ಮೈಸೂರಿಗರೇ ಇಲ್ಲಿ ಗಮನಿಸಿ..

Social Share

ಮೈಸೂರು,ಸೆ.25 – ವಿಶ್ವವಿಖ್ಯಾತ ದಸರಾ ಮಹೋತ್ಸವದ ಹಿನ್ನಲೆಯಲ್ಲಿ ವಾಹನ ಸಂಚಾರ ಹೆಚ್ಚಾಗುವುದರಿಂದ ನಾಳೆಯಿಂದ ಅ.5ರವರೆಗೆ ಏಕಮುಖ ವಾಹನ ಸಂಚಾರ ವ್ಯವಸ್ಥೆ ಮಾಡಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಸಿದ್ದಾರೆ.

ನಗರದಲ್ಲಿ ನಾಳೆಯಿಂದ ಅ.5ರವರೆಗೆ ಏಕಮುಖ ವಾಹನ ಸಂಚಾರ ವ್ಯವಸ್ಥೆಯಿದ್ದು, ಅರಮನೆಯ ಸುತ್ತಲಿನ ರಸ್ತೆಗಳಾದ ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತ, ಕುಸ್ತಿ ಅಖಾಡ ಜಂಕ್ಷನ್, ಬಿ.ಎನ್.ರಸ್ತೆ, ಜಯಚಾಮರಾಜ ಒಡೆಯರ್ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಚಾಮರಾಜ ಒಡೆಯರ್ ವೃತ್ತ , ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ, ಬಸವೇಶ್ವರ ವೃತ್ತ, ಚಾಮರಾಜ ಜೋಡಿ ರಸ್ತೆಗಳಲ್ಲಿ ಏಕ ಮುಖ ವಾಹನ ಸಂಚಾರವಿರುತ್ತದೆ.

ಇದನ್ನೂ ಓದಿ : ಮತ್ತೆ ಕಿಮ್ ಕಿತಾಪತಿ, ಕ್ಷಿಪಣಿ ಉಡಾಯಿಸಿ ಉತ್ತರ ಕೊರಿಯಾ ಕಿರಿಕ್

ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಬರುವಂತಹ ವಾಹನಗಳು, ಬಾಟಾ ಜಂಕ್ಷನ್, ವಿಶ್ವೇಶ್ವರಯ್ಯ ವೃತ್ತ, ಇರ್ವಿನ್ ರಸ್ತೆ, ನೆಹರು ವೃತ್ತ ,ಅಶೋಕ ರಸ್ತೆ ಮಹಾವೀರ ವೃತ್ತ, ಚಾಮರಾಜ ಒಡೆಯರ್ ವೃತ್ತ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದ ವರೆಗೆ ಏಕಸಂಚಾರವಿರುತ್ತದೆ.

ಅಶೋಕ ರಸ್ತೆಯಲ್ಲಿ, ದಾವೂದ್ ಖಾನ್ ರಸ್ತೆ ಜಂಕ್ಷನ್ (ಗಾಂ ಮೆಡಿಕಲ್ಸ್)ನಿಂದ ನೆಹರು ಸರ್ಕಲ್‍ವರೆಗೆ ದಕ್ಷಿಣಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅಶೋಕ ರಸ್ತೆಯಲ್ಲಿ ನೆಹರು ಸರ್ಕಲ್‍ನಿಂದ ದಾವೂದ್ ಖಾನ್ ರಸ್ತೆ ಜಂಕ್ಷನ್ ವರೆಗೆ ವಾಹನಗಳ ಸಂಚಾರವ್ನನು ನಿರ್ಬಂಸಲಾಗಿದೆ.

ಹಾಗೇಯೇ ಚಾಮರಾಜ ಜೋಡಿ ರಸ್ತೆಯಿಂದ ಬನುಮಯ್ಯ ಚೌಕದವರೆಗೆ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಿದ್ದು, ಬನುಮಯ್ಯ ಚೌಕದಿಂದ ಚಾಮರಾಜ ಜೋಡಿ ರಸ್ತೆ ವರೆಗೆ ಉತ್ತದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಸಲಾಗಿದೆ.

Articles You Might Like

Share This Article