ಅದಾನಿ, ಅಂಬಾನಿ ಸಮಯಕ್ಕಿಂತ ನನ್ನ ಸಮಯ ಮೌಲ್ಯಯುತವಾಗಿದೆ : ರಾಮ್‍ದೇವ್

Social Share

ಪಣಜಿ,ಫೆ.20- ಕಾರ್ಪೊರೇಟ್ ದಿಗ್ಗಜರಾದ ಅದಾನಿ,ಅಂಬಾನಿ, ಟಾಟಾ, ಬಿರ್ಲಾ ಮತ್ತಿತರರ ಸಮಯಕ್ಕಿಂತ ನನ್ನ ಸಮಯ ಹೆಚ್ಚು ಮೌಲ್ಯಯುತವಾಗಿದೆ ಎಂದು ಯೋಗ ಗುರುರಾಮ್‍ದೇವ್ ಅಭಿಪ್ರಾಯಪಟ್ಟಿದ್ದಾರೆ.

ಉದ್ಯಮಿಗಳಾಗಿರುವ ಅದಾನಿ, ಅಂಬಾನಿ ಮತ್ತಿತರ ಕೈಗಾರಿಕೋದ್ಯಮಿಗಳು ತಮ್ಮ ಶೇ.99 ಸಮಯವನ್ನು ಸ್ವಹಿತಾಸಕ್ತಿಗಾಗಿ ಬಳಸುತ್ತಾರೆ. ಆದರೆ, ನಾನು ನನ್ನ ಮೌಲ್ಯಯುತ ಸಮಯವನ್ನು ಸಾಮಾನ್ಯ ಜನರ ಒಳಿತಿಗಾಗಿ ಬಳಕೆ ಮಾಡುತ್ತಿದ್ದೇನೆ ಎಂದು ರಾಂದೇವ್ ಹೇಳಿದ್ದಾರೆ.

ಓವೈಸಿ ಮನೆ ಮೇಲೆ ಕಲ್ಲು ತೂರಾಟ

ಗೋವಾದಲ್ಲಿ ಆಯೋಜಿಸಲಾಗಿದ್ದ ಆಚಾರ್ಯ ಬಾಲಕೃಷ್ಣ ಅವರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಹರಿದ್ವಾರದಿಂದ ಮೂರು ದಿನಗಳ ಕಾಲ ಇಲ್ಲಿಗೆ ಬಂದಿದ್ದೇನೆ. ನನ್ನ ಸಮಯದ ಮೌಲ್ಯವು ಅದಾನಿ, ಅಂಬಾನಿ, ಟಾಟಾ ಮತ್ತು ಬಿರ್ಲಾ ಅವರ ಸಮಯಕ್ಕಿಂತ ಮೌಲ್ಯಯುತವಾಗಿದೆ ಎಂದರು.

ತಮ್ಮ ವೃತ್ತಿಪರ ಆಡಳಿತ, ಪಾರದರ್ಶಕ ನಿರ್ವಹಣೆ ಮತ್ತು ಹೊಣೆಗಾರಿಕೆಯಿಂದಾಗಿ ಅನಾರೋಗ್ಯದ ಕಂಪನಿಯಿಂದ ಪತಂಜಲಿಯನ್ನು ಈ ಹಣಕಾಸು ವರ್ಷದಲ್ಲಿ 40,000 ಕೋಟಿ ರೂ.ಗಳ ವಹಿವಾಟು ಹೆಚ್ಚಿಸಲು ಬಾಲಕೃಷ್ಣ ಅವರ ಸೇವೆ ಶ್ಲಾಘನೀಯ ಎಂದರು.

ಛತ್ತೀಸ್‍ಗಢ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ಇಡಿ ದಾಳಿ

ಪತಂಜಲಿಯಂತಹ ಸಾಮ್ರಾಜ್ಯಗಳನ್ನು ರಚಿಸುವ ಮೂಲಕ ಭಾರತವನ್ನು ‘ಪರಮ ವೈಭವಶಾಲಿ’ ರಾಷ್ಟ್ರವನ್ನಾಗಿ ಮಾಡುವ ಕನಸನ್ನು ಸಾಧಿಸಬಹುದು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

My Time, More Valuable, Adani, Tata, Birla, Baba Ramdev,

Articles You Might Like

Share This Article