ಈಜಲು ಸಮುದ್ರಕ್ಕಿಳಿಡಿದ್ದ ಇಬ್ಬರು ಮಕ್ಕಳು ನೀರುಪಾಲು

Social Share

ಮುಂಬೈ,ನ.19- ಈಜಲೆಂದು ಸಮುದ್ರಕ್ಕೆ ಇಳಿದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಮಹಾರಾಷ್ಟ್ರದ ವರ್ಲಿ ಬೀಚ್ ಸಮೀಪ ನಡೆದಿದೆ. ಕಾರ್ತಿಕ ಚೌಧರಿ(8), ಸವಿತಾ ಪಾಲ್(12) ಮೃತ ಮಕ್ಕಳು.

ವರ್ಲಿಯ ಕೋಳಿವಾಡದ ಹನುಮಾನ್ ಮಂದಿರ ವಿಕಾಸ ಬಡಾವಣೆಯ ಐದು ಮಕ್ಕಳು ನಿನ್ನೆ 4 ಗಂಟೆ ಸುಮಾರಿಗೆ ವರ್ಲಿ ಬೀಚ್‍ಗೆ ಈಜಲು ಹೋಗಿದ್ದರು. ಈ ವೇಳೆ ಅಲೆಯ ಸೆಳೆತಕ್ಕೆ ಸಿಲುಕಿ 5 ಜನ ಮುಳುಗಲು ಆರಂಭಿಸಿದ್ದಾರೆ. ಅಲ್ಲೇ ಇದ್ದಂತಹ ಸ್ಥಳೀಯರು, ಐವರಲ್ಲಿ ಮೂವರನ್ನು ರಕ್ಷಣೆ ಮಾಡಿದ್ದಾರೆ. ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಶದ್ದಾ ಕೊಲೆ ಮಾದರಿಯಲ್ಲೇ ಬಾಂಗ್ಲಾದಲ್ಲೂ ಪ್ರೇಯಸಿಯ ಭೀಕರ ಹತ್ಯೆ

ರಕ್ಷಣೆ ಮಾಡಿದ್ದ ಮೂವರು ಮಕ್ಕಳು ಅಸ್ವಸ್ಥರಾಗಿದ್ದು, ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚೇತರಿಸಿಕೊಂಡಿದ್ದಾರೆ.

Mumbai, Two, kids, die, Worli, beach,

Articles You Might Like

Share This Article