ಮುಂಬೈ ಮೇಲಿನ ಉಗ್ರ ದಾಳಿ ಇನ್ನು ಜೀವಂತ ; ಅಮೆರಿಕ

Social Share

ವಾಷಿಂಗ್ಟನ್,ಫೆ.7- ಭಾರತದ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ಭಯೋತ್ಪಾದಕರು 2008 ರಲ್ಲಿ ನಡೆಸಿದ ಕ್ರೂರ ದಾಳಿಯ ನೆನಪುಗಳು ಭಾರತ ಮತ್ತು ಅಮೆರಿಕ ದೇಶಗಳು ಇನ್ನು ಮರೆತಿಲ್ಲ ಎಂದು ಬಿಡೆನ್ ಆಡಳಿತ ಹೇಳಿಕೊಂಡಿದೆ.

ಆ ದಿನದ ಭಯಾನಕ ಚಿತ್ರಣವನ್ನು ನಾವಿನ್ನು ಮರೆತಿಲ್ಲ. ಅದರ ನೆನಪುಗಳು ಇನ್ನು ಜೀವಂತವಾಗಿವೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.

ಮುಂಬೈ ಹೋಟೆಲ್‍ಗಳ ಮೇಲಿನ ದಾಳಿ, ಪರಿಣಾಮವಾಗಿ ರಕ್ತಪಾತ, ಆ ದಿನ ಅನೇಕ ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡ ಘಟನೆ ಹಿಂದೆ ಇದ್ದ ಭಯೋತ್ಪಾದಕ ಗುಂಪುಗಳು ಅದನ್ನು ಸಂಘಟಿಸಲು ಸಹಾಯ ಮಾಡಿದವರನ್ನು ನಾವು ಸುಮ್ಮನೆ ಬಿಡಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಭೂಕಂಪಕ್ಕೆ 5,000 ಮಂದಿ ಬಲಿ, ಟರ್ಕಿ, ಸಿರಿಯಾಗೆ ಜಾಗತಿಕ ಸಹಾಯಹಸ್ತ

ದೇಶದ ಇತಿಹಾಸದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದು ಎಂದು ಪರಿಗಣಿಸಿದ್ದ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ 10 ಶಸ್ತ್ರಸಜ್ಜಿತ ಭಯೋತ್ಪಾದಕರು ನವೆಂಬರ್ 26, 2008 ರಂದು ನಡೆಸಿದ ನರಮೇಧದಲ್ಲಿ 166 ಜನರು ಸಾವನ್ನಪ್ಪಿದರು ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಪೆರುವಿನಲ್ಲಿ ಭೂ ಕುಸಿತು, 36 ಮಂದಿ ಸಾವು

ಒಂಬತ್ತು ಪಾಕಿಸ್ತಾನಿ ಭಯೋತ್ಪಾದಕರನ್ನು ಭಾರತೀಯ ಭದ್ರತಾ ಪಡೆಗಳು ಕೊಂದು ಹಾಕಿದ್ದವು. ಅಜ್ಮಲ್ ಕಸಬ್ ಮಾತ್ರ ಜೀವಂತವಾಗಿ ಸೆರೆ ಸಿಕ್ಕ ಭಯೋತ್ಪಾದಕ. ಸುದೀರ್ಘ ವಿಚಾರಣೆಯ ನಂತರ ನಾಲ್ಕು ವರ್ಷಗಳ ನಂತರ ನವೆಂಬರ್ 21, 2012 ರಂದು ಕಸಬ್‍ನನ್ನು ಗಲ್ಲಿಗೇರಿಸಲಾಗಿತ್ತು.

‘Mumbai, terrorist, attack, memories, still, vivid,’ says,US,

Articles You Might Like

Share This Article