ಜೆಡಿಎಸ್ ನಲ್ಲಿ ಮುಸ್ಲಿಮರು ಸಿಎಂ ಆಗಬಹುದು : ಹೆಚ್‌ಡಿಕೆ

Social Share

ಕೋಲಾರ,ನ.22- ಅವಕಾಶ ಒದಗಿ ಬಂದರೆ ಮುಸ್ಲಿಂ ಸಮುದಾಯದವರು ಮುಖ್ಯ ಮಂತ್ರಿ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ ನಾನೆ ಸಿಎಂ ಆಗಬಹುದು ಅಂತ ಹೇಳಿದ್ದಾರೆ.

ಮುಸಲ್ಮಾನರಿಗೆ ನಮ್ಮಲ್ಲಿ ಸಿಎಂ ಆಗುವ ಅವಕಾಶ ಸಿಗಬಹುದು. ಅವಕಾಶ ಸಿಕ್ಕರೆ ಮುಸ್ಲಿಂರು ಯಾಕೆ ಸಿಎಂ ಆಗಬಾರದು ಎಂದು ಪ್ರಶ್ನಿಸಿದರು. ಮಹಿಳೆಯರ ಕಲ್ಯಾಣಕ್ಕೆ ಜೆಡಿಎಸ್ ಬದ್ಧವಾಗಿದ್ದು, ಅಧಿಕಾರಕ್ಕೆ ಬಂದರೆ ಮಹಿಳೆಯರನ್ನು ಉಪ ಮುಖ್ಯಮಂತ್ರಿ ಮಾಡಲು ಸಿದ್ಧವಿದ್ದೇವೆ.

ಮಹಿಳೆಯರ ಸಬಲೀಕರಣ, ಅವರ ಏಳಿಗೆಗಾಗಿ ಮಹಿಳಾ ಡಿಸಿಎಂ ಅಗತ್ಯವಿದೆ ಎಂದರೆ ಅದಕ್ಕೂ ಸಿದ್ದ. ಅವರೇನು ನಮ್ಮವರು ಅಲ್ವೆ ಎಂದರು. ಕಾಟಾಚಾರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಇದೆ. ಮಕ್ಕಳ ಪೌಷ್ಟಿಕಾಂಶದ ಆಹಾರದಲ್ಲೂ ದುಡ್ಡು ನುಂಗಿದ್ದಾರೆ.

ಮೋಜಿನ ಜೀವನಕ್ಕಾಗಿ ಕಳ್ಳತನ ಮಾಡುತ್ತಿದ್ದವನ ಬಂಧನ

ಇತ್ತ ಪ್ರಚಾರಕ್ಕೆ ಮಹಿಳಾ ಸಬಲೀಕರಣ ಅಂತಾರೆ. ಆದರೆ, ಮಹಿಳೆಯರು ಇನ್ನೂ ಸಂಕಷ್ಟದಿಂದ ಪಾರಾಗಿಲ್ಲ. ವೇದಿಕೆ ಮೇಲೆ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಬಿಟ್ಟರೆ ನಾನೇ ಉದ್ಧಾರ ಮಾಡಿದ್ದು ಅಂತಾ ಭಾಷಣ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಟಾಂಗ್ ಕೊಟ್ಟರು.

ಏಕಾಏಕಿ ದಲಿತ ಉಪಮುಖ್ಯಮಂತ್ರಿ ಘೋಷಣೆ ಮಾಡಿದರು ಅಂತ ಚರ್ಚೆ ಆಗುತ್ತಿದೆ. ನಿನ್ನೆ ದಲಿತರು ನನ್ನನ್ನು ಭೇಟಿಯಾಗಿ ದಲಿತರ ನಿರ್ಲಕ್ಷ್ಯವಾಗುತ್ತಿರುವ ಬಗ್ಗೆ ಯುವಕರು ಪ್ರಸ್ತಾಪಿಸಿದರು ಅದಕ್ಕೆ ದಲಿತರಿಗೆ ಉಪಮುಖ್ಯಮಂತ್ರಿ ಮಾಡುವುದಾಗಿ ಹೇಳಿದ್ದೇನೆ. ಇದರಲ್ಲಿ ರಾಜಕೀಯ ಉದ್ದೇಶ ಇಲ್ಲ ಎಂದು ಸಮರ್ಥಿಸಿಕೊಂಡರು.

ನಿನ್ನೆ ಓರ್ವ ರೈತ ಧನಂಜಯ್ಯ ಕುಮಾರ್ ಅವರು ರೈತ ಮಕ್ಕಳಿಗೆ ವಧು ಸಿಗುತ್ತಿಲ್ಲ ಎಂಬ ಮನವಿ ಕೊಟ್ಟಿದ್ದರು. ಹೀಗಾಗಿ ರೈತರಿಗೆ ಅನುಕೂಲ ಆಗುವ ರೈತ ಚೈತನ್ಯಎಂಬ ಯೋಜನೆ ತರುತ್ತೇವೆ ಎಂದರು.

ನಿನ್ನೆ ಶಾಲಾ ಮಕ್ಕಳು ಬಂದು ನೀವು ಮುಖ್ಯಮಂತ್ರಿ ಆಗಬೇಕು ಅಂದರು. ಆರತಿ ಮಾಡಿದಾಗ ದಕ್ಷಣೆ ಕೊಟ್ಟಾಗ ದುಡ್ಡು ಬೇಡ ಒಳ್ಳೆ ಶಾಲೆ ಮಾಡಿ ಅಂತ ಮಕ್ಕಳು ಹೇಳಿದರು. ಮುಂದೆ ದುಡ್ಡು ಕೊಟ್ಟು ಮತ ಪಡೆಯೋದನ್ನು ಜನರೇ ನಿಷೇಧ ಮಾಡುತ್ತಾರೆ. ಐದು ವರ್ಷಗಳ ಆಡಳಿತ ಸಿಕ್ಕರೆ ಇನ್ಮುಂದೆ ಜನರು ಹಣವನ್ನು ಪಡೆಯದ ರೀತಿಯಲ್ಲಿ ನಾಡನ್ನು ಅಭಿವೃದ್ಧಿಪಡಿಸುವ ಉದ್ದೇಶವಿದೆ ಎಂದರು.

ಒಬ್ಬರು ಮೂರು ತಲೆ ಮಾರಿಗಾಗುವಷ್ಟು ದುಡ್ಡು ಮಾಡಿದ್ದಾರೆ ಅಂತ ಹೇಳಿದ್ದರು. ಈ ಹಣ ಯಾವುದು ಅಂದರೆ, ಕೆ.ಸಿ. ವ್ಯಾಲಿ, ಎತ್ತಿನಹೊಳೆ ಯೋಜನೆಯ ಹಣ. ಚುನಾವಣೆ ಮುಗಿಯುವುದರೊಳಗೆ ಎತ್ತಿನ ಹೊಳೆ ಮುಗಿಸಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

ಚೀನಾದಲ್ಲಿ ಮತ್ತೆ ಕೋವಿಡ್ ಹೆಚ್ಚಳ, ಶಾಲಾ-ಕಾಲೇಜು ಬಂದ್..!

ಪ್ರಸ್ತುತ ಚುನಾವಣೆ ಎಲ್ಲರಿಗೂ ಬೇಸರ ತರಿಸಿದೆ.ಜನರು ಹಣ ಪಡೆಯುವುದನ್ನು ತಿರಸ್ಕರಿಸಬೇಕು. ನನಗೆ ಅಕಾರ ಕೊಟ್ಟರೆ ಉತ್ತಮ ಚುನಾವಣಾ ವ್ಯವಸ್ಥೆಯನ್ನು ಜಾರಿ ಮಾಡುತ್ತೇನೆ. ಕಾಂಗ್ರೆಸ್‍ನಲ್ಲಿ ಡಾ. ಜಿ.ಪರಮೇಶ್ವರ್ ಅತ್ತು ಕರೆದು ಡಿಸಿಎಂ ಆದರೂ ಅಕಾರ ಚಲಾವಣೆ ಮಾಡೋಕೆ ಆಗಲ್ಲ. ಉಪ ಮುಖ್ಯಮಂತ್ರಿಯಾಗಿದ್ದ ಗೋವಿಂದ ಕಾರಜೋಳ ಅವರದು ಅದೇ ಪರಿಸ್ಥಿತಿ. ದೆಹಲಿಯಿಂದ ಲಕೋಟೆ ಬರಬೇಕು ಎಂದು ಟೀಕಿಸಿದರು.

ಹಲ್ಲೆ ಮಾಡಿ ಪರಾರಿಯಾಗಿದ್ದ ದರೋಡೆಕೋರನ ಬಂಧನ

ಮಂಗಳೂರು ಬಾಂಬ್ ಸ್ಪೋಟದ ಬಗ್ಗೆ ಗೃಹ ಇಲಾಖೆ ವೈಫಲ್ಯ ಇಲ್ಲ ಅಂತ ಹೇಳಿಲ್ಲ. ವಿಶ್ವಗುರು ಎನಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಪುಲ್ವಾಮ ದಾಳಿ ಆಯ್ತು.ಇದೇನಾ ನಿಮ್ಮ ಆಡಳಿತನಾ ಎಂದು ಹೇಳಿದ್ದ. ನೀವೊಂದು ಸಮಾಜಕ್ಕೆ ಪ್ರೇರೇಪಣೆ ಕೊಟ್ಟರೆ ಇನ್ನೊಬ್ಬರು ಬೇರೊಂದು ಸಮಾಜಕ್ಕೆ ಪ್ರೇರಣೆ ಕೊಡುತ್ತಾರೆ. ಇದೇನಾ ನಿಮ್ಮ ಆಡಳಿತ ಎಂದು ಪ್ರಶ್ನಿಸಿದರು.

Muslims, Chief Minister, JDS, Karnataka, hd kumaraswamy,

Articles You Might Like

Share This Article