ಕೊಲೆಗೈದು, ನೇಣಿಗೆ ಶರಣಾದ ಯುವಕ

Spread the love

ಗದಗ,ಏ.28- ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಕೊಲೆ, ತಾನೂ ನೇಣಿಗೆ ಶರಣಾಗಿರುವ ಘಟನೆ  ಗದಗ ಗಜೇಂದ್ರಗಡ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ನಡೆದ ಘಟನೆ

ವಿಕಾಸ ಶೇಕಪ್ಪ ದೊಡ್ಡಮೇಟಿ (18) ಕೊಲೆಯಾದ ಯುವಕ. ಶೌಕತ್ ಅಲಿ ಕೊಪ್ಪಳ (35) ಕೊಲೆ ಮಾಡಿ ನೇಣಿಗೆ ಶರಣಾದ ವ್ಯಕ್ತಿ. ಶೌಕತ್ ಅಲಿ ಮತ್ತು ವಿಕಾಸ ಶೇಕಪ್ಪ ಇಬ್ಬರು ಸ್ನೇಹಿತರು.

ಕ್ಷುಲ್ಲಕ ಕಾರಣಕ್ಕೆ ಈ ಇಬ್ಬರ ನಡುವೆ ಕಲಹ ಉಂಟಾಗಿದೆ. ಈ ವೇಳೆ ಶೌಕತ್ ಅಲಿ ವಿಕಾಸ ಶೇಕಪ್ಪನನ್ನು ಕೊಲೆ ಮಾಡಿ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.