ಬೆಂಗಳೂರು,ಡಿ.3- ನಾಡಪ್ರಭು ಕೆಂಪೇಗೌಡ ದಿನಾಚರಣೆಗೆ ಅನುಮತಿ ನೀಡಲು ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಕಂಡು ಬಂದಿದೆ. ವರ್ಷಾಂತ್ಯದೊಳಗೆ ನಾಡಪ್ರಭು ಕೆಂಪೇಗೌಡರ ದಿನಾಚರಣೆಗೆ ಅನುಮತಿ ನೀಡುವಂತೆ ಬಿಬಿಎಂಪಿ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿವ್ಯ ಮೌನಕ್ಕೆ ಶರಣಾಗಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಪ್ರತಿವರ್ಷ ಬೆಂಗಳೂರು ಕರಗದ ಸಮಯದಲ್ಲೇ ನಾಡಪ್ರಭು ಕೆಂಪೇಗೌಡ ದಿನಾಚರಣೆಯನ್ನು ಬಿಬಿಎಂಪಿ ವತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಆದರೆ, ಈ ಬಾರಿ ಅದು ಸಾಧ್ಯವಾಗದ ಹಿನ್ನಲೆಯಲ್ಲಿ ವರ್ಷಾಂತ್ಯದೊಳಗೆ ದಿನಾಚರಣೆ ನಡೆಸಲು ಅನುಮತಿ ನೀಡುವಂತೆ ಬಿಬಿಎಂಪಿಯವರು
ಸರ್ಕಾರಕ್ಕೆ ಪತ್ರ ಬರೆದು ತಿಂಗಳಾದರೂ ಇದುವರೆಗೂ ಯಾವುದೆ ಉತ್ತರ ಬಂದಿಲ್ಲ.
ಪಿಎಸ್‍ಐ ನೇಮಕಾತಿ ಅಕ್ರಮ : ಅಮೃತ್‍ಪೌಲ್ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ
ಕೆಂಪೇಗೌಡ ಕುಲದವರಾದ ಒಕ್ಕಲಿಗರ ಓಲೈಕೆಗೆ ಮುಂದಾಗಿದ್ದ ಬಿಜೆಪಿ ಸರ್ಕಾರ ಇದೀಗ ಕೆಂಪೇಗೌಡರ ದಿನಾಚರಣೆಗೆ ಅನುಮತಿ ನೀಡದಿರಲು ಕಾರಣವೇನು ಎನ್ನುವುದು ಮಾತ್ರ ನಿಗೂಢವಾಗಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಉತ್ಸುಕವಾಗಿದ್ದ ಸರ್ಕಾರ ಈಗ ಮಾತ್ರ ನಾಡಪ್ರಭುಗಳ ಜನ್ಮ ದಿನಾಚರಣೆಗೆ ಅನುಮತಿ ನೀಡದಿರುವುದರ ಹಿಂದೆ ಯಾವ ಮರ್ಮ ಅಡಗಿದೆಯೋ ಎನ್ನುವುದೇ ತಿಳಿದುಬರುತ್ತಿಲ್ಲ.
ಗಡಿನಾಡು ಅಭಿವೃದ್ಧಿಗೆ ಅಧಿವೇಶನದಲ್ಲಿ ಮಹತ್ವದ ಘೋಷಣೆ ಸಾಧ್ಯತೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಗಮನದ ಹಿನ್ನಲೆಯಲ್ಲಿ ಪ್ರತಿಮೆ ಅನಾವರಣಕ್ಕೆ ಸಕಲ ಸೌಕರ್ಯ ಒದಗಿಸಿದ್ದ ಸರ್ಕಾರ ಇದೀಗ ಇಂತಹ ದ್ವಂದ್ವ ನಿಲುವು ತಳೆಯಲು ಕಾರಣವೇನು ಎಂದು ಬೆಂಗಳೂರು ನಾಗರಿಕರು ಪ್ರಶ್ನಿಸುತ್ತಿದ್ದಾರೆ.ಸರ್ಕಾರದ ನಿರ್ಲಕ್ಷ್ಯ ನೋಡುತ್ತಿದ್ದರೆ ಈ ವರ್ಷ ಕೆಂಪೇಗೌಡ ಜಯಂತಿ ನಡೆಯೋ ಸಾಧ್ಯತೆ ಕಡಿಮೆ ಅಂತಿದೆ ಬಿಬಿಎಂಪಿ ಮೂಲಗಳು…
#NadaprabhuKempegowda, #Jayanthi, BBMP, #Government,