ಚಿತ್ರದುರ್ಗ, ಸೆ.1- ಚಿತ್ರದುರ್ಗದ ಮುರುಘಾ ಶರಣರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಚಿತ್ರದುರ್ಗದ ಒಂದನೆ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ವಾದಿ-ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಕಳೆದ ಐದು ದಿನಗಳ ಹಿಂದೆ ಬೆಳಕಿಗೆ ಬಂದ ಪ್ರಕರಣದಲ್ಲಿ ಶರಣರು ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು, ಮಧ್ಯಂತರ ಜಾಮೀನು ಮತ್ತು ಸಿಆರ್‍ಪಿಸಿ ಸೆಕ್ಷನ್ 91ರ ಅಡಿ ವಿನಾಯಿತಿ ಕೇಳಿ ಅರ್ಜಿ ಸಲ್ಲಿಸಿದ್ದಾರೆ. ಇದರ ನಡುವೆ ಪ್ರಕರಣವನ್ನು ಬಯಲಿಗೆ ತಂದ ಮೈಸೂರಿನ ಒಡನಾಡಿ ಸಂಸ್ಥೆ ಕೂಡ ವಾದಿಯಾಗಿ ಸೇರ್ಪಡೆಯಾಗಿದೆ. ಬಾಲಕಿಯರಿಗೆ ಕಾನೂನಿನ ನೆರವು ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಕಾರದಿಂದಲೂ ವಕೀಲರ ನೇಮಕವಾಗಿದೆ.
ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾೀಶರು ಇಂದು ಜಾಮೀನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡು, ಆಕ್ಷೇಪಣೆ ಸಲ್ಲಿಸಲು ಒಂದು ದಿನದ ಕಾಲಾವಕಾಶ ನೀಡಿದೆ. ನಾಳೆ ನಡೆಯುವ ವಿಚಾರಣೆ ವೇಳೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಪ್ರತಿವಾದಿಗಳಾದ ಶರಣರು ಸೇರಿ ಆರೋಪಿಗಳಿಗೆ ಮತ್ತು ಸಂತ್ರಸ್ಥರಿಗೆ ನೋಟಿಸ್ ನೀಡಲಾಗಿದೆ.
ಶರಣರ ಪರ ವಕೀಲ ವಿಶ್ವನಾಥಯ್ಯ ಅವರು ನಾಳೆ ಆಕ್ಷೇಪಣೆ ಸಲ್ಲಿಸುವುದಾಗಿ ಹೇಳಿದ್ದಾರೆ.ಜಾಮೀನಿಗೆ ತಕರಾರುವೊಡ್ಡಿ ನಾಳೆ ತಾವು ಆಕ್ಷೇಪಣೆ ಸಲ್ಲಿಸುವುದಾಗಿ ಒಡನಾಡಿ ಸಂಸ್ಥೆಯ ಪರ ವಕೀಲ ಶ್ರೀನಿವಾಸ್ ತಿಳಿಸಿದ್ದಾರೆ. ಶರಣರು ಜಾಮೀನಿಗಾಗಿ ಹಲವು ಕಾರಣಗಳನ್ನು ನೀಡಿದ್ದಾರೆ.
ಜಾಮೀನು ಏಕೆ ನೀಡಬಾರದು ಎಂದು ನಾವು ನಾಳೆ ಆಕ್ಷೇಪಣೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಈ ಮೂಲಕ ಪ್ರಕರಣ ಮಹತ್ವದ ತಿರುವು ಪಡೆದಿದ್ದು ಕಾನೂನು ಸಮರ ಆರಂಭವಾಗಿದೆ.ಈ ನಡುವೆ ಇದೇ ಪ್ರಕರಣಕ್ಕೆ ಸಂಬಂಸಿದಂತೆ ಮುರುಘಾ ಮಠದ ಆಡಳಿತಾಕಾರಿಯಾಗಿದ್ದ ಬಸವರಾಜನ್ ವಿರುದ್ಧವೂ ಪ್ರತಿದೂರು ದಾಖಲಾಗಿದ್ದು ಅವರು ಜಾಮೀನಿಗೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.