ಶರಿಯತ್ ಕಾನೂನಿನಂತೆ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ : ಮದ್ರಾಸ್ ಹೈಕೋರ್ಟ್

Social Share

ಚೆನ್ನೈ,ಫೆ.2- ವಿಚ್ಛೇದನ ಪಡೆಯಲು ಮುಸ್ಲೀಂ ಮಹಿಳೆಯರು ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಬೇಕೇ ವಿನಃ ಶರಿಯತ್ ಕೌನ್ಸಿಲ್‍ನಂತಹ ಖಾಸಗಿ ಸಂಸ್ಥೆಗಳನಲ್ಲ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಯಾವುದೇ ಖಾಸಗಿ ಸಂಸ್ಥೆಗಳು ಖುಲಾ ( ಪತ್ನಿಯಿಂದ ವಿಚ್ಛೇದನ) ಕೊಡಿಸಲು ಸಾಧ್ಯವಿಲ್ಲ. ಅವರು ನ್ಯಾಯಾಲಯಗಳು ಅಥವಾ ವಿವಾದಗಳ ಮಧ್ಯಸ್ಥಗಾರರಲ್ಲ. ನ್ಯಾಯಾಲಯಗಳು ಸಹ ಅಂತಹ ಅಭ್ಯಾಸದ ಬಗ್ಗೆ ಅಸಮಾಧಾನವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಖಾಸಗಿ ಸಂಸ್ಥೆಗಳು ನೀಡುವ ಇಂತಹ ಖುಲಾ ಪ್ರಮಾಣಪತ್ರಗಳು ಅಮಾನ್ಯವಾಗಿದೆ. ಖುಲಾ ಎನ್ನುವುದು ಪತಿಗೆ ನೀಡುವ ತಲಾಖ್‍ನಂತೆಯೇ ಹೆಂಡತಿಗೆ ನೀಡುವ ವಿಚ್ಛೇದನದ ರೂಪವಾಗಿದೆ. ತನ್ನ ಪತ್ನಿಗೆ ನೀಡಲಾದ ಖುಲಾ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಪ್ರಾರ್ಥಿಸಿದ ವ್ಯಕ್ತಿಯೊಬ್ಬನ ರಿಟ್ ಅರ್ಜಿಯ ತೀರ್ಪಿನಲ್ಲಿ, ನ್ಯಾಯಮೂರ್ತಿ ಸಿ ಸರವಣನ್ ಅವರು 2017 ರಲ್ಲಿ ಶರೀಯತ್ ಕೌನ್ಸಿಲï, ತಮಿಳುನಾಡು ತೌಹೀದ್ ಜಮಾತ್ ಇಲ್ಲಿ ನೀಡಿದ್ದ ದೋಷಪೂರಿತ ಪ್ರಮಾಣಪತ್ರವನ್ನು ರದ್ದುಗೊಳಿಸಿದ್ದಾರೆ.

ಉಕ್ರೇನ್ ಜನವಸತಿ ಕಟ್ಟಡದ ಮೇಲೆ ರಷ್ಯಾ ರಾಕೆಟ್ ದಾಳಿ, ಮೂವರ ಸಾವು

ಆದ್ದರಿಂದ, ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್ ) ಅರ್ಜಿ ಕಾಯಿದೆ, 1937 ರ ಅಡಿಯಲ್ಲಿ ಮಾನ್ಯತೆ ಪಡೆದಿರುವ ಖುಲಾ ಮೂಲಕ ವಿವಾಹವನ್ನು ವಿಸರ್ಜಿಸಲು ಮುಸ್ಲಿಂ ಮಹಿಳೆ ತನ್ನ ಅವಿನಾಭಾವ ಹಕ್ಕುಗಳನ್ನು ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸುವ ಮೂಲಕ ಮುಕ್ತವಾಗಿದ್ದರೂ, ಅದು ಸ್ವಯಂ ಘೋಷಿತ ಸಂಸ್ಥೆಯ ಮುಂದೆ ಇರುವಂತಿಲ್ಲ.

ಸದನವನ್ನು ನಗೆಗಡಲಲ್ಲಿ ತೇಲಿಸಿದ ನಿರ್ಮಲಾ ಮಾತು

ಜಮಾತ್‍ನ ಕೆಲವು ಸದಸ್ಯರ. ಶರಿಯತ್ ಕೌನ್ಸಿಲ್ ನೀಡಿದ ಖುಲಾ ಪ್ರಮಾಣಪತ್ರವನ್ನು ರದ್ದುಗೊಳಿಸಲಾಗಿದೆ. ತಮ್ಮ ವಿವಾದಗಳನ್ನು ಬಗೆಹರಿಸಿಕೊಳ್ಳಲು ತಮಿಳುನಾಡು ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಅರ್ಜಿದಾರರು ಮತ್ತು ಅವರ ಪತ್ನಿಗೆ ಹೈಕೋರ್ಟ್ ಸೂಚಿಸಿದೆ.

Muslim Women, Approach, Family Court, Divorce, Madras High Court,

Articles You Might Like

Share This Article