ಮೈಸೂರು-ಚೆನ್ನೈ ವಂದೇ ಭಾರತ್ ರೈಲು ಟ್ರಯಲ್ ರನ್ ಆರಂಭ

Social Share

ಮೈಸೂರು,ನ.7- ಮೈಸೂರು-ಚೆನ್ನೈ ಮಧ್ಯೆ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಇಂದಿನಿಂದ ಟ್ರಯಲ್ ರನ್ ಆರಂಭಿಸಿದೆ. ಚೆನ್ನೈನ ಎಂಜಿ ರಾಮಚಂದ್ರನ್ ಕೇಂದ್ರ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ರೈಲು ನಿರ್ಗಮಿಸಿದ್ದು, ಮಧ್ಯಾಹ್ನ 12.30ಕ್ಕೆ ಮೈಸೂರು ತಲುಪಲಿತು.

ಹೈಸ್ಪೀಡ್ ರೈಲು ಚೆನ್ನೈ ಮೈಸೂರು ಮಧ್ಯೆ 6 ಗಂಟೆ 30 ನಿಮಿಷದಲ್ಲಿ 504 ಕಿಮೀ ಸಂಚರಿಸಲಿದೆ. ಮಧ್ಯದಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮಾತ್ರ ಒಂದು ಸ್ಟಾಪ್ ಇರಲಿದೆ. ಟ್ರಯಲ್ ಗಾಗಿ ವಂದೇ ಭಾರತ್ ಎಕ್ಸಪ್ರೆಸ್ ರೈಲು ಭಾನುವಾರ ಚೆನ್ನೈ ತಲುಪಿದ ಬಳಿಕ ವಿಭಾಗೀಯ ಹೆಚ್ಚುವರಿ ರೈಲ್ವೆ ಮ್ಯಾನೇಜರ್ ವಿಡಿಯೋ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಜೆಡಿಎಸ್ ಅಭ್ಯರ್ಥಿಗಳಿಗೆ ಸೀಕ್ರೆಟ್ ಟ್ರೇನಿಂಗ್

ಕೊನೆಗೂ ಒಳ್ಳೆಯ ಸುದ್ದಿ ಬಂತು. ಟ್ರಯಲ್ ರನ್ ಗಾಗಿ ವಂದೇ ಭಾರತ್ ಚೆನ್ನೈಗೆ ಬಂದಿದೆ ಎಂದು ಬರೆದುಕೊಂಡಿದ್ದರು. ಈ ರೈಲು ಬುಧವಾರ ಹೊರತುಪಡಿಸಿ ವಾರದ ಆರು ದಿನಗಳಲ್ಲಿ ಲಭ್ಯ ಇರಲಿದೆ.

BIG NEWS : ಆರ್ಥಿಕ ದುರ್ಬಲರಿಗೆ ಶೇ.10ರಷ್ಟು ಮೀಸಲಾತಿ ಎತ್ತಿಹಿಡಿದ ಸುಪ್ರೀಂ ಕೋರ್ಟ್ಸ್ವಯಂಚಾಲಿತ ಡೋರ್, ವೈಫೈ ಇಂಟರ್ ನೆಟ್ ಜೊತೆ ಸುಸಜ್ಜಿತ ತಂತ್ರಜ್ಞಾನದ 16 ಕೋಚ್ ಗಳನ್ನು ಇದು ಹೊಂದಿದೆ. ನ. 11ರಂದು ಬೆಂಗಳೂರಲ್ಲಿ ಈ ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

Articles You Might Like

Share This Article