ಹುಟ್ಟುಹಬ್ಬದಂದೇ ಯುವಕನ ಭೀಕರ ಕೊಲೆ

Social Share

ಬೆಂಗಳೂರು, ಜು.17 – ವಾಹನಗಳ ನಂಬರ್ ಪ್ಲೇಟ್ ಸಿದ್ಧಪಡಿಸುವ ಕಲೆಗಾರನನ್ನ ಹುಟ್ಟು ಹಬ್ಬ ದಿನದಂದೇ ದುಷ್ಕರ್ಮಿಗಳು ಹಲ್ಲೆ ನಡೆಸಿ ಕಲ್ಲಿನಿಂದ ತಲೆ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ನೈಸ್ ರಸ್ತೆ, ಕೋನ ಸಂದ್ರದಲ್ಲಿ ನಡೆದಿದೆ.

ನಿನ್ನೆ ಮಧ್ಯಾಹ್ನ 2 ಗಂಟೆ ಸಂದರ್ಭದಲ್ಲಿ ಸ್ನೇಹಿತರೊಂದಿಗೆ ಹುಟ್ಟು ಹಬ್ಬದ ಪಾರ್ಟಿ ಮಾಡಲು ಮನೆಯಿಂದ ಹೊರಗೆ ಹೋಗಿದ್ದ ಕೆಂಗೇರಿಯ ಹೆಮಗೆಪುರ ಎಚ್ ಗೊಲ್ಲಹಳ್ಳಿಯ ನಿವಾಸಿ ಹೇಮಂತ್ ಕುಮಾರ್ ಅಲಿಯಾಸ್ ದಿಲೀಪ್ (26) ಭೀಕರವಾಗಿ ಕೊಲೆಯಾಗಿದ್ದಾನೆ.

ಇಂದು ಬೆಳಗ್ಗೆ ಸಾರ್ವಜನಿಕರನ್ನು ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ನೋಡಿದಾಗ ಯುವಕನ ತಲೆಯನ್ನು ಭೀಕರವಾಗಿ ಜಜ್ಜಿ ಗುರುತು ಸಿಗದಂತಾಗಿತ್ತು. ಆತನ ಕೈನಲ್ಲಿದ್ದ ಹಚ್ಚೆಗುರುತಿನ ಆಧಾರದ ಮೇಲೆ ಸ್ಥಳೀಯರು ವಿಚಾರಿಸಿದಾಗ ಆತ ಹೆಮಗೆಪುರದ ಹೇಮಂತ್ ಕುಮಾರ್ ಎಂದು ತಿಳಿದುಬಂದಿದೆ.

ನಿನ್ನೆ ಹೇಮಂತ್ ಕುಮಾರ್‍ನ ಹುಟ್ಟುಹಬ್ಬವಾದ್ದರಿಂದ ಮನೆಯೊಂದಿಗೆ ಸಂಭ್ರಮದಲ್ಲಿದ್ದ ಮಧ್ಯಾಹ್ನ 2 ಗಂಟೆ ಸಂದರ್ಭದಲ್ಲಿ ನನ್ನ ಸ್ನೇಹಿತರನ್ನು ಭೇಟಿ ಮಾಡಲು ಹೋಗುತ್ತಿದ್ದೇನೆ ಎಂದಾಗ ಆತನ ಅಕ್ಕ ಡ್ರಾಪ್ ಮಾಡಿದ್ದಾರೆ. ರಾತ್ರಿ 10 ಗಂಟೆವರೆಗೂ ಆತನ ಮೊಬೈಲ್ ಫೋನ್ ಆಕ್ಟಿವ್ ಆಗಿತ್ತು ಎಂದು ನಂತರ ಸಿಗುತ್ತಿರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಆದರೆ ನಿನ್ನೆ ರಾತ್ರಿ ಆತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ನಂತರ ಗುರುತು ಸಿಗದಂತೆ ಮುಖವನ್ನು ಜಜ್ಜಿ ಹಾಕಿ ನೈಸ್ ರಸ್ತೆಗೆ ಹೊಂದಿಕೊಂಡಿರುವ ಕೋನಸಂದ್ರದ ಅಂಡರ್‍ಬ್ರಿಡ್ಜ್ ಕೆಳಗಡೆ ಶವವನ್ನು ಎಸೆದು ಪರಾರಿಯಾಗಿದ್ದಾರೆ.
ಕುಟುಂಬಸ್ಥರು ಶವವನ್ನು ಗುರುತಿಸಿದ್ದು ಆಕ್ರಂಧನ ಮುಗಿಲು ಮುಟ್ಟಿದೆ. ಪರಿಚಿತರಿಂದಲೇ ಈ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಕೆಂಗೇರಿ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Articles You Might Like

Share This Article