ಶೀಘ್ರದಲ್ಲೇ ನಾಗಸಂದ್ರ-ಮಾದಾವರ ಮೆಟ್ರೋ ಸಂಚಾರ ಆರಂಭ
ಬೆಂಗಳೂರು,ಅ.21: ನಮ್ಮ ಮೆಟ್ರೋದ ನಾಗಸಂದ್ರ ಮತ್ತು ಮಾದಾವರ ಮಾರ್ಗದ ಮಧ್ಯ ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಇನ್ನೊಂದು ವಾರದಲ್ಲಿ ಕಾರ್ಯಾರಂಭ ಮಾಡಲಿದೆ.ಸುಮಾರು 3.14 ಕಿಮೀ ಮಾರ್ಗದಲ್ಲಿ ನಾಗಸಂದ್ರದಿಂದ ಮಾದಾವರ ನಡುವೆ ಮೂರು ನಿಲ್ದಾಣಗಳಿದ್ದು, ಮಂಜುನಾಥ ನಗರ, ಚಿಕ್ಕಬಿದರಕಲ್ಲು, ಮಾದಾವರ ಹೊಸದಾಗಿ ಹಸಿರು ಮಾರ್ಗಕ್ಕೆ ಸೇರ್ಪಡೆಯಾಗಲಿದೆ. ಒಂದು ವಾರದೊಳಗೆ ಉದ್ಘಾಟನಾ ಸಮಾರಂಭ ನಡೆಯುವ ನಿರೀಕ್ಷೆ ಇರುವುದರಿಂದ ನಿಲ್ದಾಣಗಳನ್ನ ಸುಸಜ್ಜಿತಗೊಳಿಸಲಾಗುತ್ತಿದೆ.ಮೆಟ್ರೋ ಆರಂಭವಾದರೆ ಸಮಯ ಉಳಿತಾಯವಾಗಲಿದೆ ಏಷ್ಯಾದ ಅತಿ ದೊಡ್ಡ ಪ್ರದರ್ಶನ ಕೇಂದ್ರ ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ಗೆ ಹೋಗಲು ಅನುಕೂಲವಾಗಲಿದೆ. ಈ ಮಾರ್ಗ ಪೂರ್ಣಗೊಳ್ಳುವುದರಿಂದ ನೆಲಮಂಗಲ, ಮಾದನಾಯಕನಹಳ್ಳಿ, ಮಾಕಳಿ ನಿವಾಸಿಗಳಿಗೆ, ನಾಗಸಂದ್ರ-ಮಾದಾವರ ಮಾರ್ಗದ ಮೂರು ನಿಲ್ದಾಣಗಳ ಸಮೀಪದ ಅಪಾರ್ಟ್ಮೆಂಟ್ ಗಳ ನಿವಾಸಿಗಳು ಮತ್ತು ಸುತ್ತ ಮುತ್ತಲಿನ ನಿವಾಸಿಗಳಿಗೆ ಸಹಾಯ ಆಗಲಿದೆ ಪ್ರಸ್ತುತ ಕೇಂದ್ರ ಸರ್ಕಾರದ ಅನುಮತಿಯಷ್ಟೇ ಬಾಕಿ ಇದ್ದು, ಈಗಾಗಲೇ ಮೂರು ಮೆಟ್ರೋ ನಿಲ್ದಾಣದಲ್ಲಿ ಎಲ್ಲಾ ಕಾಮಗಾರಿ ಮುಗಿದಿದೆ. ಕೇಂದ್ರ ಸರ್ಕಾರ ಗ್ರೀನ್ ಕೊಟ್ಟಿದ್ದೇ ಆದಲ್ಲಿ ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಮಾಡಲಿದೆ.
Copy and paste this URL into your WordPress site to embed
Copy and paste this code into your site to embed