ಮೈಸೂರು,ನ.27- ಬಸ್ ನಿಲ್ದಾಣದ ಮೇಲೆ ನಿರ್ಮಿಸಿದ್ದ ಗುಂಬಜ್ ವಿವಾದಕ್ಕೆ ತೆರೆ ಬಿದ್ದಿದೆ. ಮೈಸೂರು-ಊಟಿ ರಸ್ತೆಯಲ್ಲಿ ನಿರ್ಮಾಣ ಮಾಡಲಾಗಿದ್ದ ಬಸ್ ನಿಲ್ದಾಣದ ಮೇಲಿದ್ದ ಮೂರು ಗುಂಬಜ್‍ಗಳ ಪೈಕಿ ಎರಡು ಗುಂಬಜ್‍ಗಳನ್ನು ನಿನ್ನೆ ತಡರಾತ್ರಿ ಕಾರ್ಯಾಚರಣೆ ನಡೆಸಿ ತೆರವು ಮಾಡಲಾಗಿದೆ.
ಮಧ್ಯದಲ್ಲಿರುವ ದೊಡ್ಡ ಗೋಪುರವನ್ನು ಬಿಟ್ಟು ಎಡ ಮತ್ತು ಭಾಗದಲ್ಲಿದ್ದ ಎರಡು ಚಿಕ್ಕ ಗೋಪುರಗಳನ್ನು ತೆರವು ಮಾಡಲಾಗಿದೆ. ಬಸ್ ನಿಲ್ದಾಣದ ಮೇಲಿನ ಗೋಪುರ ಗುಂಬಜ್ ಮಾದರಿ ಇದೆ ಎಂದು ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ರಹಸ್ಯ ಸಮಾಲೋಚನೆ
ಆದರೆ ಸ್ಥಳೀಯ ಶಾಸಕ ರಾಮ್‍ದಾಸ್ ಅವರು ಪಾರಂಪರಿಕವಾಗಿ ಅರಮನೆ ಮಾದರಿಯಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ , ಭ್ರಷ್ಟಾಚಾರದ ವಿಡಿಯೋ ವೈರಲ್
ಇದು ಸಂಸದರು ಮತ್ತು ಶಾಸಕರ ನಡುವಿನ ಜಟಾಪಟಿಗೆ ಕಾರಣವಾಗಿತ್ತು. ಅಲ್ಲದೆ ಸಾರ್ವಜನಿಕವಾಗಿಯೂ ಕೂಡ ತೀವ್ರ ಚರ್ಚೆಗೂ ಕೂಡ ಗ್ರಾಸವಾಗಿತ್ತು. ಸದ್ಯ ಬಸ್ ಸ್ಟ್ಯಾಂಡ್ ಮೇಲಿನ ಗುಂಬಜ್‍ಗಳನ್ನು ಕೊನೆಗೂ ತೆರವು ಮಾಡಿ ವಿವಾದಕ್ಕೆ ಶಾಸಕರು ಅಂತ್ಯ ಹಾಡಿದ್ದಾರೆ ಎಂದು ತಿಳಿದುಬಂದಿದೆ.
Mysore, Gumbaj, controversy, bus, stand,