Saturday, September 23, 2023
Homeಇದೀಗ ಬಂದ ಸುದ್ದಿಮಾಜಿ ಸಚಿವರ ಕಾರ್ ಕಳ್ಳತನ

ಮಾಜಿ ಸಚಿವರ ಕಾರ್ ಕಳ್ಳತನ

- Advertisement -

ಮೈಸೂರು,ಜೂನ್.7- ನಗರದಲ್ಲಿ ಮಾಜಿ ಸಚಿವ ಕೋಟೆ ಶಿವಣ್ಣ ಅವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರನ್ನು ಕಳ್ಳತನ ಮಾಡಲಾಗಿದೆ. ವಿಜಯನಗರ ಮೂರನೇ ಹಂತದಲ್ಲಿರುವ ಶಿವಣ್ಣ ಅವರ ಮನೆಯ ಕಾಂಪೌಂಡ್ ಹಾರಿ ಒಲನುಗ್ಗಿರುವ ಚೋರ ನಕಲಿ ಕೀ ಬಳಸಿ ಕಾರನ್ನು ಓಡಿಸಿಕೊಂಡು ಹೋಗಿದ್ದಾನೆ.ಕಳ್ಳನ ಕರಾಮತ್ತು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಾರು ಕದ್ದವನು ಮತ್ತೆ ಬಂದು ಕಾರಿನಲ್ಲಿದ್ದ ಫೈಲ್‍ಗಳು ಹಾಗೂ ಗಣಪತಿ ವಿಗ್ರಹ ಇಟ್ಟು ಹೋಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

- Advertisement -

ಕಳೆದ ಜೂನ್ 5 ರಂದು ಹೆಚ್ ಡಿ.ಕೋಟೆಗೆ ಹೋಗಿ ಬಂದು ರಾತ್ರಿ 8 ಗಂಟೆಗೆ ಕಾರು ನಿಲ್ಲಿಸಿ ಡ್ರೈವರ್ ಕೀ ಕೊಟ್ಟು ಹೋಗಿದ್ದ. ಮಾರನೇ ದಿನ ಬೆಳಿಗ್ಗೆ ಕಾರು ನೋಡಿದರೆ ಕಾಣಲಿಲ್ಲ. ಮನೆಯವರನ್ನು ವಿಚಾರಿಸಿದೆ ಯಾರೂ ತೆಗೆದುಕೊಂಡು ಹೋಗಿರಲಿಲ್ಲ. ತಕ್ಷಣ ಪೊಲೀಸ್ ಕಮೀಷನರ್‍ಗೆ ಹೇಳಿದೆ. ತಕ್ಷಣ ಪೊಲೀರು ಬಂದು ಪರಿಶೀಲನೆ ಮಾಡಿದರು ಎಂದರು.

ಸಿಸಿಬಿ ಕಾರ್ಯಾಚರಣೆ : 3.75 ಲಕ್ಷ ಮೌಲ್ಯದ ಇ-ಸಿಗರೇಟ್, ವಿದೇಶಿ ಸಿಗರೇಟ್ ವಶ

ಆತನ ಹಿಂದೆ ಯಾರೋ ಸೇರಿಕೊಂಡು ವ್ಯವಸ್ಥಿತಿವಾಗಿ ಕಳ್ಳತನ ಮಾಡಿದ್ದಾನೆ ಎಂದು ಶಿವಣ್ಣ ಶಂಕೆ ವ್ಯಕ್ತಪಡಿಸಿದ್ದಾರೆ.ಕೆಲವು ದಿನಗಳ ಹಿಂದೆ ಇದೇ ರೀತಿ ಕಾರು ಕಳ್ಳತನ ಆಗಿದೆ. ಮಾಜಿ ಮಂತ್ರಿಗೇ ಈ ರೀತಿ ಆದರೆ ಜನ ಸಾಮಾನ್ಯರ ಗತಿ ಏನು ಹೊರ ರಾಜ್ಯದವರಾ ಅಥವಾ ಇಲ್ಲಿಯವರೋ ಗೊತ್ತಾಗುತ್ತಿಲ್ಲ ಎಂದಿದ್ದಾರೆ.

#Mysore, #Exminister, #car, #stolen,

- Advertisement -
RELATED ARTICLES
- Advertisment -

Most Popular