ಅಮೆರಿಕ ಸಮರಾಭ್ಯಾಸಕ್ಕೆ ಉತ್ತರ ಕೊರಿಯಾ ಆಕ್ರೋಶ

Social Share

ಸಿಯೋಲ್, ನ.7 -ನಮ್ಮ ವಾಯುನೆಲೆಗಳು ಮತ್ತು ಯುದ್ಧವಿಮಾನಗಳ ಮೇಲೆ ದಾಳಿ ಮಾಡಲು ಅಮೆರಿಕ ಇಲ್ಲಿ ಸಮರಾಭ್ಯಾಸ ನಡಸಲಾಗುತ್ತಿದೆ ಎಂದು ಉತ್ತರ ಕೊರಿಯಾದ ಸೇನೆ ಆರೋಪಿಸಿದೆ. ಅಮೆರಿಕ -ದಕ್ಷಿಣ ಕೊರಿಯಾದ ಸಮರಾಭ್ಯಾಸ ಪ್ರಚೋದನೆಯನ್ನು ಎದುರಿಸಲು ಸಂಪೂರ್ಣವಾಗಿ ನಾವು ಯಾವುದೇ ಕರುಣೆಯಿಲ್ಲದ ಕ್ರಮಕ್ಕೆ ಸಂಕಲ್ಪ ಮಾಡಿದ್ದೇವೆ ಎಂದು ಎಚ್ಚರಿಸಿದೆ.

ಶತ್ರುಗಳ ಪ್ರಚೋದನಕಾರಿ ಮಿಲಿಟರಿ ಕಾರ್ಯಾಚರಣೆ ಹೆಚ್ಚು ನಿರಂತರವಾಗಿ ಮುಂದುವರಿಯುತ್ತವೆ, ಅವರನ್ನು ಎದುರಿಸಲು ನಾವು ಸಿದ್ದವಾಗಿದ್ದೇವೆ ಎಂದು ಕೊರಿಯನ್ ಜನರಲ್ ಸ್ಟಾಫ್ ಪೀಪಲ್ಸ ಆರ್ಮಿ ರಾಜ್ಯ ಮಾಧ್ಯಮ ತಿಳಿಸಿದೆ.

ಬೆಂಗಳೂರಿನಲ್ಲಿ 2ನೇ ಫೀಲ್ ಆಟ್ ಹೋಮ್ ಸೀನಿಯರ್ ಕೇರ್

ವಿಭಿನ್ನ ಎತ್ತರಗಳು ಮತ್ತು ದೂರಗಳಲ್ಲಿ ಶತ್ರು ವಿಮಾನಗಳನ್ನು ನಾಶಗೊಳಿಸಲು ಕಂಡಾಂತರ ಕ್ಷಿಪಣಿಗಳ ಜೊತೆಗೆ ಶತ್ರುಗಳ ಕಾರ್ಯಾಚರಣೆಯ ಕಮಾಂಡ್ ಸಿಸ್ಟಮ್ ಅನ್ನು ತಟಸ್ಥಗೊಳಿಸುವ ಸಮರಾಭ್ಯಾಸ ಒಳಗೊಂಡಿದೆ.

ಹನಿಟ್ರ್ಯಾಪ್‍ಗೆ ಸಿಲುಕಿದ ಹಾಲಿನ ಬೂತ್‍ಮಾಲೀಕ, ಮಾಯಾಂಗನೆ ಅರೆಸ್ಟ್

ಸ್ವಾಭಾವಿಕವಾಗಿ ಇದು ಉತ್ತರ ಕೊರಿಯಾಗೆ ಆತಂಕ ತಂದಿದೆ ಎಂದು ವಿಶ್ಲೇಶಿಸಲಾಗಿದೆ.ಅಮೆರಿಕ-ದಕ್ಷಿಣ ಕೊರಿಯಾದಿಂದ ಸುಧಾರಿತ ಎಫ್-35 ಫೈಟರ್ ಜೆಟ್‍ಗಳು ಸೇರಿದಂತೆ 240 ಯುದ್ಧ ವಿಮಾನಗಳು ಈ ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದವು.

Articles You Might Like

Share This Article