ರಾಜ್ಯದೆಲ್ಲೆಡೆ ಮನೆಮಾಡಿದ ನಾಗರಪಂಚಮಿ ಸಂಭ್ರಮ

ಬೆಂಗಳೂರು,ಆ.9-ಎಲ್ಲೆಡೆ ನಾಗರಪಂಚಮಿಯ ಸಂಭ್ರಮ. ಹಿಂದೂ ಸಂಪ್ರದಾಯದಲ್ಲಿ ನಾಗರಪಂಚಮಿಗೆ ವಿಶೇಷ ಮಹತ್ವವಿದೆ. ಕಲ್ಲಿನ ನಾಗಪ್ಪನಿಗೆ ಹಾಲೆರೆದು ಪೂಜಿಸುವ ವೈಶಿಷ್ಟ್ಯವಿದೆ. ಇಂದು ಶ್ರದ್ದಾಭಕ್ತಿಯಿಂದ ನಾಗಪ್ಪನಿಗೆ ಹಾಲು ಎರೆಯುವ ಮೂಲಕ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ನಾಗರಪಂಚಮಿಯನ್ನು ಆಚರಿಸಿದರು. ಕುಕ್ಕೆ ಸುಬ್ರಹಣ್ಯೇಶ್ವರ ದೇವಸ್ಥಾನ, ದೊಡ್ಡಬಳ್ಳಾಪುರದ ಘಾಟಿ ಸುಬ್ರಹಣ್ಯ, ಕೆಂಗೇರಿಯ ಮುಕ್ತಿನಾಗ ದೇವಾಲಯ ಸೇರಿದಂತೆ ವಿವಿಧ ನಾಗದೇವಾಲಯಗಳಲ್ಲಿ ಭಕ್ತಿಭಾವದಿಂದ ನಾಗರಪಂಚಮಿಯನ್ನು ಆಚರಿಸಲಾಯಿತು. ಕುಕ್ಕೆಸುಬ್ರಹಣ್ಯದಲ್ಲಿ ಶ್ರಾವಣ ಮಾಸದ ನಾಗಪಂಚಮಿಯಂದು ವಿಶೇಷ ಪೂಜೆಗಳು ಜರುಗಿದವು. ನಾಡಿನಾದ್ಯಂತ ಆಗಮಿಸಿದ ಭಕ್ತರು, ನಾಗಪೂಜೆ, ಮಂಡಲ ಪೂಜೆಗಳಲ್ಲಿ ಪಾಲ್ಗೊಂಡಿದ್ದರು. ರಾಜಧಾನಿ … Continue reading ರಾಜ್ಯದೆಲ್ಲೆಡೆ ಮನೆಮಾಡಿದ ನಾಗರಪಂಚಮಿ ಸಂಭ್ರಮ