ಮೈಸೂರು ಇರ್ವಿನ್ ರಸ್ತೆ ವಿಸ್ತರಣೆ, ಕಟ್ಟಡಗಳ ತೆರವು

Social Share

ಮೈಸೂರು,ಆ.12- ನಗರದ ಇರ್ವಿನ್ ರಸ್ತೆ ವಿಸ್ತರಣೆಗೆ ಎದುರಾಗಿದ್ದ ಕೆಲ ವಾಣಿಜ್ಯ ಕಟ್ಟಡಗಳು ಮತ್ತು ಮಸೀದಿಯ ಗೋಡೆಗಳ ತೆರವು ಕಾರ್ಯಾಚರಣೆ ರಾತ್ರಿಯಿಂದಲೇ ಆರಂಭಿಸಲಾಗಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯಿಂದ ತೆರವು ಕಾರ್ಯಾಚರಣೆ ನಡೆಸಲಾಯಿತು. ಇದರೊಂದಿಗೆ ರಸ್ತೆ ವಿಸ್ತರಣೆಗೆ ಇದ್ದ ಅಡೆ ತಡೆ ಕೊನೆಗೂ ನಿವಾರಣೆಯಾಗಿದೆ.

ಈ ರಸ್ತೆ ವಿಸ್ತರಣೆಗೆ ಹಲವು ವರ್ಷಗಳಿಂದಲೂ ಪ್ರಯತ್ನ ನಡೆದಿತ್ತು. ಆದರೆ ಈ ರಸ್ತೆಯಲ್ಲಿರುವ ವಾಣಿಜ್ಯ ಕಟ್ಟಡಗಳು ಮತ್ತು ಮಸೀದಿಯ ಗೋಡೆಯನ್ನು ಒಡೆಯಲು ತಡೆಯಾಜ್ಞೆ ಇದ್ದ ಕಾರಣ ಇಷ್ಟು ವರ್ಷಗಳವರೆಗೆ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.

ತಡೆಗೋಡೆ ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ. ಮಸೀದಿ ಮಂಡಳಿಯವರೊಂದಿಗೆ ಚರ್ಚಿಸಿ ಮನವೊಲಿಸಲಾಗಿದೆ. ನಂತರ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ತೆರವುಕಾರ್ಯ ಪೂರ್ಣಗೊಳ್ಳಲಿದೆ.

ಇದರಿಂದ ರಸ್ತೆಯನ್ನು 10ರಿಂದ 12 ಅಡಿಗಳವರೆಗೆ ವಿಸ್ತರಣೆ ಮಾಡಬಹುದಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ತಿಳಿಸಿದ್ದಾರೆ.

ಗೋಡೆಯನ್ನು ತೆರವುಗೊಳಿಸುವುದರಿಂದ ಇರ್ವಿನ್ ರಸ್ತೆಯ ವಿಸ್ತರಣೆಗೆ ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ. ಜನರಿಗೆ, ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ. ಇದಕ್ಕಾಗಿ ಹೈಕೋರ್ಟ್ ಗೆ ಮತ್ತು ಮಹಾನಗರ ಪಾಲಿಕೆಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

Articles You Might Like

Share This Article