ಪಿ.ರಾಮಯ್ಯ ಪರಿಶುದ್ಧ ಪತ್ರಕರ್ತ : ಸಿಎಂ ಗುಣಗಾನ

Social Share

ಬೆಂಗಳೂರು, ಅ.27- ಹಿರಿಯ ಪತ್ರಕರ್ತ ರಾಮಯ್ಯ ಅವರ ವರದಿ ಹಾಗೂ ಬರಹದಿಂದ ನಾವು ಬಹಳಷ್ಟು ಕಲಿಯಬಹುದು. ಅವರ ಸಾವಿರ ಹೆಜ್ಜೆಗಳಲ್ಲಿ ನಾವು ಎರಡು ಹೆಜ್ಜೆಯನ್ನಾದರೂ ಇಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದರು.

ಗಾಂಧಿಭವನದಲ್ಲಿಂದು ಅಭಿಮಾನಿ ಪ್ರಕಾಶನ ಹೊರತಂದಿರುವ ನಾನು ಹಿಂದೂ ರಾಮಯ್ಯ ಪುಸ್ತಕ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ರಾಮಯ್ಯ ಅವರ ಕೃತಿಯಲ್ಲಿ ಸಮಾಜ, ರಾಜಕೀಯ ಹಾಗೂ ಜನರ ಬದುಕನ್ನು ಚಿತ್ರಿಸಲಾಗಿದೆ. ರಾಮಯ್ಯ ಅವರ ಮಾರ್ಗದರ್ಶನ ಸಮಾಜಕ್ಕೆ, ಸರ್ಕಾರಕ್ಕೆ ಅವಶ್ಯಕ ಎಂದು ಹೇಳಿದರು.

ಎಲ್ಲರ ಪ್ರೀತಿ ವಿಶ್ವಾಸವೇ ನನ್ನ ಆಸ್ತಿ : ಪತ್ರಿಕಾರಂಗದ ಭೀಷ್ಮ ಪಿ.ರಾಮಯ್ಯ

ಅವರು ಸಕ್ಕರೆ ತಿನ್ನುವುದಿಲ್ಲ ಆದರೆ, ಎಲ್ಲರಿಗೂ ಸಕ್ಕರೆ ತಿನ್ನಿಸಿದ್ದಾರೆ. ಇವರು ಶತಾಯುಷಿಯಾಗಿ ಇನ್ನೊಂದು ಪುಸ್ತಕವನ್ನು ಬರೆಯಲಿ. ಅಭಿಮಾನಿ ಪ್ರಕಾಶನವೇ ಅದನ್ನು ಹೊರತರಲಿ ಎಂದು ಅವರು ಹೇಳಿದರು.

ರಾಮಯ್ಯ ಅವರ ಬರಹ ಮತ್ತು ವರದಿಯಿಂದ ಬಹಳಷ್ಟು ಕಲಿಯಬಹುದು, ಅವರು ಸಾವಿರ ಹೆಜ್ಜೆಯಲ್ಲಿ ಎರಡು ಹೆಜ್ಜೆಯನ್ನಾದರೂ ಇಡಬಹುದು. ಸತ್ಯವನ್ನು ಕೂಡ ಪ್ರಿಯವಾಗಿ ಹೇಳುವುದು ರಾಮಯ್ಯನವರ ಕಲೆ. ಈ ಕೃತಿಯಲ್ಲಿ ಹೇಳಿರುವುದರಿಂದ ಹತ್ತಿಪ್ಪತ್ತು ಪಟ್ಟು ಹೇಳದಿರುವುದು ಇದೆ.

ಮೂರು ತಲೆಮಾರಿನ ಪತ್ರಕರ್ತರನ್ನು ನೋಡಿದ್ದಾರೆ. ಎರಡು ಪೀಳಿಗೆಯ ರಾಜಕಾರಣಿಗಳನ್ನು ಕಂಡಿದ್ದಾರೆ. ಎಲ್ಲ ಮುಖ್ಯಮಂತ್ರಿಗಳ ಜೊತೆ ಆತ್ಮೀಯರಾಗಿದ್ದರು. ಆದರೂ ಯಾವುದೇ ರೀತಿಯಲ್ಲಿ ಈ ಸಂಬಂಧವನ್ನು ವೈಯಕ್ತಿಕವಾಗಿ ಬಳಸಿಕೊಳ್ಳದ ಶುದ್ಧ ಪತ್ರಕರ್ತರು ಎಂದು ಗುಣಗಾನ ಮಾಡಿದರು.

ಅಪರೂಪದ ವ್ಯಕ್ತಿಯಾದ ಇವರು ಅಂದಿನಿಂದ ಇಂದಿನವರೆಗೂ ಮುಗ್ಧತೆಯನ್ನು ಉಳಿಸಿಕೊಂಡ ಹಾಗೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದವರು. ಯಾವುದಕ್ಕೂ ರಾಜಿ ಆಗದೆ ಸತ್ಯ ಬರೆದಿದ್ದಾರೆ. ಅವರದು ತಪಸ್ವಿ ಬದುಕು. ರಾಮಯ್ಯ ಅವರಿಗೆ ಸತ್ಯವೇ ಐಡಿಯಾ, ಐಡಿಯಾಲಜಿ. ಸತ್ಯದ ಊರ್ಣವನ್ನು ಬರೆಯುತ್ತಿದ್ದರು ಎಂದರು.

ವಾಸ್ತವಿಕ ಸಂಗತಿಗಳಿಂದ ಕೆಲವರಿಗೆ ನೋವಾಗಿರಬಹುದು. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಗೆ ಗೌರವ ನೀಡುತ್ತಿದ್ದರು. ಹಿಂದು ಪತ್ರಿಕೆಗೂ ರಾಮಯ್ಯ ಅವರಿಗೂ ಅನ್ಯೋನ್ಯ ಸಂಬಂಧವಿದೆ. ಸಮಾಜಮುಖಿಯಾಗಿ ಕೆಲಸ ಮಾಡಿದ್ದಾರೆ. ರಾಮಯ್ಯ ನಾಡಿನ ಆಸ್ತಿ ಎಂದು ಬಣ್ಣಿಸಿದರು.

ನವೆಂಬರ್‌ನಲ್ಲೂ ಸಾಲು ಸಾಲು ಬ್ಯಾಂಕ್‍ ರಜೆ

ರಾಮಯ್ಯ ತಿಳಿದಿರುವುದರಿಂದ ಹೆಚ್ಚು ಕಲಿಸಿದ್ದಾರೆ. ಪತ್ರಕರ್ತರಿಗೆ ಹತ್ತು-ಹಲವು ಜವಾಬ್ದಾರಿಗಳಿವೆ ಎಂಬುದನ್ನು ಅವರ ಬರಹದಿಂದ ಕಲಿಯಬೇಕು. ವ್ಯಕ್ತಿ ಮಾತನಾಡುವಾಗ ನಿಯಂತ್ರಣ ತಪ್ಪಬಹುದು. ಬರೆಯುವಾಗ ಸ್ವಯಂ ನಿಯಂತ್ರಣ ಇರಬೇಕು. ಅವರು ಮಾತನಾಡುವಾಗಲೂ ನಿಯಂತ್ರಣ ಮೀರಲಿಲ್ಲ ಎಂದು ಅವರು ಶ್ಲಾಘಿಸಿದರು.

Articles You Might Like

Share This Article