ನಬಾರ್ಡ್‍ನಿಂದ ರಾಜ್ಯಕ್ಕೆ 3.90 ಲಕ್ಷ ಕೋಟಿ ಸಾಲ ಯೋಜನೆ

Social Share

ಬೆಂಗಳೂರು,ಜ.23- ಕರ್ನಾಟಕ ರಾಜ್ಯಕ್ಕೆ 3.90 ಲಕ್ಷ ಕೋಟಿ ರೂ. ಗಳನ್ನು ಆದ್ಯತಾ ವಲಯದ ಸಾಲದ ಗುರಿಯನ್ನು 2023-24ನೇ ಸಾಲಿಗೆ ನಬಾರ್ಡ್ ಯೋಜಿಸಿದೆ ಎಂದು ನಬಾರ್ಡ್‍ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಟಿ.ರಮೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ವಲಯಕ್ಕೆ ಶೇ.50ರಷ್ಟು ಪಾಲನ್ನು ನೀಡಲಾಗುತ್ತಿದೆ(1.79 ಲಕ್ಷ ಕೋಟಿ) ಉಳಿದಂತೆ ಎಂಎಸ್‍ಎಂಇಗಳಿಗೆ 1.35 ಲಕ್ಷ ಕೋಟಿ(38%) ಮತ್ತು ಇತರೆ ಆದ್ಯತಾ ವಲಯಕ್ಕೆ 45 ಸಾವಿರ ಕೋಟಿ ( 12%) ಸಾಲ ಯೋಜನೆಯನ್ನು ರೂಪಿಸಿದೆ ಎಂದು ಅವರು ತಿಳಿಸಿದರು.

ಆಹಾರ, ರೈತರ ಕೃಷಿ ಉತ್ಪನ್ನಗಳ ಸಂಸ್ಕರಣೆ ನಿಟ್ಟಿನಲ್ಲಿ ಎಂಎಸ್‍ಎಂಇಗಳಿಗೆ ವಿಶೇಷ ರೀತಿಯಲ್ಲಿ ಔಪಚಾರಿಕ ಸಾಲ ಯೋಜನೆಗೂ ಕೂಡ ಒತ್ತು ನೀಡಲಾಗಿದೆ ಎಂದು ತಿಳಿಸಿದರು. ರಾಜ್ಯದ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಐಎನ್‍ಎಸ್ ಪ್ರಸಾದ್ ಮಾತನಾಡಿ, ರಾಜ್ಯದಲ್ಲಿ ಸುಮಾರು 3/2ರಷ್ಟು ಕೃಷಿ ಯೋಗ್ಯ ಪ್ರದೇಶವಿದ್ದು, ಇದರಲ್ಲಿ ಮಳೆಯಾಶ್ರಿತ, ನೀರಾವರಿ, ಬರಪೀಡಿತ ಪ್ರದೇಶಗಳಿವೆ.

ಗರ್ಭ ಮುಂದುವರೆಸುವ, ತೆಗೆಸುವ ಅಧಿಕಾರ ಮಹಿಳೆಗೆ ಮಾತ್ರ ಸೇರಿದೆ : ಬಾಂಬೆ ಹೈಕೋರ್ಟ್

ರಾಜ್ಯ ಸರ್ಕಾರ ಸಣ್ಣ, ಮಧ್ಯಮ, ಭಾರೀ ನೀರಾವರಿ ಯೋಜನೆಗಳಿಗೆ ಸಮಾನ ಹಂತದಲ್ಲಿ ಅನುದಾನಗಳನ್ನು ಒದಗಿಸಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಕೃಷಿ ವಲಯದಲ್ಲಿ ಉದ್ಯೋಗ ಸೃಷ್ಟಿಗೂ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು, ರೈತರಿಗೆ ಆರ್ಥಿಕವಾಗಿ ಸಹಾಯ ಧನದ ಜೊತೆಗೆ ಸಾಲಸೌಲಭ್ಯ ಕೂಡ ಹೆಚ್ಚಿನ ರೀತಿಯಲ್ಲಿ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ವಿಧಾನಸೌಧದ ಮುಂಭಾಗ ನೇತಾಜಿ ಪ್ರತಿಮೆ ಮರುಸ್ಥಾಪನೆ : ಸಿಎಂ ಬೊಮ್ಮಾಯಿ

ಶಾಲಿನಿ ರಜನೀಶ್, ಆರ್‍ಬಿಐನ ಪ್ರಾದೇಶಿಕ ವ್ಯವಸ್ಥಾಪಕರಾದ ಸುನಂದ ಭಾತ್ರ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.

NABARD, agriculture sector, loan,

Articles You Might Like

Share This Article