ಶಿವಮೊಗ್ಗ,ಫೆ.22- ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ನಿವಾಸಕ್ಕೆ ಡಾ.ಸಂತೋಷ ಭಾರತಿ ಶ್ರೀಪಾದ ಸ್ವಾಮೀಜಿ, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಅನೇಕ ಗಣ್ಯರು ಇಂದು ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ರಾಜ್ಯ ಸರ್ಕಾರ ಇಂದು ಯುವಕರನ್ನು ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದುತ್ವದ ಆಧಾರದ ಮೇಲೆ ಬಂದಿರುವ ಸರ್ಕಾರ ಹಿಂದೂ ಯುವಕರ ಮೇಲೆ ದಾಳಿ ನಡೆಯುತ್ತಿದ್ದರೂ ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ಸರ್ಕಾರದಿಂದ ರಕ್ಷಣೆಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ, ಬಿಜೆಪಿ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಸರ್ಕಾರದ ಗುಪ್ತಚರ ಇಲಾಖೆ ವಿಫಲವಾಗಿದೆ. ಘಟನೆ ಹಿಂದೆ ಇರುವವರನ್ನು ಬೇರು ಸಮೇತ ಕಿತ್ತುಹಾಕಬೇಕು. ಶಿವಮೊಗ್ಗದಲ್ಲಿ ಗಾಂಜಾ, ಡ್ರಗ್ಸ್ ನಿಲ್ಲಿಸಬೇಕೆಂದು ಹೇಳಿದರು.
ಡಾ.ಸಂತೋಷ್ ಭಾರತಿ ಶ್ರೀಪಾದ ಸ್ವಾಮೀಜಿ ಮಾತನಾಡಿ, ಇದನ್ನು ಸ್ವಾಭಿಮಾನವಾಗಿ ತೆಗೆದುಕೊಳ್ಳದೆ ಯುದ್ಧವಾಗಿ ತೆಗೆದುಕೊಳ್ಳಬೇಕಾಗಿದೆ. ನಾವು ಒಬ್ಬ ಯೋಧನನ್ನು ಕಳೆದುಕೊಂಡಿದ್ದೇವೆ. ಕೊಲೆ ಮಾಡಿದವರಿಗೆ ಶಿಕ್ಷೆ ಕೊಡಲು ಆಗಲಿಲ್ಲವೆಂದರೆ ನಾವು ಕೊಡುತ್ತೇವೆ. ಹರ್ಷ ನನ್ನ ಆತ್ಮೀಯ ಶಿಷ್ಯ. ಇಲ್ಲಿ ಸಂಘಟನೆ ಮಾಡುತ್ತಿದ್ದ ಆತನ ಕುಟುಂಬಕ್ಕೆ ಕನಿಷ್ಟ ಒಂದು ಕೋಟಿ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.
ನಿಮಗೆ ಮುಸ್ಲಿಮರು ಒಬ್ಬರೂ ಒಂದು ವೋಟು ಹಾಕುವುದಿಲ್ಲ. ಹಿಂದೂಗಳಿಂದಲೇ ಅಕಾರಕ್ಕೆ ಬಂದಿದ್ದೀರ. ಆದರೂ ಹಿಂದೂಗಳ ಮೇಲೆ ಹಲ್ಲೆ, ಹತ್ಯೆಯಾಗುತ್ತಿದೆ. ಇದು ಸರ್ಕಾರದ ಸಂಪೂರ್ಣ ವೈಫಲ್ಯ ಎಂದು ಹೇಳಿದರು.
ದೇಶದಲ್ಲಿ ಹಿಜಾಬ್ ಬ್ಯಾನ್ ಮಾಡಬೇಕು. ಹಿಜಾಬ್ ಕೂಡ ಹರ್ಷನ ಕೊಲೆಗೆ ಕಾರಣವಾಗಿದೆ. ಮತಾಂತರವನ್ನು ಹರ್ಷ ಪ್ರಬಲವಾಗಿ ವಿರೋಸಿದ್ದ. ಬಿಜೆಪಿಗೆ ಹಿಂದೂಗಳ ಶಕ್ತಿ ಬೇಕಾದಂತಿಲ್ಲ ಎಂದು ಗುಡುಗಿದರು. ಎಲ್ಲ ಶಾಸಕರು, ಸಚಿವರು ಹರ್ಷ ಕುಟುಂಬಕ್ಕೆ ಒಂದು ಲಕ್ಷ ರೂ. ಹಣ ನೀಡಬೇಕು ಎಂದು ಹೇಳಿದರು.
