ರಾಯಪುರ,ಫೆ.25- ಎಐಸಿಸಿ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಿರುವ ಸೋನಿಯಾ ಗಾಂಧಿ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದಾರೆ. ಛತ್ತಿಸ್‍ಗಡದ ರಾಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ನ 85ನೇ ಸರ್ವಸದಸ್ಯರ ಅಧಿವೇಶನದಲ್ಲಿ ಮಾತನಾಡಿರುವ ಅವರು, ಸಂಕಷ್ಟ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ವ್ಯತಿಗತ ಹಿತಾಸಕ್ತಿಗಳನ್ನು ಬದಿಗಿಟ್ಟು ಕೆಲಸ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಇಡೀ ದೇಶ ಸವಾಲಿನ ಸಮಯವನ್ನು ಎದುರಿಸುತ್ತಿದೆ. ಬಿಜೆಪಿ ಮತ್ತು ಆರ್‍ಎಸ್‍ಎಸ್ ಸಂಘಟನೆಗಳು ದೇಶದ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡು ಬುಡಮೇಲು ಮಾಡಿವೆ. ಕೆಲವು ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟು ದೇಶದ ಆರ್ಥಿಕ ವಿನಾಶಕ್ಕೆ ಮುನ್ನುಡಿ ಬರೆಯಲಾಗಿದೆ ಎಂದು ಆರೋಪಿಸಿದರು.
ತಮ್ಮ ರಾಜಕೀಯ ವೃತ್ತಿಜೀವನದ ಕುರಿತು ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯೊಂದಿಗೆ ತಮ್ಮ ಇನಿಂಗ್ಸ್ ಮುಕ್ತಾಯಗೊಳ್ಳಬಹುದು ಎಂದು ಹೇಳುವ ಮೂಲಕ ರಾಜಕೀಯ ನಿವೃತ್ತಿಯ ಇಂಗಿತ ವ್ಯಕ್ತಪಡಿಸಿದರು.
ಒಂದೇ ಕುಟುಂಬದ ನಾಲ್ವರ ಕಗ್ಗೊಲೆ, ಬೆಚ್ಚಿಬಿದ್ದ ಭಟ್ಕಳ
2004 ಮತ್ತು 2009 ರಲ್ಲಿ ಗೆಲುವುಗಳು ಡಾ.ಮನಮೋಹನ್ ಸಿಂಗ್ ಅವರ ಸಮರ್ಥ ನಾಯಕತ್ವದ ಜೊತೆಗೆ ನನಗೆ ವೈಯಕ್ತಿಕ ತೃಪ್ತಿಯನ್ನು ನೀಡಿತು. ಆದರೆ ನನಗೆ ಹೆಚ್ಚು ತೃಪ್ತಿ ನೀಡಿದ್ದು, ಭಾರತ್ ಜೋಡೋ ಯಾತ್ರೆ. ಇದು ಕಾಂಗ್ರೆಸ್‍ಗೆ ಮಹತ್ವದ ತಿರುವು ನೀಡಿದೆ. ಈ ಯಾತ್ರೆಯೊಂದಿಗೆ ನನ್ನ ರಾಜಕೀಯ ಇನ್ನಿಂಗ್ಸ್ ಕೂಡ ಮುಕ್ತಾಯವಾಗಬಹುದು ಎಂದು ಸೂಚ್ಯವಾಗಿ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿ 24 ವರ್ಷಗಳಿಗೂ ಹೆಚ್ಚು ಕಾಲ ಕೆಲಸ ಮಾಡಿದ ಸೋನಿಯಾ ಗಾಂಧಿ ಕಳೆದ ವರ್ಷ ಹುದ್ದೆಯಿಂದ ಕೆಳಗಿದರು. ಪಕ್ಷದಲ್ಲಿ ನಡೆದ ಸಾಂಸ್ಥಿಕ ಚುನಾವಣೆಯಲ್ಲಿ ಕರ್ನಾಟಕದವರಾದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ನಡುವೆ ಸೋನಿಯಾ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ 3500 ಕಿಲೋ ಮೀಟರ್ ಭಾರತ ಜೋಡೋ ಯಾತ್ರೆ ನಡೆಸಿದರು.
ಈ ಯಾತ್ರೆಯಲ್ಲಿ ಎರಡು ಬಾರಿ ಸೋನಿಯಾ ಗಾಂಧಿ ಭಾಗವಹಿಸಿದ್ದರು. ಯಾತ್ರೆಯುದ್ಧಕ್ಕೂ ರಾಹುಲ್‍ಗಾಂಧಿಗೆ ಸಿಕ್ಕ ಬೆಂಬಲ ಪಕ್ಷಕ್ಕೆ ಹೊಸ ಚೈತನ್ಯ ನೀಡಿದೆ. ಅದನ್ನು ಉಲ್ಲೇಖಿಸಿರುವ ಸೋನಿಯಾ ಗಾಂಧಿ ಪಕ್ಷಕ್ಕೆ ಇದು ಮಹತ್ವದ ತಿರುವು ನೀಡಲಿದೆ ಎಂದಿದ್ದಾರೆ. ತಮ್ಮ ರಾಜಕೀಯ ಜೀವನವೂ ಭಾರತ್ ಜೋಡೋ ಯಾತ್ರೆಯೊಂದಿಗೆ ಕೊನೆಯಾಗಲಿದೆ ಎಂದಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಇನ್ನೆಷ್ಟು ಶಿಕ್ಷಕರ ಹೆಣ ಬೇಕು..? ” ಸಿದ್ದರಾಮಯ್ಯ ಆಕ್ರೋಶ
ಪ್ರಸ್ತುತ ಸಂಸದರೂ ಹಾಗೂ ಯುಪಿಎ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಸೋನಿಯಾ ಗಾಂ ಈ ಮೂಲಕ ಮುಂದಿನ ಚುನಾವಣೆಯಲ್ಲಿ ಸ್ರ್ಪಸದಿರುವ ಮುನ್ಸೂಚನೆ ನೀಡಿದ್ದಾರೆ ಹಾಗೂ ಪಕ್ಷದ ಚಟುವಟಿಕೆಗಳಿಂದ ದೂರ ಸರಿಯುವ ಮಾತನಾಡಿದ್ದಾರೆ ಎಂಬ ವಿಶ್ಲೇಷಣೆ ನಡೆಯುತ್ತಿದೆ.
ಎರಡು ಬಾರಿ ಪ್ರಧಾನಿ ಹುದ್ದೆ ಮನೆ ಬಾಗಿಲಿಗೆ ಬಂದರೂ ತಿರಸ್ಕರಿಸುವ ಮೂಲಕ ರಾಜಕಾರಣದಲ್ಲಿ ಸೋನಿಯಾ ಗಾಂಧಿ ತ್ಯಾಗದ ಐಕಾನ್ ಆಗಿದ್ದಾರೆ. ವಿದೇಶಿ ಮಹಿಳೆ ಎಂಬ ಟೀಕೆಯ ಹೊರತಾಗಿಯೂ ಅವರು ಪಕ್ಷಕ್ಕೆ ಈವರೆಗೂ ಆಧಾರ ಸ್ಥಂಬವಾಗಿ ನಿಂತಿದ್ದರು.
My innings, could, conclude, Bharat Jodo Yatra, Sonia Gandhi,