ದಸರಾ ಭದ್ರತೆಗಾಗಿ 2000 ಹೆಚ್ಚುವರಿ ಪೊಲೀಸರು

ಮೈಸೂರು,ಸೆ.24- ದಸರಾ ಭದ್ರತೆಗಾಗಿ ನಿಯೋಜಿಸಲಾಗಿರುವ ಹೆಚ್ಚುವರಿ ಪೊಲೀಸರ ಮೊದಲ ತಂಡ ಸೆ.27ರಿಂದ ನಗರಕ್ಕೆ ಆಗಮಿಸಲಿದೆ.ಮೊದಲ ಹಂತದಲ್ಲಿ ಹೊರ ಜಿಲ್ಲೆಗಳಿಂದ ಎರಡು ಸಾವಿರ ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಲಿದ್ದಾರೆ ಅಕ್ಟೋಬರ್ ಮೊದಲ ವಾರದಲ್ಲಿ 2ನೇ ತಂಡದ ಪೊಲೀಸರು ನಗರಕ್ಕೆ ಆಗಮಿಸುವರು.

ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಸೆ.27ರಂದು ದಸರಾ ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಬಗ್ಗೆ ಮಾಹಿತಿ ನೀಡಲಿದ್ದಾರೆ.  ದಸರಾ ಕಾರ್ಯಕ್ರಮ ನಡೆಯುವ ಅರಮನೆ, ಜಗನ್‍ಮೋಹನ ಅರಮನೆ, ಜೆ.ಕೆ.ಮೈದಾನ, ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ, ಮಹಾರಾಜ ಕಾಲೇಜು ಮೈದಾನ, ಚಾಮುಂಡಿ ಬೆಟ್ಟ ಸೇರಿದಂತೆ ವಿವಿಧ ಕಡೆ ಭದ್ರತಾ ಕರ್ತವ್ಯಕ್ಕೆ ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗುವುದು.