ನು ಖರೀದಿಸಿ ಅ ನಂತರ ಅವರು ಫೋನ್ ಸೀಕ್ರೇಟ್ ಕೊಡ್ ಐಎಂ ಸಂಖ್ಯೆಯನ್ನು ಬದಲಾಯಿಸುತ್ತಾರೆ ಮತ್ತು ಅವುಗಳನ್ನು ಭಾರತ, ನೇಪಾಳ ಮತ್ತು ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ಮಾರಾಟ ಮಾಡುತ್ತಾರೆ ಮತ್ತು ಹವಾಲಾ ಮೂಲಕ ಹಣವನ್ನು ಸ್ವೀಕರಿಸುತ್ತಿದ್ದರು ಎಂದು ಹಿರಿಯ ಪೊಲೀಸ್‍ ಅಧಿಕಾರಿ ಹೇಳಿದ್ದಾರೆ.

ಈ ಗ್ಯಾಂಗ್ ದಕ್ಷಿಣ ಮುಂಬೈನ ಅತಿದೊಡ್ಡ ಕಳ್ಳರ ಮಾರುಕಟ್ಟೆಗಳಲ್ಲಿ ಒಂದಾದ ಚೋರ್ ಬಜಾರ್ ಜನರೊಂದಿಗೆ ಸಂಪರ್ಕವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ನಾವು ಕೇವಲ ಒಂದು ದಾಳಿಯಲ್ಲಿ 480 ಮೊಬೈಲ್ ವಶಪಡಿಸಿಕೊಂಡಿದ್ದೇವೆ. ಅವರು ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಎಷ್ಟು ಮಾರಾಟ ಮಾಡಿದ್ದಾರೆ ಎಂದು ನಾವು ಊಹಿಸಬಹುದು ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ .

Articles You Might Like

Share This Article