ಬಾಂಬ್ ಸ್ಪೋಟಕ್ಕೆ ಮೊಬೈಲ್ ಬಳಸಲು ಮೈಸೂರಲ್ಲಿ ತರಬೇತಿ ಪಡೆದಿದ್ದ ಕುಕ್ಕರ್ ಕ್ರಿಮಿ

Social Share

ಬೆಂಗಳೂರು, ನ.22- ಶಂಕಿತ ಉಗ್ರ ಶಾರಿಕ್ ಬಾಂಬ್ ಸ್ಪೋಟಕ್ಕೆ ಮೊಬೈಲ್ ಬಳಸುವ ಸಲುವಾಗಿ ತರಬೇತಿ ಪಡೆಯಲು ಮೈಸೂರಿನ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದದ್ದು ತನಿಖೆಯಲ್ಲಿ ಬಹಿರಂಗವಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥ ಹಳ್ಳಿಯವನಾದ ಶಾರಿಕ್, ಸ್ನೇಹಿತ ಮಾಜ್ ಜೊತೆಗೆ ಸೇರಿ ತುಂಗಾನದಿ ತೀರದಲ್ಲಿ ಬಾಂಬ್ ಸ್ಪೋಟಿಸುವ ಅಭ್ಯಾಸ ನಡೆಸಿ ಸಿಕ್ಕಿ ಬಿದಿದ್ದ. ಆ ವೇಳೆ ಅಲ್ಲಿ ಆತನನ್ನು ಕಂಡವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದು ಶಾರಿಕ್‍ಗೆ ಮುಳುವಾಗಿತ್ತು.

ಭಾರೀ ವಿದ್ವಂಸಕ ಕೃತ್ಯಗಳ ಸಂಚನ್ನು ಹೊಂದಿದ್ದ ಆರೋಪಿ ದೂರದಿಂದಲೇ ಬಾಂಬ್ ಸ್ಪೋಟಿಸುವ ತಂತ್ರಜ್ಞಾನ ಬಳಕೆಗೆ ತಯಾರಿ ನಡೆಸಿದ್ದ. ಬಾಂಬ್ ತಯಾರಿಕೆಗೆ ಬೇಕಾದ ಸಲಕರಣೆಗಳನ್ನು ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ಒಟ್ಟುಗೂಡಿಸಿದ್ದು, ಬಾಂಬ್ ತಯಾರಿಕೆಯ ಅರೆಬರೆ ಜ್ಞಾನವನ್ನು ಪಡೆದುಕೊಂಡಿದ್ದ. ಆದರೆ ತನ್ನ ಗುರಿ ತಲುಪಬೇಕಾದರೆ ದೂರದಿಂದಲೇ ಬಾಂಬ್ ನಿಯಂತ್ರಿಸುವ ಕಲೆಯನ್ನು ರೂಢಿಸಿಕೊಳ್ಳಬೇಕಿತ್ತು.

ಗಡಿ ವಿವಾದ ಕೆದಕಿದ ಮಹಾರಾಷ್ಟ್ರ : ಸಿಎಂ ಬೊಮ್ಮಾಯಿ ಆಕ್ರೋಶ

ತುಂಗಾ ತೀರದ ಬಾಂಬ್ ಸ್ಪೋಟದ ಬಳಿಕ ಕೊಯಮತ್ತೂರು, ಕೇರಳ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಲ್ಲಿ ಅಲೆದಾಡಿದ್ದ ಆರೋಪಿ ಕೊನೆಗೆ ಸೆಪ್ಟೆಂಬರ್ ವೇಳೆಗೆ ಮೈಸೂರಿಗೆ ಬಂದು ನೆಲೆಸಿದ್ದ. ಅಲ್ಲಿ ಅಗ್ರಹಾರದಲ್ಲಿ ಸೈಯದ್ ಅಹಮ್ಮದ್ ಎಂಬುವರ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.

ಅಲ್ಲಿ ಕೆಲಸ ಮಾಡುತ್ತಲೇ ಬೇರೆಯವರ ದಾಖಲಾತಿಗಳನ್ನು ಬಳಕೆ ಮಾಡಿಕೊಂಡು ಮೊಬೈಲ್ ಸಿಮ್‍ಗಳನ್ನು ಖರೀದಿಸಿದ್ದ. ಅವುಗಳನ್ನು ಬಳಕೆ ಮಾಡಿ ತನ್ನದೇ ಆದ ನೆಟ್‍ವರ್ಕ್‍ನಲ್ಲಿ ಸಂಪರ್ಕ ಸಾಧಿಸುತ್ತಿದ್ದ. ಕುಕ್ಕರ್ ಬಾಂಬ್ ಸೇರಿದಂತೆ ವಿವಿಧ ಸ್ವರೂಪದ ಬಾಂಬ್‍ಗಳಿಗೆ ಸಿಮ್ ಅಳವಡಿಸಿ ದೂರದಲ್ಲಿದ್ದುಕೊಂಡೇ ಕರೆಯ ಸಂಪರ್ಕದಿಂದ ಸೋಟಗೊಳ್ಳುವಂತೆ ಮಾಡುವುದು ಆರೋಪಿಯ ಸಂಚಾಗಿತ್ತು.

ಅದಕ್ಕೆ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ಒಂದಿಷ್ಟು ತಾಂತ್ರಿಕತೆಯನ್ನು ಪಡೆದುಕೊಂಡಿದ್ದ, ಅದನ್ನು ಆಧರಿಸಿ ಸಕ್ರ್ಯೂಟ್ ಬೋರ್ಡ್‍ಗಳನ್ನು ಖರೀದಿಸಿದ್ದ. ಕಚ್ಚಾ ಸರಕುಗಳಾದ ಬ್ಯಾಟರಿ, ನಟ್‍ಬೋಲ್ಟ್, ಅಲ್ಯೂಮಿನಿಯಂ ಕುಕ್ಕರ್, ವೈರ್‍ಗಳನ್ನು ಸಂಗ್ರಹಿಸಿದ್ದ. ಬ್ಯಾಟರಿ ಮತ್ತು ಸಕ್ರ್ಯೂಟ್ ಬೋರ್ಡ್ ಕನೆಕ್ಟಿವಿಟಿಯನ್ನು ಪರೀಕ್ಷಿಸಲು ಮಲ್ಟಿಮೀಟರ್ ಅನ್ನು ಖರೀದಿಸಿದ್ದ.

ಘಟನೆ ಬೆಳಕಿಗೆ ಬಂದ ಬಳಿಕ ಮಂಗಳೂರು ಮತ್ತು ಮೈಸೂರು ಪೊಲೀಸರು ಮೈಸೂರಿನ ಲೋಕನಾಯಕ ನಗರದಲ್ಲಿ ಆರೋಪಿ ವಾಸವಾಗಿದ್ದ ಬಾಡಿಗೆ ಮನೆಯನ್ನು ತಪಾಸಣೆ ನಡೆಸಿದ್ದಾರೆ. ಅಲ್ಲಿ ಬಾಂಬ್ ತಯಾರಿಕೆಗೆ ಬಳಸಲಾಗಿದ್ದ ಸಲಕರಣೆಗಳು ಪತ್ತೆಯಾಗಿವೆ.

ಜೊತೆಗೆ ಒಂದು ನಕಲಿ ಪ್ಯಾನ್‍ಕಾರ್ಡ್, ಪೋರ್ಜರಿ ಮಾಡಲಾದ ಎರಡು ಆಧಾರ್ ಕಾರ್ಡ್‍ಗಳು, ಫಿನೋ ಡೆಬಿಟ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳು ಪತ್ತೆಯಾಗಿವೆ. ಎಲ್ಲವನ್ನೂ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಪರಿಶೀಲನೆ ನಡೆಸಿದ್ದಾರೆ.

ಮೈಸೂರಿನಲ್ಲಿ ಕುಕ್ಕರ್ ಬಾಂಬ್ ತಯಾರು ಮಾಡಿಕೊಂಡಿದ್ದ ಶಾರಿಕ್ ಅದನ್ನು ತೆಗೆದುಕೊಂಡು ಕುಶಾಲ್‍ನಗರಕ್ಕೆ ಹೋಗಿದ್ದಾನೆ. ಅಲ್ಲಿಂದ ಬಸ್‍ನಲ್ಲಿ ಮಂಗಳೂರಿಗೆ ಪ್ರಯಾಣಿಸಿದ್ದಾನೆ. ಬಸ್ ಇಳಿದು ಆಟೋದಲ್ಲಿ ಪ್ರಯಾಣಿಸಿ ತನ್ನ ಗುರಿಯನ್ನು ನಿಗದಿ ಪಡಿಸಿಕೊಳ್ಳಲು ಹಲವಾರು ಜಾಗಗಳನ್ನು ಪರಿಶೀಲಿಸಿದ್ದಾನೆ. ಕೆಲವು ಸ್ಥಳಗಳಲ್ಲಿ ಇಳಿದು ಸುತ್ತ ಮುತ್ತ ಗಮನಿಸಿದ್ದಾನೆ. ಯಾವ ಸ್ಥಳದಲ್ಲಿ ಬಾಂಬ್ ಸ್ಪೋಟಿಸುವ ಸಂಚು ರೂಪಿಸಿದ್ದ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.

ಅದೃಷ್ಟವಶಾತ್ ದಾರಿ ಮಧ್ಯೆಯೇ ಕಚ್ಚಾ ಬಾಂಬ್ ಸ್ಪೋಟಗೊಂಡಿದ್ದರಿಂದ ಆತ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಹೆಚ್ಚಿನ ಅನಾಹುತವಾಗಿಲ್ಲ. ಆರೋಪಿಯೂ ಸಿಕ್ಕಿ ಬಿದ್ದಿದ್ದಾನೆ. ಇಲ್ಲವಾದರೆ ಆತನ ಪೂರ್ವ ತಯಾರಿ ಗಮನಿಸಿದರೆ ಭಾರೀ ವಿದ್ವಂಸಕ ಸಂಚಿಗೆ ಸಜ್ಜುಗೊಂಡಿದ್ದ ಎಂಬ ಅನುಮಾನಗಳು ಬಲವಾಗಿವೆ.

ಕೋಮು ಸೂಕ್ಷ್ಮ ಪ್ರದೇಶವಾದ ಮಂಗಳೂರನ್ನೇ ತನ್ನ ಗುರಿಯನ್ನಾಗಿಸಿಕೊಂಡಿರುವುದರ ಹಿಂದೆಯೂ ಹಲವು ಅನುಮಾನಗಳಿವೆ. ಆತನಿಗೆ ಬೇರೆ ಯಾರೋ ನಿರ್ದೇಶನ ನೀಡುತ್ತಿರಬಹುದು ಎಂಬ ಅನುಮಾನಗಳು ಕಾಡಲಾರಂಭಿಸಿವೆ.

2023ರ ಚುನಾವಣೆಗೆ 5.09 ಕೋಟಿ ಮತದಾರರು: ಕರಡು ಪಟ್ಟಿ ಪ್ರಕಟ

ಶಿವಮೊಗ್ಗ ಮೂಲದ ಶಾರಿಕ್, ಮೈಸೂರಿನಲ್ಲಿ ವಾಸವಿದ್ದುಕೊಂಡು ಮಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಮುಂದಾಗಿದ್ದನ್ನು ನೋಡಿದರೆ ಮುಂದೆ ಮತ್ತಷ್ಟು ಕೃತ್ಯಗಳು ನಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಆರಂಭದಲ್ಲೇ ಆರೋಪಿ ಸಿಕ್ಕಿ ಬಿದ್ದಿರುವುದು ಅನಾಹುತಗಳು ತಪ್ಪಿದಂತಾಗಿದೆ ಎಂದೇ ಹೇಳಬಹುದು. ಆದರೇ ಈತನಿಗೆ ನಿರ್ದೇಶನ ನೀಡುತ್ತಿದ್ದವರು ಯಾರು ಎಂಬ ಮಾಹಿತಿಗಳು ಬೆಳಕಿಗೆ ಬರಬೇಕಿದೆ.

ಮೈಸೂರಿನ ಮೊಬೈಲ್ ರಿಪೇರಿ ಅಂಗಡಿಯ ಸೈಯದ್‍ಗೂ ನಾಗೋರಿ ಸ್ಪೋಟಕ್ಕೂ ಸಂಬಂಧವಿದೆಯೇ? ಶಾರಿಕ್ ಸಂಚಿನ ಬಗ್ಗೆ ಸೈಯದ್‍ಗೆ ಮಾಹಿತಿ ಇತ್ತೆ? ಆತನ ಚಟುವಟಿಕೆಗಳ ಕುರಿತು ಸೈಯದ್‍ಗೆ ತಿಳುವಳಿಕೆ ಇತ್ತೆ ಎಂಬೆಲ್ಲಾ ಅಂಶಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಆಪ್ ಶಾಸಕನಿಗೆ ಕಾರ್ಯಕರ್ತರಿಂದಲೇ ಬಿತ್ತು ಗೂಸಾ

ಅತಿ ಕಿರಿಯ ವಯಸ್ಸಿನಲ್ಲೇ ಧರ್ಮಾಂಧತೆ ಅಮಲೇರಿಸಿಕೊಂಡ ಶಾರಿಕ್ ದಾರಿ ತಪ್ಪಿ ಸಮಾಜ ವಿದ್ರೋಹಿಯಾಗಿ ಬದಲಾಗಿದ್ದು, ತನ್ನ ವಿದ್ರೋಹಿ ಕೃತ್ಯಗಳಿಗೆ ಪೂರ್ವ ತಯಾರಿ ನಡೆಸಿರುವುದು ತನಿಖಾಕಾರಿಗಳನ್ನೇ ದಂಗು ಬಡಿಸಿದೆ.
ಎನ್‍ಐಎ ಅಧಿಕಾರಿಗಳು ಶಾರಿಕ್ ಬೆಂಗಾವಲಿಗಿರುವ ಅಂತಾರಾಷ್ಟ್ರೀಯ ಜಾಲದ ಮೂಲ ಕೆದಕಲಾರಂಭಿಸಿದ್ದಾರೆ. ಶಾರಿಕ್‍ನಂತೆ ಇನ್ನೂ ಎಷ್ಟು ಮಂದಿ ಹಾದಿ ತಪ್ಪಿದ ಮಕ್ಕಳಿದ್ದಾರೆ ಎಂಬ ಕುರಿತು ತನಿಖೆ ನಡೆಯುತ್ತಿದೆ.

Mysore, mobile, bomb, training,

Articles You Might Like

Share This Article