ಕೆಂಪೇಗೌಡರ ಚಿಂತನೆಯಂತೆಯೇ ಬೆಂಗಳೂರು ನಗರ ನಿರ್ಮಾಣ : ಸಿಎಂ

Social Share

ಬೆಂಗಳೂರು,ನ.11-ನಾಡುಪ್ರಭು ಕೆಂಪೇಗೌಡರ ಆದರ್ಶ, ವಿಚಾರಧಾರೆ, ಚಿಂತನೆಯಂತೆಯೇ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇಂದು ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸಾಮಂತರಾಗಿದ್ದ ನಾಡಪ್ರಭು ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯ ಸುವರ್ಣ ಯುಗದ ಕಲ್ಪನೆಯಂತೆಯೇ ಬೆಂಗಳೂರು ನಗರ ನಿರ್ಮಾಣ ಮಾಡಿದ್ದರು.

ಅವರ ದೂರದೃಷ್ಟಿಯಯಿಂದ ಕೆರೆಕಟ್ಟೆಗಳು, ಪೇಟೆಗಳನ್ನು ನಿರ್ಮಿಸಿ ಬೆಂಗಳೂರು ಕಟ್ಟಿದ್ದರು. ಇಂದು ಬೆಂಗಳೂರು ವಿಶ್ವಮಾನ್ಯತೆ ಪಡೆದಿದೆ. ಭವ್ಯ ರಾಜ್ಯ ನಿರ್ಮಾಣದ ಅವರ ಕನಸನ್ನು ನನಸು ಮಾಡಲು ನಮ್ಮ ಸರ್ಕಾರ ಸಂಕಲ್ಪ ಮಾಡಿದೆ ಎಂದು ಹೇಳಿದರು.

ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್-2 ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರಮೋದಿ ಅವರು ಗುಜರಾತ್‍ನಲ್ಲಿ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಬೃಹತ್ ಪ್ರತಿಮೆ ಸ್ಟ್ಯಾಚ್ ಆಫ್ ಯೂನಿಟಿ ಮಾದರಿಯಲ್ಲಿ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರಗತಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದು ಅವೀಸ್ಮರಣೀಯವಾದುದು ಎಂದು ಹೇಳಿದರು.

ನಮ್ಮ ಕಲೆ, ಸಂಸ್ಕøತಿ, ಆಚಾರ-ವಿಚಾರಗಳನ್ನು ಬೆಳೆಸಿ ಸಮೃದ್ಧ ನಾಡನ್ನು ಕಟ್ಟುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಕೂಡ ಬೆಂಬಲ ನೀಡಿ ರಾಜ್ಯಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಈ ಹಿಂದೆ ಉಪನಗರ ರೈಲ್ವೆ ಯೋಜನೆಯನ್ನು ಆರಂಭಿಸಲಾಗಿದೆ.

‘ಹಿಂದೂ’ ನಂತರ ‘ಸಾಂಭಾಜಿ’ ವಿವಾದಲ್ಲಿ ಸತೀಶ್ ಜಾರಕಿಹೊಳಿ

ಬಹುದಿನಗಳ ಬೇಡಿಕೆಯಾಗಿದ್ದ ವಂದೇ ಭಾರತ್ ರೈಲ್ವೆ ಸೇವೆ, ಕಾಶಿ ಯಾತ್ರಿಗರಿಗೆ ಭಾರತ್ ಗೌರವ್ ಕಾಶಿದರ್ಶನ್ ರೈಲುಗಳಿಗೆ ಚಾಲನೆ ನೀಡಲಾಗಿದೆ. ಇದಲ್ಲದೆ ಇಡೀ ದೇಶದಲ್ಲೇ 2ನೇ ಅತಿದೊಡ್ಡ ವಿಮಾನನಿಲ್ದಾಣ ಎಂದು ಖ್ಯಾತಿ ಪಡೆದಿರುವ ಕೆಂಪೇಗೌಡರ ಅಂತಾರಾಷ್ಟ್ರೀಯ 2ನೇ ಟರ್ಮಿನಲ್ ಕೂಡ ಲೋಕಾರ್ಪಣೆಗೊಂಡಿದೆ ಎಂದರು.

ಇಡೀ ವಿಶ್ವ ಆರ್ಥಿಕ ಹಿಂಜರಿತದಿಂದ ನಲುಗುತ್ತಿದ್ದರು, ಬಲಿಷ್ಠ ಭಾರತ ಮಾತ್ರ ಅಳುಕಿಲ್ಲದೆ ಮುನ್ನಡೆದಿತ್ತು. ಇದಕ್ಕೆ ಮೋದಿಯವರ ಅದ್ಭುತ ಯೋಜನೆಗಳೇ ಕಾರಣ ಎಂದು ಹೇಳಿದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ನಾಳೆ ವಿಶೇಷ ಅಭಿಯಾನ

ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತಿರುವ ಆಧುನಿಕ ಯುಗಪುರಷನ ಕೈಯಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಂಡಿರುವುದು ದೈವ ಸಂಕಲ್ಪ ಎಂದು ಇದೇ ಸಂದರ್ಭದಲ್ಲಿ ಬಣ್ಣಿಸಿದರು.

ಆತ್ಮನಿರ್ಭರ್ ಭಾರತದ ಮೂಲಕ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವ ಮೋದಿ ಅವರು ಕರ್ನಾಟಕಕ್ಕೆ ನೀಡಿರುವ ಅಪೂರ್ವ ಕೊಡುಗೆಗೆ ಕನ್ನಡ ನಾಡಿನ ಸಮಸ್ತ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬೊಮ್ಮಾಯಿ ತಿಳಿಸಿದರು.

Articles You Might Like

Share This Article