ಅರಮನೆ ಸ್ವಚ್ಛತೆ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವರು

Spread the love

ಮೈಸೂರು, ಅ.4-ಜಂಬೂ ಸವಾರಿ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಅರಮನೆಯಲ್ಲಿನ ಸಿದ್ಧತೆಗಳು ಹಾಗೂ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು.
ಅರಮನೆ ಸುತ್ತ ಆಸನಗಳ ವ್ಯವಸ್ಥೆ, ಸ್ವಚ್ಛತೆ ಬಗ್ಗೆ ಖುದ್ದು ವೀಕ್ಷಿಸಿದರು.

ಪ್ರೇಕ್ಷಕರು ಕುಳಿತುಕೊಳ್ಳುವ ಗ್ಯಾಲರಿಯಲ್ಲಿ ಸೋಮಣ್ಣ ಅವರು ಕುಳಿತು ಸಿದ್ಧತೆ ಬಗ್ಗೆ ವೀಕ್ಷಣೆ ನಡೆಸಿ ಅರಮನೆ ಹಾಗೂ ಸುತ್ತಮುತ್ತಲ ಸ್ವಚ್ಛತೆ ಕಾಪಾಡುವಂತೆ ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಮಣ್ಯ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.ಅರಮನೆ ಸ್ವಚ್ಛತೆಗೆ ಪಾಲಿಕೆ ಸಿಬ್ಬಂದಿಗಳನ್ನು ಕಾಯದೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಚಿವರು ಖಡಕ್ ಸೂಚನೆ ನೀಡಿದರು.

#ಪ್ರವಾಸಿಗರ ಸುರಕ್ಷತೆ ಹಿನ್ನೆಲೆ 10 ಗಂಟೆಗೆ ಮಳಿಗೆ ಬಂದ್: 
ಸಾರ್ವಜನಿಕರು ಹಾಗೂ ಪ್ರವಾಸಿಗರ ಸುರಕ್ಷತೆ ಹಿನ್ನೆಲೆಯಲ್ಲಿ ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿನ ಮಳಿಗೆಗಳನ್ನು ರಾತ್ರಿ 10 ಗಂಟೆಗೆ ಮುಚ್ಚುವಂತೆ ಪೊಲೀಸರು ಸೂಚಿಸಿದ್ದಾರೆ. ವಸ್ತು ಪ್ರದರ್ಶನ ಆವರಣದಲ್ಲಿ ಸಂಜೆ ಅಂಗಡಿ-ಮಳಿಗೆಗಾರರೊಂದಿಗೆ ನಜರ್‍ಬಾದ್ ಇನ್‍ಸ್ಪೆಕ್ಟರ್ ಮಹದೇವಸ್ವಾಮಿ ಸಭೆ ನಡೆಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಅಂಗಡಿ-ಮಳಿಗೆ ಮುಚ್ಚಬೇಕು.

ತಡರಾತ್ರಿ ಅಂಗಡಿ ತೆರೆದಿದ್ದರೆ ಮಕ್ಕಳು, ವಯಸ್ಕರಿಗೆ ಹಿಂದಿರುಗುವಾಗ ಸಮಸ್ಯೆ ಎದುರಾಗುತ್ತದೆ. ಸಾರ್ವಜನಿಕ ವಾಹನ ಲಭಿಸುವುದಿಲ್ಲ, ಕಳ್ಳಕಾಕರ ಭಯವಿರುತ್ತದೆ ಎಂದು ಅವರು ಸೂಚಿಸಿದ್ದಾರೆ. ಭದ್ರತೆ ಹಿನ್ನೆಲೆಯಲ್ಲಿ ದಸರಾ ವಸ್ತು ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರಿಗೆ 9 ಗಂಟೆಗೆ ಮತ್ತು ರಜಾ ದಿನಗಳಲ್ಲಿ 9.30ಕ್ಕೆ ಪ್ರವೇಶ ಟಿಕೆಟ್ ನೀಡುವುದನ್ನು ಸ್ಥಗಿತಗೊಳಿಸಬೇಕೆಂದು ಅವರು ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್, ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೇಶಕ ರಾಜು ಮತ್ತಿತರರು ಪಾಲ್ಗೊಂಡಿದ್ದರು.

Facebook Comments