ಈ ಬಾರಿಯೂ 5660 ಕೆಜಿ ತೂಕದ ಅರ್ಜುನನೇ ಬಲಶಾಲಿ

Social Share

ಮೈಸೂರು,ಆ.11- ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಪ್ರತಿವರ್ಷದಂತೆ ಈ ವರ್ಷವೂ ತೂಕ ಪರೀಕ್ಷಿಸಿದ್ದು, ಈ ಬಾರಿಯೂ ಅರ್ಜುನನೇ ಬಲಶಾಲಿಯಾಗಿದ್ದಾನೆ. ದಸರಾ ಗಜಪಡೆಗಳ ತೂಕ ನೋಡುವ ಪ್ರಕ್ರಿಯೆ ನಗರದ ಧನ್ವಂತ್ರಿಯಲ್ಲಿನ ಲಾರಿಗಳಿಗೆ ತೂಕ ಹಾಕುವ ವೇವ್ ಬ್ರಿಡ್ಜ್ ನಲ್ಲಿ ನಡೆದಿದ್ದು, ಅರ್ಜನ ಮತ್ತೆ ತಾನೇ ಬಲಶಾಲಿಯೆಂದು ನಿರೂಪಿಸಿದ್ದಾನೆ.

ಅರ್ಜುನ ಬರೋಬ್ಬರಿ 5660 ಕೆ.ಜಿ ತೂಕ ಹೊಂದಿದ್ದರೆ, ಕಾವೇರಿ 3100, ಅಭಿಮನ್ಯು 4770, ಮಹೇಂದ್ರ 4250, ಲಕ್ಷ್ಮೀ 2920, ಚೈತ್ರ 3050, ಭೀಮ 3920, ಧನಂಜಯ 4810 ಗೋಪಾಲಸ್ವಾಮಿ, 5140 ಕೆ.ಜಿ ತೂಕ ಹೊಂದಿದ್ದಾರೆ.

ಡಿಸಿಎಫ್ ಡಾ.ಕರಿಕಾಳನ್ ಮಾತನಾಡಿ, ಆನೆಗಳಿಗೆ 14ರಿಂದ ಅರಮನೆ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ಆರಂಭವಾಗುತ್ತದೆ. ಆನೆಗಳ ತೂಕ ಹೆಚ್ಚಿಸುವುದು ನಮ್ಮ ಉದ್ದೇಶವಲ್ಲ. ಆನೆಗಳ ಆರೋಗ್ಯ ಕಾಪಾಡುವುದಷ್ಟೇ ನಮ್ಮ ಉದ್ದೇಶ.

ಆನೆಗಳಿಗೆ ಈಗ ಪ್ರೋಟಿನ್ ಆಹಾರ ಹೆಚ್ಚಿಸುತ್ತೇವೆ. ದಸರಾ ಮುಗಿಯುವುದರೊಳಗೆ ಎಲ್ಲಾ ಆನೆಗಳ ತೂಕ ಹೆಚ್ಚು ಕಮ್ಮಿ 500 ಕೆ.ಜಿ ಹೆಚ್ಚಾಗುತ್ತದೆ ಎಂದು ವಿವರಿಸಿದರು.

Articles You Might Like

Share This Article