ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಕಾವೇರಿ ಹೆಸರು

Social Share

ಬೆಂಗಳೂರು,ಡಿ.22- ಈಗಾಗಲೇ ಭಾಗಶಃ ತೆರೆಯಲಾದ 119 ಕಿಮೀ ಉದ್ದದ ದಶಪಥಗಳ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್‍ವೇನ್ನು ಭಾರತಮಾಲಾ ಪರಿಯೋಜನಾ ಹಂತ-1ರಡಿ ನಿರ್ಮಿಸಲಾಗಿದೆ.

ಈ ಎಕ್ಸ್‍ಪ್ರೆಸ್‍ವೇಯಿಂದ ಹಲವು ರೀತಿಯ ಪ್ರಯೋಜನಗಳಿದ್ದು, ಆರ್ಥಿಕ ಬೆಳವಣಿಗೆ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಬಲೀಕರಣ, ಪರಿಸರ ಸಂರಕ್ಷಣೆ ಸೇರಿದಂತೆ ಉಭಯ ನಗರಗಳಿಗೆ ಬಹಳಷ್ಟು ಅನುಕೂಲ ಕಲ್ಪಿಸಲಿದೆ.

ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್‍ವೇ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಕೇವಲ 90 ನಿಮಿಷಗಳಿಗೆ ಇಳಿಸುವ ನಿರೀಕ್ಷೆಯಿದೆ. ಸದ್ಯ ಇವೆರಡು ನಗರದ ನಡುವಿನ ಸಂಚಾರ ಸಮಯ ಮೂರು ಗಂಟೆ ಹಿಡಿಯುತ್ತಿದೆ. ಕಾಮಗಾರಿ ಬಳಿಕ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ ಆಗಲಿದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ 2 ದಿನ ಮೀಸಲು

ನದಿಗಳ ಹೆಸರಿಡಲು ಮನವಿ: ದೇಶದಲ್ಲಿ ನಿರ್ಮಿಸಲಾದ ಅಥವಾ ನಿರ್ಮಾಣ ಹಂತದಲ್ಲಿರುವ ಎಕ್ಸ್‍ಪ್ರೆಸ್‍ವೇಗಳಿಗೆ ಪವಿತ್ರ ನದಿಗಳಾದ ಯಮುನಾ ಎಕ್ಸ್‍ಪ್ರೆಸ್‍ವೇ ಮತ್ತು ಉತ್ತರಪ್ರದೇಶದ ಗಂಗಾ ಎಕ್ಸ್‍ಪ್ರೆಸ್‍ವೇ ಮತ್ತು ಮಧ್ಯಪ್ರದೇಶದ ನರ್ಮದಾ ಎಕ್ಸ್‍ಪ್ರೆಸ್‍ವೇಗಳ ಹೆಸರನ್ನು ಇಡಲಾಗಿದೆ. ಏಕೆಂದರೆ ನದಿಗಳು ನಮ್ಮ ದೇಶದ ಇತಿಹಾಸ, ಸಂಸ್ಕೃತಿ, ಸಂಪ್ರದಾಯಗಳು ಮತ್ತು ನಂಬಿಕೆಯನ್ನು ರೂಪಿಸಿವೆ.

ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್‍ವೇಗೆ ನದಿಯ ಹೆಸರನ್ನು ಇಡುವಂತೆ ಅನೇಕ ಜನರು ಮತ್ತು ಇತಿಹಾಸಕಾರರು ಮನವಿ ಮಾಡಿದ್ದಾರೆ ಎಂದು ಮೈಸೂರು ಸಂಸ ಪ್ರತಾಪ್ ಸಿಂಹ ಹೇಳಿದ್ದಾರೆ.

ನೂತನ RTO ಕಚೇರಿ ತೆರೆಯುವ ಪ್ರಸ್ತಾವನೆ ಇಲ್ಲ : ಶ್ರೀರಾಮುಲು

ಪಶ್ಚಿಮಘಟ್ಟದ ಬ್ರಹ್ಮಗಿರಿ ಬೆಟ್ಟಗಳಲ್ಲಿ ಹುಟ್ಟುವ ದೇಶದ ಅತ್ಯಂತ ಪವಿತ್ರ ನದಿಗಳಲ್ಲಿ ಒಂದಾದ ಕಾವೇರಿ ನದಿಯ ಹೆಸರನ್ನು ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್‍ವೇಗೆ ಇಡಲು ಕೇಂದ್ರ ಸರ್ಕಾರವನ್ನು ಮೆಚ್ಚಿಸುವಂತೆ ಇತಿಹಾಸಕಾರರು ಸೇರಿದಂತೆ ನನ್ನ ಸಂಸದೀಯ ಕ್ಷೇತ್ರದ ಪ್ರಮುಖ ನಾಗರಿಕರು ನನ್ನನ್ನು ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ಕೂಡ ಇದನ್ನೇ ಪ್ರಸ್ತಾಪಿಸಬೇಕೆಂದು ಕೇಂದ್ರ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಿದ್ದಾರೆ.

Mysore Bangalore Highway, Cauvery Expressway, mp pratap simha,

Articles You Might Like

Share This Article