ಯುವತಿ ವಿಚಾರಕ್ಕೆ ಗಲಾಟೆ, ಯುವಕನಿಗೆ ಚಾಕು ಇರಿತ

Social Share

ಮೈಸೂರು, ಜ. 23- ಯುವತಿ ವಿಚಾರದಲ್ಲಿ ಯುವಕರ ನಡುವೆ ಗಲಾಟೆ ನಡೆದು ಒಬ್ಬ ಚಾಕು ಇರಿತಕ್ಕೆ ಒಳಗಾದ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಗಲಾಟೆಯಲ್ಲಿ ಅಶಿತ್(37) ಎಂಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದೆ. ಚಾಕು ಇರಿತ ಪ್ರಕರಣ ಸಂಬಂಧ ಪೊಲೀಸರು ವಿನಾಯಕ ಹಾಗೂ ಈತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

ಗಾಯಗೊಂಡಿರುವ ಅಶಿತ್(37) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ:
ಸುಚಿತ್ ಓರ್ವ ಯುವತಿಯನ್ನ ಪ್ರೀತಿಸುತ್ತಿದ್ದು, 20 ದಿನಗಳ ಹಿಂದೆ ಆರೋಪಿ ವಿನಾಯಕ ಯುವತಿಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದ ಎನ್ನಲಾಗಿದೆ. ಈ ಸಂಬಂಧ ಸುಚಿತ್ ಹಾಗೂ ವಿನಾಯಕ ನಡುವೆ ಗಲಾಟೆ ಆಗಿತ್ತು.

ದೇವರ ಉತ್ಸವದಲ್ಲಿ ಕ್ರೇನ್ ಮಗುಚಿಬಿದ್ದು ನಾಲ್ವರ ಸಾವು

ಈ ವಿಚಾರವನ್ನ ಸುಚಿತ್ ತನ್ನ ಸ್ನೇಹಿತ ಅಶಿತ್‍ಗೆ ತಿಳಿಸಿದ್ದ. ಅಲ್ಲದೆ ಒಂದು ವಾರದ ಹಿಂದೆ ವಿನಾಯಕ್ ಗೆ ಹಲ್ಲೆ ನಡೆಸಿ ವಾರ್ನಿಂಗ್ ಕೊಟ್ಟಿದ್ದ. ಇಷ್ಟಾದರೂ ಸುಮ್ಮನಾಗದ ವಿನಾಯಕ್ ನಿನ್ನೆ ಫೋನ್ ಮೂಲಕ ಸಂಪರ್ಕಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಮನೆಗೆ ಬರುವಂತೆ ಸವಾಲು ಹಾಕಿದ್ದ.

ವಿಜಯನಗರದಲ್ಲಿರುವ ವಿನಾಯಕ್ ಮನೆಗೆ ಆಶಿತ್ ಹೋದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಶಿತ್‍ಗೆ ವಿನಾಯಕ್ ಹಾಗೂ ಇಬ್ಬರು ಸ್ನೇಹಿತರು ಚಾಕುವಿನಿಂದ ಇರಿದಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mysore, love, relationship, young, man, stabbed,

Articles You Might Like

Share This Article