ರಾತ್ರೋರಾತ್ರಿ ಬದಲಾಯ್ತು ವಿವಾದಿತ ಗುಂಬಜ್ ಆಕಾರದ ಬಸ್ ನಿಲ್ದಾಣದ ಬಣ್ಣ

Social Share

ಮೈಸೂರು, ನ. 17- ವಿವಾದಿತ ಗುಂಬಜ್ ಮಾದರಿ ಬಸ್ ನಿಲ್ದಾಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ರಾತ್ರೋರಾತ್ರಿ ಬಣ್ಣವನ್ನೆ ಬದಲು ಮಾಡಲಾಗಿದೆ. ಗೋಲ್ಡï ಕಲರ್ ಇದ್ದ ಗುಂಬಜ್‍ಗೆ ಈಗ ಕೆಂಪು ಬಣ್ಣ ಹಚ್ಚಲಾಗಿದೆ.

ಗುಂಬಜ್ ಮಾದರಿಯ ಬಸ್ ನಿಲ್ದಾಣದ ವಿವಾದ ತಾರಕಕ್ಕೇರುತ್ತಿದ್ದಂತೆ ಹಲವು ಬದಲಾವಣೆ ಮಾಡಲಾಗುತ್ತಲೆ ಇದೆ. ಮೊದಲು ಗುಂಬಜ್‍ಗೆ ಗೋಲ್ಡ್ ಕಲರ್ ಹಾಕಲಾಗಿತ್ತು.

ಇರೋ ಬಸ್ಸುಗಳಿಗೆ ಚಾಲಕರಿಲ್ಲ, ಬಿಎಂಟಿಸಿಗೆ ಹೊಸ ಬಸ್ ಖರೀದಿ ಅವಶ್ಯಕತೆ ಏನಿತ್ತು.. ?

ಆದರೆ, ಈಗ ರಾತ್ರೋರಾತ್ರಿ ಗೋಲ್ಡ್ ಕಲರ್ ಮಾಸುವಂತೆ ಮಾಡಿ ಪೂರ್ಣ ಪ್ರಮಾಣದಲ್ಲಿ ಕೆಂಪು ಬಣ್ಣ ಬಳಿಯಲಾಗಿದೆ. ಸಂಸದ ಪ್ರತಾಪ್ ಸಿಂಹ ಈ ಬಸ್ ನಿಲ್ದಾಣ ನೆಲಸಮಗೊಳಿಸುವುದಾಗಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ರಾಮದಾಸ್ ಬಸ್ ನಿಲ್ದಾಣದಲ್ಲಿ ಹಲವು ಬದಲಾವಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

Articles You Might Like

Share This Article