ಮುಂಬೈ,ಮಾ.15- ಮಗಳು ತನ್ನ ತಾಯಿಯ ಶವವನ್ನು ತಿಂಗಳುಗಟ್ಟಲೆ ಪ್ಲಾಸ್ಟಿಕ್ ಚೀಲದಲ್ಲಿ ಬಚ್ಚಿಟ್ಟಿದ್ದ ಆಘಾತಕಾರಿ ಘಟನೆ ಮುಂಬೈನ ಲಾಲ್‍ಭಾಗ್ ಪ್ರದೇಶದಲ್ಲಿ ನಡೆದಿದೆ. 53 ವರ್ಷದ ಮಹಿಳೆಯ ಶವ ಪ್ಲಾಸ್ಟಿಕ್ ಚೀಲದೊಳಗೆ ಪತ್ತೆಯಾಗಿದ್ದು, ಶವವನ್ನು ತಿಂಗಳುಗಟ್ಟಲೆ ಬಚ್ಚಲಲ್ಲಿ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯ ಮಗಳು 21 ವರ್ಷದವಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮೃತ ಮಹಿಳೆಯ ಸಹೋದರ ಮತ್ತು ಸೋದರಳಿಯ ನಿನ್ನೆ ಕಲಾಚೌಕಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು ಎಂದು ಡಿಸಿಪಿ ಪ್ರವೀಣ್ ಮುಂದೆ ತಿಳಿಸಿದ್ದಾರೆ.
ಮಹಿಳೆ ವಾಸಿಸುತ್ತಿದ್ದ ಅಪಾರ್ಟ್‍ಮೆಂಟ್‍ನಲ್ಲಿ ಹುಡುಕಾಟ ನಡೆಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ. ಮಹಿಳೆಯ ಮಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಆದರೆ, ಆಕೆಯ ಸಾವಿಗೆ ಇನ್ನು ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಸೆಮಿಫೈನಲ್ ಇದ್ದಂತೆ : ಹಿಮಂತ ಬಿಸ್ವ ಶರ್ಮ
ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ, 28 ವರ್ಷದ ಅಫ್ತಾಬ್ ಪೂನಾವಾಲಾ ತನ್ನ ಲಿವ್ -ಇನ್ ಪಾಲುದಾರಳನ್ನು ಕೊಂದು ಆಕೆಯ ದೇಹದ ಭಾಗಗಳನ್ನು ರೆಫ್ರಿಜರೇಟರ್‍ನಲ್ಲಿ ಇರಿಸಿ, ನಂತರ ಅವುಗಳನ್ನು ಒಂದೊಂದಾಗಿ ನಗರದ ಮೆಹ್ರೌಲಿ ಕಾಡಿನಲ್ಲಿ ಎಸೆದಿದ್ದ ಮಾದರಿಯಲ್ಲೇ ಈ ಘಟನೆ ನಡೆದಿರುವುದು ಮುಂಬೈ ನಿವಾಸಿಗಳ ನಿದ್ದೆಗೆಡಿಸಿದೆ.
Mumbai, Police, detain, Lalbaug, woman, living, mother, dead, body, 3 months,