ಮೈಸೂರು,ಸೆ.16- ಭಾರತದಲ್ಲಿನ ಮೃಗಾಲಯಗಳ ನಿರ್ವಹಣೆಯ ಪರಿಣಾಮಕಾರಿ ಮೌಲ್ಯಮಾಪನದಲ್ಲಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವು ಒಟ್ಟಾರೆ ವಿಭಾಗದಲ್ಲಿ ಮೂರನೇ ಸ್ಥಾನ ಮತ್ತು ದೊಡ್ಡ ಮೃಗಾಲಯ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ನಿರ್ವಹಣೆ, ಸ್ವಚ್ಛತೆ, ಪ್ರಾಣಿಗಳ ಎರವಲು ಪ್ರವಾಸಿಗರ ಆಕರ್ಷಣೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ನಡೆದಿರುವ ಮೌಲ್ಯಮಾಪನದಲ್ಲಿ ದೊಡ್ಡ ಮೃಗಾಲಯಗಳ ವಿಭಾಗದಲ್ಲಿ ತಮಿಳುನಾಡಿನ ಅರಿಗ್ನಾರ್ ಅಣ್ಣ ಜಿಯಾಲಾಜಿಕಲ್ ಪಾರ್ಕ್ ಶೇ.80ರಷ್ಟು ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವು ಎರಡನೇ ಸ್ಥಾನದಲ್ಲಿದೆ. ಗುಜರಾತ್‍ನ ಸಕ್ರ್ಕರ್‍ಬಾಗ್ ಜಿಯಾಲಾಜಿಕಲ್ ಪಾರ್ಕ್ ಶೇ.76ರಷ್ಟು ಅಂಕಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದೆ.
ಇದನ್ನೂ ಓದಿ: ಅಪ್ಪು ಜನ್ಮದಿನವನ್ನು ‘ಸ್ಪೂರ್ತಿ ದಿನ’ವಾಗಿ ಆಚರಿಸಲು ಸರ್ಕಾರ ಘೋಷಣೆ
ಮಧ್ಯಮವರ್ಗ ಮೃಗಾಲಯಗಳ ವಿಭಾಗದಲ್ಲಿ ಪಶ್ಚಿಮ ಬಂಗಾಳದ ಪದ್ಮಜನಾಯ್ಡು ಹಿಮಾಲಯನ್ ಜಿಯಾಲಾಜಿಕಲ್ ಪಾರ್ಕ್ ಶೇ.83ರಷ್ಟು ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದು, ಶೇ.78 ಅಂಕಪಡೆದ ಅಲಿಫೋರ್ ಜಿಯಾಲಾಜಿಕಲ್ ಪಾರ್ಕ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್ ಪ್ರತಿಕ್ರಿಯಿಸಿ, ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯವನ್ನು ಮೊದಲ ಸ್ಥಾನಕ್ಕೆ ತರಲು ಶ್ರಮಿಸಲಾಗುವುದು. ಈಗಾಗಲೇ ಇನೋಸಿಸ್, ಆರ್‍ಬಿಐ ಮೃಗಾಲಯದಲ್ಲಿ ಪ್ರಾಣಿಗಳ ಮನೆ ನಿರ್ಮಾಣಕ್ಕೆ ಸಹಕಾರ ನೀಡುತ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೌಲಭ್ಯ ನೀಡುವ ಜೊತೆಗೆ ಸ್ವಚ್ಛತೆ, ನಿರ್ವಹಣೆಗೆ ಹೆಚ್ಚಿನ ಗಮನ ಕೊಡಲಾಗುವುದು ಎಂದು ತಿಳಿಸಿದರು.