ಮೈಸೂರಲ್ಲಿ ಹೃದಯಾಘಾತದಿಂದ ಯೋಧ ಸಾವು

Heart-Attack
ಮೈಸೂರು, ಜೂ. 20 -ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಯೋಧರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕೆ.ಆರ್.ನಗರ ತಾಲೂಕು ಮೂವತ್ತೂರು ಗ್ರಾಮದ ವಾಸಿ ಮಹೇಶ್(47) ಮೃತ ಯೋಧ. ಈತ ಜಮ್ಮು-ಕಾಶ್ಮೀರ , ಗೋವಾ, ಜಬ್ಬಲ್‍ಪುರ ಸೇರಿದಂತೆ ಇನ್ನೂ ಹಲವೆಡೆ ಸೇವೆ ಸಲ್ಲಿಸಿದ್ದು ನಿವೃತ್ತಿಗೆ 2 ವರ್ಷ ಬಾಕಿ ಇತ್ತು.  ರಜೆ ಮೇಲೆ ಜೂ.11 ರಂದು ಸ್ವಗ್ರಾಮಕ್ಕೆ ಆಗಮಿಸಿದ್ದ ಮಹೇಶ್ ನಿನ್ನೆ ಮಧ್ಯಾಹ್ನ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಕೆ.ಆರ್.ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮೈಸೂರಿನ ಜಯದೇವ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

Sri Raghav

Admin