ಭಾರಿ ಚರ್ಚೆಗೆ ಕಾರಣವಾಗಿದೆ ಅಮಾನತ್ತಾಗಿದ್ದ ಪೊಲೀಸ್ ಅಧಿಕಾರಿಗಳು ಮರು ಸೇರ್ಪಡೆ

Social Share

ಮುಂಬೈ, ಅ. 29 – ಸಿಬ್ಬಂದಿ ಕೊರತೆ ಕಾರಣ ನೀಡಿ ಸುಲಿಗೆ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಮೂವರು ಅಧಿಕಾರಿಗಳು ಪುನಃ ಸೇವೆಗೆ ಹಾಜರಾಗಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.

ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಪೊಲೀಸ್ ಇನ್ಸ್‍ಪೆಕ್ಟರ್ ಓಂ ವಂಗಟೆ, ಸಹಾಯಕ ಪೊಲೀಸ್ ಇನ್ಸ್‍ಪೆಕ್ಟರ್ ನಿತಿನ್ ಕದಂ ಮತ್ತು ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಸಮಾಧಾನ್ ಜಮ್ದಾಡೆ ಅವರನ್ನು ಮುಂಬೈ ಪೊಲೀಸ್ ಪಡೆಗೆ ಸೇರಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅಮಾನತಿನ ನಂತರ, ಅಧಿಕಾರಿಗಳು ತಮ್ಮ ಸಂಬಳದ ಶೇಕಡಾ 50 ರಷ್ಟು ಪಡೆಯುತ್ತಿದ್ದರು ಮತ್ತು ಅಮಾನತಿನಲ್ಲಿ ಮೂರು ತಿಂಗಳ ಪೂರ್ಣಗೊಂಡ ನಂತರ ಅವರು ತಮ್ಮ ಸಂಬಳದ ಶೇಕಡಾ 75 ರಷ್ಟು ಪಡೆಯುತ್ತಿದ್ದಾರೆ.

ನ.1ರಂದು ಮನೆಗಳ ಮೇಲೆ ಕನ್ನಡ ಧ್ವಜ ಹಾರಿಸಲು ಜೆಡಿಎಸ್ ಕರೆ

ಮೂವರಿಗೂ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ನೀಡಿ ಸ್ಥಳೀಯ ಶಸ್ತ್ರಾಸ್ತ್ರ ಇಲಾಖೆಗೆ ನಿಯೋಜಿಸಲಾಗಿದ್ದು, ಅಲ್ಲಿ ಅವರಿಗೆ ಬಂದೋಬಸ್ತ್ ಕರ್ತವ್ಯವನ್ನು ನೀಡಲಾಗುವುದು ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ಅಂದಿನ ಉಪ ಪೊಲೀಸ್ ಆಯುಕ್ತರಾಗಿದ್ದ ಅಮಾನತುಗೊಂಡಿರುವ ಐಪಿಎಸ್ ಅಧಿಕಾರಿ ಸೌರಭ್ ತ್ರಿಪಾಠಿ ಇನ್ನೂ ತಲೆಮರೆಸಿಕೊಂಡಿದ್ದಾರೆ. ಮುಂಬೈನಲ್ಲಿ ಅಂಗಾಡಿಯಾಗಳು ಸಾಂಪ್ರದಾಯಿಕ ಕೊರಿಯರ್‍ಗಳಾಗಿದ್ದು, ವ್ಯಾಪಾರಿಗಳು ಕಳುಹಿಸುವ ಹಣವನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತಲುಪಿಸುತ್ತಾರೆ.

ಮತ್ತೊಂದು ಮೈಲಿಗಲ್ಲು ಸಾಧಿಸಲು ಇಸ್ರೋ ಸಿದ್ಧತೆ

ಇವರನ್ನು ಆಭರಣ ವ್ಯಾಪಾರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಕಳೆದ ಡಿಸೆಂಬರ್‍ನಲ್ಲಿ ದಕ್ಷಿಣ ಮುಂಬೈನ ಅಂಗಾಡಿಯಾ ಅಸೋಸಿಯೇಷನ್ ಸಲ್ಲಿಸಿದ ದೂರಿನ ಪ್ರಕಾರ ಸೌರಭ್ ತ್ರಿಪಾಠಿ ಅವರು ತಮ್ಮ ವ್ಯವಹಾರವನ್ನು ಸುಗಮವಾಗಿ ನಡೆಸಲು ಲಂಚವಾಗಿ ತಿಂಗಳಿಗೆ 10 ಲಕ್ಷ ರೂ.ಪಡೆಯುತ್ತಿದ್ದರು ಎಂದು ದೂರಲಾಗಿತ್ತು

Articles You Might Like

Share This Article