ಬಿಜೆಪಿ ಪರ ಎನ್.ಮಹೇಶ್ ಬ್ಯಾಟಿಂಗ್

Spread the love

ಕೊಳ್ಳೇಗಾಲ, ಡಿ.2- ಶಾಸಕ ಎನ್.ಮಹೇಶ್ ಬಿಜೆಪಿ ಪರ ಬ್ಯಾಟಿಂಗ್ ಮಾಡುವ ಮೂಲಕ ಅಚ್ಚರಿಯ ನಡೆ ಪ್ರದರ್ಶಿಸಿದ್ದಾರೆ. ಬಿಜೆಪಿ ಸರ್ಕಾರ ಸುಭದ್ರವಾಗಿರಲು ಹೆಚ್ಚಿನ ಸಂಖ್ಯೆ ಅವಶ್ಯಕತೆ ಇದೆ. ಹಾಗಾಗಿ ರಾಜ್ಯದ ಜನ ಬಿಜೆಪಿಯನ್ನು ಬೆಂಬಲಿಸಿ, ಗೆಲ್ಲಿಸಿ ಎಂದು ಕರೆ ಕೊಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸಿ, ಸರ್ಕಾರ ಸುಭದ್ರಗೊಳಿಸಿ, ಸರ್ಕಾರ ಬಿದ್ದು ಹೋದರೆ ಏನು ಗತಿ ಎಂದು ಆತಂಕದಿಂದ ನುಡಿದಿದ್ದಾರೆ.

ಇಪ್ಪತ್ತು ವರ್ಷಗಳ ನಂತರ ಗೆದ್ದಿದ್ದೇನೆ. ನನ್ನಂತೆ 90 ಶಾಸಕರು ಮೊದಲ ಬಾರಿಗೆ ಗೆದ್ದರು. ಯಾರಿಗೂ ಮಧ್ಯಂತರ ಚುನಾವಣೆ ಬೇಕಿರಲಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಗೆದ್ದರೆ ಮುಂದಿನ ಮೂರೂವರೆ ವರ್ಷಗಳ ಕಾಲ ಸರ್ಕಾರ ಇರುತ್ತದೆ. ಬಿಜೆಪಿ ಇದ್ದರೆ ಅಭಿವೃದ್ಧಿ ಎಂದು ನೀಡಿರುವ ಹೇಳಿಕೆಗಳು ಅಚ್ಚರಿ ಮೂಡಿಸಿದೆ. ಬಿಎಸ್‍ಪಿಯಿಂದ ಉಚ್ಛಾಟಿತಗೊಂಡಿರುವ ಶಾಸಕ ಎನ್.ಮಹೇಶ್ ಇದೀಗ ಬಿಜೆಪಿ ಪರ ಹೇಳಿಕೆ ನೀಡುತ್ತಿದ್ದಾರೆ.

Facebook Comments