ಸಿಗರೇಟ್ ವಿಚಾರಕ್ಕೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ

Social Share

ಬೆಂಗಳೂರು, ನ.14- ಸಿಗರೇಟ್ ವಿಚಾರವಾಗಿ ಉಂಟಾದ ಮಾತಿನ ಜಗಳ ಖಾಸಗಿ ಕಂಪೆನಿ ಮ್ಯಾನೇಜರ್ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬ್ಯಾಟರಾಯನಪುರದ ನಿವಾಸಿ ಸುದರ್ಶನ್ ರಾವ್ (26) ಮೃತಪಟ್ಟಿರುವ ಮ್ಯಾನೇಜರ್.

ಕಸುವನಹಳ್ಳಿಯಲ್ಲಿನ ಖಾಸಗಿ ಕಂಪೆನಿಯೊಂದರಲ್ಲಿ ಸುದರ್ಶನ್‍ರಾವ್ ಮ್ಯಾನೇಜರ್ ಆಗಿದ್ದರು. ಕಟ್ಟಡವೊಂದರ ಮೂರನೆ ಮಹಡಿಯಲ್ಲಿ ಕಂಪೆನಿಯಿದ್ದು, ನಿನ್ನೆ ಕಚೇರಿಗೆ ಬಂದಿದ್ದರು. ಕಟ್ಟಡದ ನೆಲಮಹಡಿಯಲ್ಲಿ ಬೇಕರಿಯಿದ್ದು, ಸಿಗರೇಟ್ ಬೇಕಾದಲ್ಲಿ ಸುದರ್ಶನ್ ಇಲ್ಲಿಗೆ ಬರುತ್ತಿದ್ದರು.

ನಿನ್ನೆ ಸಂಜೆ ಬೇಕರಿ ಮಾಲೀಕ ಕೆಲಸದ ನಿಮಿತ್ತ ಹೊರಗೆ ಹೋಗಬೇಕಾದ್ದರಿಂದ ಪಕ್ಕದಲ್ಲೇ ಇರುವ ಫೋಟೋ ಸ್ಟುಡಿಯೋ ಮಾಲೀಕ ರಾಮಚಂದ್ರರೆಡ್ಡಿ ಅವರಿಗೆ ಅಂಗಡಿ ನೋಡಿಕೊಳ್ಳುವಂತೆ ಹೇಳಿ ತೆರಳಿದ್ದಾರೆ.

4 ಐತಿಹಾಸಿಕ ಕೆರೆ ನುಂಗಿರುವವರ ವಿರುದ್ಧ ಕ್ರಮಕ್ಕೆ NR ರಮೇಶ್ ಆಗ್ರಹ

ಕಚೇರಿಯಲ್ಲಿದ್ದ ಸುದರ್ಶನ್ ಸಿಗರೇಟ್‍ಗಾಗಿ ಬಂದಾಗ ಯಾರೂ ಇಲ್ಲದಿರುವುದನ್ನು ಗಮನಿಸಿದ್ದಾರೆ. ಆ ವೇಳೆ ರಾಮಚಂದ್ರರೆಡ್ಡಿ ಅವರು ಬೇಕರಿಯವರು ಹೊರಗಡೆ ಹೋಗಿದ್ದಾರೆ ಎಂದು ಹೇಳಿದಾಗ, ನನಗೆ ಅವರು ಪರಿಚಯ, ಒಂದು ಸಿಗರೇಟ್ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ರಾಮಚಂದ್ರರೆಡ್ಡಿ ಅವರು ಅದಕ್ಕೆ ಅವಕಾಶ ಕೊಡದೆ ಬೇಕರಿಯವರು ಬಂದ ನಂತರ ತೆಗೆದುಕೋ ಎಂದು ಹೇಳಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಸುದರ್ಶನ್‍ರಾವ್ ಅವರು ಮೂರನೆ ಮಹಡಿಗೆ ತೆರಳಿ ಕಚೇರಿಯಲ್ಲಿ ಕುಳಿತುಕೊಂಡ ಕೆಲ ನಿಮಿಷದಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ.

ಹಿತಶತ್ರುಗಳ ಕಾಟದಿಂದ ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಸಿದ್ದರಾಮಯ್ಯ

ತಕ್ಷಣ ಕಚೇರಿಯಲ್ಲಿದ್ದ ಸಹೋದ್ಯೋಗಿಗಳು ಸುದರ್ಶನ್‍ರಾವ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

ಮಗನ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರಿಗೆ ಆಘಾತವಾಗಿದ್ದು, ತಮ್ಮ ಮಗನ ಸಾವು ಸಹಜವಲ್ಲ, ಇದು ಕೊಲೆ ಎಂದು ತಂದೆ ಬೆಳ್ಳಂದೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳ್ಳಂದೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬ್ರೇಕಿಂಗ್ : ನಂದಿನಿ ಹಾಲಿನ ಪರಿಷ್ಕರಣೆ, ರೈತರಿಗೆ ಬಂಪರ್

ಮೃತ ಸುದರ್ಶನ್ ರಾವ್ ಅವರ ಮೈಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬಂದ ನಂತರವೇ ಸಾವು ಹೇಗಾಗಿದೆ ಎಂಬುದು ಗೊತ್ತಾಗಲಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article