ದಾವಣಗೆರೆಯಲ್ಲಿ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷನ ಭೀಕರ ಹತ್ಯೆ

Social Share

ದಾವಣಗೆರೆ,ಜ.8- ಜಗಳೂರ ತಾಲೂಕು ಕನ್ನಡ ಸೇನೆಯ ಅಧ್ಯಕ್ಷ ರಾಮಕೃಷ್ಣ ಅವರನ್ನು ಕಳೆದ ರಾತ್ರಿ ಭೀಕರವಾಗಿ ಕೊಲೆ ಮಾಡಲಾಗಿದೆ. ಹೊಸಕೆರೆ ಡಾಬ ಬಳಿ ದುಷ್ಕರ್ಮಿಗಳ ಗುಂಪು ಏಕಾಏಕಿ ರಾಮಕೃಷ್ಣ ಅವರ ಮೇಲೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಪ್ರಶಾಂತ್ ಮತ್ತು ಆರ್ಜುನ್ ಎಂಬುವವರು ಪಾರ್ಟಿಗೆಂದು ಡಾಬಾ ಬಳಿ ಕರೆಸಿಕೊಂಡು ಮದ್ಯ ಸೇವಿಸಿದ್ದಾರೆ ಈ ನಡುವೆ ಮಾತಿಗೆ ಮಾತು ಬೆಳದು ಆತನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮ ಪಂಚಾಯತಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಇವರು ಹೋರಾಟಕ್ಕಿಳಿದಿದ್ದರು.ಇಬ್ಬರನ್ನು ಪೊಲೀಸರುಬಂದಿಸಿದ್ದಾರೆ.

Articles You Might Like

Share This Article