ಕುಕ್ಕರ್ ಕ್ರಿಮಿ ಕುರಿತು ಬಗೆದಷ್ಟು ಬಯಲಾಗುತ್ತಿವೆ ಸ್ಪೋಟಕ ಮಾಹಿತಿ

Social Share

ಮೈಸೂರು,ನ.23- ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ ಉಗ್ರ ಶಾರಿಖ್‍ಗೂ ಮೈಸೂರಿಗೂ ಇದ್ದ ನಂಟಿನ ಬಗ್ಗೆ ಬಗೆದಷ್ಟೂ ಸ್ಪೋಟಕ ಮಾಹಿತಿಗಳು ಬಯಲಾಗುತ್ತಲೇ ಇವೆ.

ಭಯೋತ್ಪಾದನೆ ಸಾರುವ ಗೋಡೆ ಬರಹ ಸೇರಿದಂತೆ ಇತರೆ ಉಗ್ರ ಕೃತ್ಯ ಎಸಗುತ್ತಿದ್ದ ಶಾರಿಖ್ ಬಗ್ಗೆ ಪತ್ತೆ ಆಗಿದ್ದೇ ಮೈಸೂರಿನ ಸಣ್ಣ ಸುಳಿವಿನಿಂದ ಎಂಬುವುದು ಸ್ಪಷ್ಟವಾಗಿದೆ. ಉಗ್ರ ಶಾರಿಖ್ ಸ್ನೇಹಿತ ಮೊಹಮ್ಮದ್ ರೂರುಲ್ಲಾನ ಕುಟುಂಬಸ್ಥರು ಮೈಸೂರಿನ ರಾಜೀವ್ ನಗರದ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ.

ಬಾಂಬ್ ಸ್ಪೋಟಿಸಲು ಮೊಬೈಲ್ ರಿಪೇರಿ ಕಲಿಯುತ್ತಿದ್ದ ಶಾರಿಖ್ ಬಗ್ಗೆ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ಮಾಲೀಕ ಪಿನ್ ಟು ಪಿನ್ ಮಾಹಿತಿ ಕೊಟ್ಟಿದ್ದಾರೆ. ಶಾರಿಖ್‍ನ ಮತ್ತೊಬ್ಬ ಸ್ನೇಹಿತ ಮತೀನ್ ತಂದೆ ಮೊಹಮ್ಮದ್ ಮನ್ಸೂರ್ ತನ್ನ ಮಗ ಉಗ್ರನಲ್ಲ ಎಂದು ಹೇಳಿದ್ದಾರೆ. ಮಂಗಳೂರಿನಲ್ಲಿ ಬಾಂಬ್ ಸ್ಪೋಟಿಸಿದ ಶಾರಿಖ್ ಭಯೋತ್ಪಾ ದಕ ಕೃತ್ಯ ಕರಾಳ ಮುಖ ಒಂದೊಂ ದಾಗಿ ಬಯಲಾಗುತ್ತಿವೆ.

ಜೈಲಲ್ಲಿ ಹೊಟ್ಟೆ ಬಿರಿಯೋಹಾಗೆ ತಿಂದು 8 ಕೆಜಿ ತೂಕ ಹೆಚ್ಚಿಸಿಕೊಂಡ ಸತ್ಯೇಂದ್ರ ಜೈನ್

ಸಾಂಸ್ಕøತಿಕ ನಗರಿ ಮೈಸೂರಿನ ಇದೇ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್‍ನಲ್ಲಿ ಶಾರಿಖ್ 45 ದಿನಗಳು ತರಬೇತಿಗೆ ಸೇರಿದ್ದ. ತನ್ನ ಮೂಲ ಹೆಸರನ್ನು ಮರೆಮಾಚಿ ಪ್ರೇಮ್ ರಾಜ್‍ನ ಆಧಾರ್ ಕಾರ್ಡ್ ಕೊಟ್ಟಿದ್ದ. ಎಲ್ಲೂ ಕೂಡ ಅಸಲಿ ಮುಖವಾಡದ ಬಗ್ಗೆ ಸಣ್ಣ ಸುಳಿವೂ ನೀಡದೆ ಚಾಣಾಕ್ಷತನ ತೋರಿದ್ದಾನೆ.

ಟೈಮ್ ಸೆಟ್ ಮಾಡಿ ಬಾಂಬ್ ಬ್ಲಾಸ್ಟ್ ಮಾಡಲು ಇದೇ ಕಂಪ್ಯೂಟರ್ ಸೆಂಟರ್‍ನಲ್ಲಿ ಗುಟ್ಟಾಗಿ ಟೆಕ್ನಿಕಲ್ ಮಾಹಿತಿ ಪಡೆದುಕೊಂಡಿದ್ದ. ಜತೆಗೆ ಇಂಟರ್‍ನೆಟ್‍ನಲ್ಲೂ ಸರ್ಚ್ ಮಾಡಿದ್ದನೆಂಬುದು ಗೊತ್ತಾಗಿದೆ. ಮೈಸೂರಿನ ಕಂಪ್ಯೂಟರ್ ಸೆಂಟರ್ ಮಾಲೀಕ ಪ್ರಸಾದ್ ಪೊಲೀಸರಿಗೆ ಕೊಟ್ಟ ಸುಳಿವಿನಿಂದ ಶಾರಿಖ್ ಗುರುತು ಹಾಗೂ ಹಿನ್ನೆಲೆಯನ್ನು ಪೋಲಿಸರು ಪತ್ತೆ ಹಚ್ಚಲು ಸಾಧ್ಯವಾಗಿದೆ.

ಬಾಂಬ್ ಬ್ಲಾಸ್ಟ್‍ಗೆ ಎರಡು ದಿನ ಮುಂಚೆ ಫೋನ್ ಮಾಡಿದ್ದ ಶಾರಿಖ್, ನನ್ನ ಕನ್ನಡಕ ಹಾಳಾಗಿದೆ. ನಾಳೆ ಹೊಸ ಕನ್ನಡಕ ಖರೀದಿಸಿ ಕ್ಲಾಸ್‍ಗೆ ಬರ್ತಿನಿ ಅಂತಾ ಹೇಳಿದ್ದನಂತೆ. ಶಾರಿಖ್ ಆತಂಕದಲ್ಲೆ ಮೊಬೈಲ್ ರಿಪೇರಿ ಕಲಿಯುತ್ತಿದ್ದ. ಯಾವಾಗ ನೋಡಿದರೂ ಬಾಗಿಲ ಕಡೆ ತಿರುಗಿ ತಿರುಗಿ ನೋಡುತ್ತಾ ಭಯದಲ್ಲೇ ಮೊಬೈಲ್ ರಿಪೇರಿ ಕಲಿಯುತ್ತಿದ್ದನಂತೆ.

ಧರ್ಮಾಧಿಕಾರಿ ಹೆಗ್ಗಡೆಯವರ ಜೀವನ ಧರ್ಮದ ಪ್ರತಿರೂಪ : ಸ್ಮೃತಿ ಇರಾನಿ

ಮೊಹಮ್ಮದ್ ರೂರುಲ್ಲಾ ಹಾಗೂ ಸೈಯದ್ ಮೊಹಮ್ಮದ್ ನನ್ನು ಮೈಸೂರಿಗೆ ಕರೆ ತಂದು ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕಲಿದ್ದಾರೆ. ಮತೀನ್ ಸಂಪರ್ಕವಿಲ್ಲದೆ ಹಲವು ವರ್ಷಗಳೆ ಕಳೆದಿವೆ. ಅವನು ಏನಾಗಿದ್ದಾನೆ ಎಂಬುದು ನಮಗೆ ಇನ್ನೂ ಗೂತ್ತಿಲ್ಲ. ಆತನ ಬಗ್ಗೆ ಮಾಧ್ಯಮಗಳಿಂದಲೇ ನಮಗೆ ತಿಳಿದದ್ದು. ಆತ ಉಗ್ರ ಅಲ್ಲ ಎಂದು ಆತನ ತಂದೆ ಹೇಳಿದ್ದಾರೆ.

ಯಾರು ಸಹ ತನ್ನ ಮಗ ಉಗ್ರನೆಂದು ತಿಳಿಯಬಾರದು. ಶಾರೀಕ್ ಹಾಗೂ ಮತೀನ್ ಒಂದೇ ಊರಿನವರು ಇದರಿಂದ ಅವರಿಗೆ ಸ್ನೇಹ ಆಗಿರಬಹುದು. ಇದರಿಂದ ಅವರ ಸಂಪರ್ಕ ಬೆಳೆದಿರಬಹುದು. ಮತೀನ್ ಬೆಂಗಳೂರಿನ ಘಟನೆಯ ನಂತರ ನಮ್ಮ ಸಂಪರ್ಕದಲ್ಲಿ ಇಲ್ಲ. ನನ್ನ ಮಗ ಹೀಗೆ ಆಗ್ತಾನೆ ಅಂತ ನಮಗೆ ಗೊತ್ತಿರಲಿಲ್ಲ. ಅವನು ಚೆನ್ನಾಗಿ ಇರಲಿ ಎಂದು ಓದಿಸಿದ್ವಿ.

ಬೆಂಗಳೂರಿನಲ್ಲಿ ಬಿಇ ಓದುತ್ತಿದ್ದ. ನಂತರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈಗ ಟೆಕ್ನಾಲಜಿ ಚೆನ್ನಾಗಿದೆ, ಮೊಬೈಲ್‍ನಲ್ಲಿ ಯಾರು ಏನ್ ಮಾಡ್ತಾ ಇದ್ದಾರೆ ಅಂತ ಗೂತ್ತಾಗುವುದಿಲ್ಲ. ಇದರಿಂದ ನಮಗೂ ಅವನ ಬಗ್ಗೆ ಹೆಚ್ಚು ಮಾಹಿತಿ ಸಿಗಲಿಲ್ಲ. ನನ್ನ ಮಗ ಮತೀನ್‍ಗೆ ನಾನು ಹೇಳುವುದಿಷ್ಟೆ, ಎಲ್ಲಾ ಇದ್ರೂ ಬಂದು ಬಿಡು ಎಂದು ತಂದೆ ಮೊಹಮ್ಮದ್ ಮನ್ಸೂರ್ ಹೇಳಿದ್ದಾರೆ.

ಬಾಂಬ್ ಬ್ಲಾಸ್ಟ್ ವೇಳೆ ಶಾರಿಖ್ ಗಂಟಲಿಗೆ ಸುಟ್ಟ ಗಾಯವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಗುಣಮುಖನಾದ ಮೇಲೆ ಪೊಲೀಸರು ಶಾರಿಖ್ ಗೆ ಡ್ರಿಲ್ ಮಾಡಲಿದ್ದು, ಅವನಿಂದ ಮತ್ತಷ್ಟು ಸ್ಪೋಟಕ ಮಾಹಿತಿಗಳು ಬಯಲಾಗಲಿವೆ.

ಶೇಷನ್ ಅವರಂತಹ ಚುನಾವಣಾ ಆಯುಕ್ತರ ಅವಶ್ಯಕತೆಯಿದೆ : ಸುಪ್ರೀಂ

ಮೈಸೂರಿನಲ್ಲಿ ಶಾರಿಖ್ ಸಂಪರ್ಕದಲ್ಲಿ ಯಾರ್ಯಾರು ಇದ್ದರು, ಯಾರೆಲ್ಲಾ ಪೊಲೀಸರ ಅತಿಥಿಗಳಾಗುತ್ತಾರೊ ಎಂದು ಕಾದು ನೋಡಬೇಕಿದೆ. ಒಟ್ಟಾರೆ ಮೈಸೂರಿನಲ್ಲೇ ಉಗ್ರ ಇದ್ದುಕೊಂಡು ಕುಕ್ಕರ್ ಬಾಂಬ್ ತಯಾರು ಮಾಡುವುದನ್ನು ಕಲಿತು ಮಂಗಳೂರಿನಲ್ಲಿ ಬ್ಲಾಸ್ಟ್ ಮಾಡಿದ ಕೃತ್ಯದಿಂದ ಇಡೀ ಸಾಂಸ್ಕøತಿಕ ನಗರಿಯ ಜನರು ಬೆಚ್ಚಿ ಬಿದ್ದಿರುವುದು ಹಾಗೂ ಆತಂಕಕ್ಕೆ ಒಳಗಾಗಿರುವುದಂತೂ ಸತ್ಯ.

Mysore, Mohammed Shareeq, Mangaluru, autorickshaw, blast,

Articles You Might Like

Share This Article