ದಸರಾಗೆ ಮಧುಮಗಳಂತೆ ಶೃಂಗಾರಗೊಳ್ಳುತ್ತಿದೆ ಮೈಸೂರು

Mysuru-Dasara--01

ಮೈಸೂರು, ಸೆ.19- ಮೈಸೂರು ದಸರಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ನಗರದ ಹೊರ ವಲಯದಲ್ಲಿ ಬಣ್ಣ ಬಣ್ಣದ ಚಿತ್ತಾರಗಳು ಸೆಳೆಯುವಂತಿದೆ. ನಗರದ ಹಲವು ಕಡೆಗಳಲ್ಲಿ ಗೋಡೆಗಳ ಮೇಲೆ ವರ್ಲಿ ಚಿತ್ರಗಳು ಕಲಾವಿದರ ಕುಂಚದಿಂದ ಅರಳಿದ್ದು , ನೋಡುಗರನ್ನು ತನ್ನತ್ತ ಸೆಳೆಯುವಂತೆ ಮಾಡಿದೆ.

ಉತ್ತರ ಭಾರತದ ಬುಡಕಟ್ಟು ಜನಾಂಗದ ಸಂಸ್ಕøತಿ ಸಾರುವ ಮತ್ತು ಅಲ್ಲಿ ಪ್ರಚಲಿತದಲ್ಲಿರುವ ವರ್ಲಿ ಚಿತ್ರಕಲೆಯನ್ನು ಮೈಸೂರಿನಲ್ಲಿ ಚಿತ್ರಿಸುವ ಮೂಲಕ ಯುವ ಕಲಾವಿದರಾದ ಪುನೀತ್ ಕುಮಾರ್, ಸಂತೋಷ್, ಚೇತನ್, ಮಂಜು ಅವರ ಕುಂಚದಿಂದ ಅರಳಿದ ಚಿತ್ರಗಳು ಗಮನ ಸೆಳೆದಿವೆ. ಸ್ವಚ್ಛತೆಯಿಲ್ಲದ ಪ್ರದೇಶಗಳಲ್ಲಿ ಸ್ವಚ್ಛ ಮಾಡಿ ವರ್ಲಿ ಚಿತ್ರಗಳನ್ನು ಬಿಡಿಸಿ ದಸರಾ ವೈಭವವನ್ನು ಸಾರುತ್ತಿದ್ದಾರೆ.

ಉತ್ತರ ಭಾರತದ ಬುಡಕಟ್ಟು ಜನಾಂಗದ ಸಂಸ್ಕøತಿ ಸಾರುವ ಚಿತ್ರಗಳೊಂದಿಗೆ ದಸರೆಯ ಗತ ವೈಭವವನ್ನು ಕಲಾವಿದರು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ. ವಾಟರ್ ಟ್ಯಾಂಕ್, ಗೋಡೆಗಳು, ಹಳೆ ಬಸ್ ನಿಲ್ದಾಣ, ಮೇಟಗಳ್ಳಿ, ಕುಂಬಾರಕೊಪ್ಪಲು, ಯಾದವಗಿರಿ ಬಡಾವಣೆಯ ಬಸ್ ನಿಲ್ದಾಣಗಳಲ್ಲಿ ಕಲಾವಿದರ ಕೈ ಚಳಕ ಮನ ಸೆಳೆಯುವಂತೆ ಮಾಡಿದೆ. ಇದಕ್ಕೆ ಮೈಸೂರು ಮಹಾನಗರ ಪಾಲಿಕೆ ಸ್ಪಂದಿಸಿದ್ದು , ಆಯುಕ್ತ ಜಗದೀಶ್ ಅವರು ಕಲಾವಿದರನ್ನು ಪೋತ್ಸಾಹಿಸಿ ಇನ್ನು ಹೆಚ್ಚಿನ ಸ್ಥಳಗಳಲ್ಲಿ ಚಿತ್ರಗಳನ್ನು ಬಿಡಿಸಲು ಸಲಹೆ ಮಾಡಿದ್ದಾರೆ

ಸಾಂಸ್ಕøತಿಕ ನಗರಕ್ಕಾಗಮಿಸುವ ಪ್ರವಾಸಿಗರಿಗೆ ಸುಸ್ವಾಗತ, ಮೈಸೂರು ಮಹಾನಗರ ಪಾಲಿಕೆ, ಮೈಸೂರು ದಸರಾ ಎಂಬುದನ್ನು ಸಹ ವಿವಿಧ ಚಿತ್ತಾರಗಳಿಂದ ಬರೆಯಲಾಗಿದ್ದು , ಈ ರಸ್ತೆಯಲ್ಲಿ ಹೋಗುವವರು ಒಮ್ಮೆ ನಿಂತು ನೋಡಬೇಕೆನ್ನಿಸದೆ ಇರಲಾರದು. ಒಟ್ಟಾರೆ ದಸರಾ ಮಹೋತ್ಸವಕ್ಕೆ ನಿರೀಕ್ಷೆಗೂ ಮೀರಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಒಂದು ರೀತಿ ಕಾರ್ಯೋನ್ಮುಖವಾಗಿದ್ದರೆ, ಮತ್ತೊಂದು ಕಡೆ ಮೈಸೂರು ಮಹಾನಗರ ಪಾಲಿಕೆ ಸಹ ಮತ್ತಷ್ಟು ಮೊಗದಷ್ಟು ಕಾರ್ಯಗಳನ್ನು ಮೂಡಿಸುವ ಮೂಲಕ ತಲ್ಲೀನವಾಗಿದೆ.

Sri Raghav

Admin