ಮುಂಬೈ,ಫೆ.16- ಮಹಾರಾಷ್ಟ್ರದ ಲಾತೂರ್‍ನಲ್ಲಿ ಕೇಳಿ ಬಂದ ನಿಗೂಢ ಶಬ್ದಗಳು ಅಲ್ಲಿನ ಜನರ ನಿದ್ದೆಗೆಡಿಸಿದೆ.ನಿನ್ನೆ ಲಾತೂರ್‍ನ ವಿವೇಕಾನಂದ ಚೌಕದ ಬಳಿ ನಿಗೂಢ ಶಬ್ದ ಕೇಳಿ ಬಂದಿತ್ತು. ಆದರೆ ಆ ಶಬ್ದ ಭೂಕಂಪನದ ಮುನ್ಸೂಚನೆ ಇರಬಹುದೆ ಎಂಬ ಅನುಮಾನ ಅಲ್ಲಿನ ಜನರನ್ನು ಕಾಡಿತ್ತು.
ಆದರೆ, ನಿಗೂಢ ಶಬ್ದಕ್ಕೂ ಭೂಕಂಪನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಕಾರಿಗಳು ಸ್ಪಷ್ಟನೆ ನೀಡಿದ ನಂತರ ನಿಗೂಢ ಶಬ್ದ ಎಲ್ಲಿಂದ ಬಂತು ಎನ್ನುವುದು ಇನ್ನು ನಿಗೂಢವಾಗಿಯೇ ಉಳಿದಿದೆ.1993 ರಲ್ಲಿ ಲಾತೂರ್ ಜಿಲ್ಲೆಯ ಕಿಲಾರಿ ಗ್ರಾಮ ಮತ್ತು ನೆರೆಯ ಪ್ರದೇಶಗಳಲ್ಲಿ ಸಂಭವಿಸಿದ್ದ ಭೀಕರ ಭೂಕಂಪನದಲ್ಲಿ ಸುಮಾರು 10,000 ಜನರನ್ನು ಬಲಿಯಾಗಿದ್ದರು.
ಸೆಪ್ಟೆಂಬರ್ 2022 ರಲ್ಲಿ, ಲಾತೂರ್ ಜಿಲ್ಲೆಯ ಹಸೋರಿ, ಕಿಲಾರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೂರು ಬಾರಿ ಅಂತಹ ಶಬ್ದಗಳು ಕೇಳಿಬಂದಿದ್ದವು.
ಕಳೆದ ಫೆ. 4 ರಂದು, ಜಿಲ್ಲೆಯ ನಿಲಂಗಾ ತಹಸಿಲ್‍ನ ನಿತೂರ್ -ಡಾಂಗೆವಾಡಿ ಪ್ರದೇಶದಲ್ಲಿ ಇಂತಹ ಶಬ್ದಗಳು ಕೇಳಿಬಂದವು ಎಂದು ಅಕಾರಿ ತಿಳಿಸಿದ್ದಾರೆ. ಇದೀಗ ಮತ್ತೆ ಜಿಲ್ಲೆಯ ವಿವೇಕಾನಂದ ಚೌಕದಲ್ಲಿ ನಿಗೂಢ ಶಬ್ದ ಕೇಳಿಬಂದಿರುವುದು ಎಲ್ಲರ ನಿದ್ದೆಗೆಡಿಸಿರುವುದಂತೂ ಸತ್ಯ.
#MysteriousSounds, #Maharashtra, #TriggerPanic, #QuakeRumours,