ಮೈಸೂರು,ಜ.18-ಮೇಕೆದಾಟು ಪಾದಯಾತ್ರೆ ಬಂದೋಬಸ್ತ್‍ಗೆ ಮೈಸೂರಿನಿಂದ ತೆರಳಿದ್ದ ಕೆಎಸ್‍ಆರ್‍ಪಿ 5ನೇ ಬೆಟಾಲಿಯನ್‍ನ 200 ಸಿಬ್ಬಂದಿಗಳಲ್ಲಿ 42 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎಂದು ಕಮಾಂಡೆಂಟ್ ಜನಾರ್ಧನ್ ತಿಳಿಸಿದ್ದಾರೆ. ಕೆಎಸ್‍ಆರ್‍ಪಿ 5ನೇ ಬೆಟಾಲಿಯನ್‍ನ 200 ಸಿಬ್ಬಂದಿಗನ್ನು ಮೈಸೂರಿನಿಂದ ನಿಯೋಜಿಸಲಾಗಿತ್ತು.
ಅವರಲ್ಲಿ 125 ಮಂದಿ ಹಂತ-ಹಂತವಾಗಿ ಮೈಸೂರಿಗೆ ಹಿಂತಿರುಗಿದ್ದು, ಅವರನ್ನು ಆರ್‍ಟಿಪಿಸಿಆರ್ ಟೆಸ್ಟ್ ಗೆ ಒಳಪಡಿಸಿದಾಗ 42 ಮಂದಿಗೆ ಸೋಂಕು ಪತ್ತೆಯಾಗಿದ್ದು, 75 ಮಂದಿ ಸಿಬ್ಬಂದಿ ಕೇಂದ್ರ ಸ್ಥಾನಕ್ಕೆ ಇನ್ನೂ ವಾಪಸ್ಸಾಗಿಲ್ಲ ಎಂದು ಹೇಳಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಸೋಮವಾರ ಒಟ್ಟು 1770 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಸೋಮವಾರ 232 ಮಂದಿ ಗುಣಮುಖರಾಗಿದ್ದು, ಇದುವರೆಗೆ 1,88,614 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 1,79,039 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 7.141 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 2,435 ಮಂದಿ ಸಾವನ್ನಪ್ಪಿದ್ದಾರೆ.
ಹೆಚ್.ಡಿ.ಕೋಟೆಯಲ್ಲಿ 23, ಹುಣಸೂರು 60, ಕೆ.ಆರ್.ನಗರ 60, ಮೈಸೂರು ನಗರ 1,354, ಮೈಸೂರು ತಾಲೂಕು 144, ನಂಜನಗೂಡು 53, ಪಿರಿಯಾಪಟ್ಟಣ 29, ಸಾಲಿಗ್ರಾಮ 3, ಸರಗೂರು 3, ತಿ.ನರಸೀಪುರ 71 ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 1,770 ಪ್ರಕರಣ ದೃಢಪಟ್ಟಿದೆ. ಪ್ರಸ್ತುತ 7,141 ಸಕ್ರಿಯ ಪ್ರಕರಣಗಳಿದ್ದು. ಇಂದು 6,535 ಮಂದಿಗೆ ಕೋಡ್ ಪರೀಕ್ಷೆ ನಡೆಸಲಾಗಿದ್ದು, ಇಂದು ಜಿಲ್ಲೆಯಲ್ಲಿ ಕೊರೊನಾ ಸೋಂಕು ಶೇ.27.08ರಷ್ಟಿದೆ.
