ನವದೆಹಲಿ, ಮಾ. 13- ಮಹೋನ್ನತ RRR ಸಿನಿಮಾದ ನಾಟು ನಾಟು ಗೀತೆಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಲಭಿಸುತ್ತದೆ ಎಂದು ಮೊದಲಿನಿಂದಲೂ ನಿರೀಕ್ಷಿಸಿದ್ದೆವು, ಕೊನೆಗೂ ಹಾಲಿವುಡ್‍ನ ಗೀತೆಗಳಿಗೆ ಪ್ರಬಲ ಪೈಪೋಟಿ ನಡುವೆಯೂ ಆಸ್ಕರ್ ಪ್ರಶಸ್ತಿ ಬಂದಿರುವುದು ತುಂಬಾ ಸಂತಸ ತಂದಿದೆ ಎಂದು ನಿರ್ದೇಶಕ ರಾಜಮೌಳಿ ಸಂತಸ ಹಂಚಿಕೊಂಡಿದ್ದಾರೆ.
ನಾಟು ನಾಟು ಗೀತೆಯ ಮೇಕಿಂಗ್ ತುಂಬಾ ಶ್ರೀಮಂತಿಕೆಯಿಂದ ಕೂಡಿದ್ದು ಈ ಗೀತೆಗೆ ವಿಶ್ವದೆಲ್ಲೆಡೆ ಪ್ರಶಂಸೆಗಳ ಸುರಿಮಳೆಯೇ ಹರಿದುಬಂದಿತ್ತು. ಈಗಾಗಲೇ ಈ ಗೀತೆಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಿದ್ದು, ನಮಗೆ ಸಂತಸ ಮೂಡಿಸಿತ್ತು. ಈಗ ಆಸ್ಕರ್ ಪ್ರಶಸ್ತಿ ಲಭಿಸಿರುವುದು ಸಂತಸವನ್ನು ದುಪ್ಪಟ್ಟು ಗೊಳಿಸಿದೆ ಎಂದು ಹೇಳಿದರು.
ಆಸ್ಕರ್ ಅಂಗಳದಲ್ಲಿ ಭಾರತೀಯ ಚಿತ್ರಗಳ ಸದ್ದು, ಇಲ್ಲಿದೆ ಪ್ರಶಸ್ತಿಗಳ ಕಂಪ್ಲೀಟ್ ಡೀಟೇಲ್ಸ್
ನಾಟು ನಾಟು ಗೀತೆಯಲ್ಲಿ ಜ್ಯೂನಿಯರ್ ಎನ್‍ಟಿಆರ್, ಯಂಗ್ ಟೈಗರ್ ಎನ್‍ಟಿಆರ್ ಅವರು ತುಂಬಾ ಸೊಗಸಾಗಿ ಹೆಜ್ಜೆ ಹಾಕಿದ್ದಾರೆ. ಆಸ್ಕರ್ ಪ್ರಶಸ್ತಿ ಲಭಿಸಿರುವುದು ಅವರಿಗೂ ಖುಷಿ ತಂದಿದ್ದು, ಪ್ರಶಸ್ತಿಗೆ ಕಾರಣರಾದ ಇಡೀ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ರಾಜಮೌಳಿ ಹೇಳಿದರು.
BIG NEWS: ಆಸ್ಕರ್ ಗೆದ್ದ ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಹಾಡು
ಭಾರತದಿಂದ ಸ್ರ್ಪಧಿಸಿದ್ದ ದಿ ಎಲಿಫೆಂಟ್ ವಿಸ್ಟರರ್ಸ್‍ಗೆ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿದ್ದು ಆದರೆ ಭಾರತದ ಆಲ್ ದಟ್ ಬ್ರೀತ್ಸ್’ ಸಾಕ್ಷ್ಯ ಚಿತ್ರವೂ ಅಂತಿಮ ಸುತ್ತಿಗೆ ಪ್ರವೇಶಿಸಿದರೂ ಪ್ರಶಸ್ತಿ ಗೆಲ್ಲದೆ ನಿರಾಶೆ ಮೂಡಿಸಿದೆ.
‘Naatu Naatu, wins, Best, Original, Song, Oscars, Rajamouli,