ಆರ್ಥಿಕ ಕೊರತೆಯಿಂದಾಗಿ ನಮ್ಮ ಕ್ಲಿನಿಕ್ ಸೇವೆ ಸ್ಥಗಿತ

Social Share

ಬೆಂಗಳೂರು,ಜ.16- ರಾಜ್ಯದಲ್ಲಿ ದ್ವಿತೀಯ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಆರಂಭಿಸಿದ್ದ ನಮ್ಮ ಕ್ಲಿನಿಕ್ ಸೇವೆಯನ್ನು ಆರ್ಥಿಕ ಕೊರತೆಯಿಂದಾಗಿ ಸ್ಥಗಿತಗೊಳಿಸಲಾಗಿದೆ. ನಮ್ಮ ಕ್ಲಿನಿಕ್ ಗುರಿಯಂತೆಯೇ ರಾಜ್ಯ ಸರ್ಕಾರ ರಾಷ್ಟ್ರೀಯ ಆರೋಗ್ಯ ಮಿಷನ್‍ನಡಿ ಮೊಬೈಲ್ ವೈದ್ಯಕೀಯ ಘಟಕಗಳ (ಎಂಎಂಯು) ಸೇವೆಯನ್ನು 2022ರ ಆರಂಭಿಕ ತಿಂಗಳಿನಲ್ಲಿ ಆರಂಭಿಸಿತ್ತು. ಈ ಸೇವೆಗೆ ಬಜೆಟ್ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿದೆ.

12 ವಿವಿಧ ಕ್ಷೇತ್ರಗಳಲ್ಲಿ ಸರ್ಕಾರ 70 ಎಂಎಂಯುಗಳನ್ನು ಒದಗಿಸಲು ಮುಂದಾಗಿತ್ತು. ದೂರದ ಪ್ರದೇಶಗಳಲ್ಲಿನ ತುರ್ತು ಸೇವೆಗಳನ್ನು ನೋಡಿಕೊಳ್ಳಲು ಸೇವೆ ಒದಗಿಸಲು ಸರ್ಕಾರ ನಿರ್ಧರಿಸಿತ್ತು. ರಾಷ್ಟ್ರೀಯ ನಗರ ಆರೋಗ್ಯ ಮಿಷನ್‍ನಡಿ ಈ ಸೇವೆಯನ್ನು ಆರಂಭಿಸಿ ತಾಯಿಯ ಆರೋಗ್ಯ, ಮಗುವಿನ ಆರೋಗ್ಯ, ವೃದ್ದಾಪ್ಯ, ಆರೈಕೆ, ದಂತ ಮತ್ತು ಕಣ್ಣಿನ ಆರೈಕೆಗಳನ್ನು ನೋಡಿಕೊಳ್ಳಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ 2022 ಸಾಲಿನಿಂದಲೇ ಈ ಸೇವೆಗಳು ಕಾರ್ಯ ನಿರ್ವಹಿಸುತ್ತಿಲ್ಲ.

ಎನ್‍ಹೆಚ್‍ಎಂ ಆದೇಶದಂತೆ ಎಂಎಂಯು ಘಟಕಕ್ಕೆ 1.55 ಲಕ್ಷ ರೂ. ಅಗತ್ಯವಿರುತ್ತದೆ. ಆದಾಗ್ಯೂ ಮುಂಬರುವ ವರ್ಷದಲ್ಲಿ 3.34 ಲಕ್ಷ ರೂ.ಗಳ ವೆಚ್ಚದಲ್ಲಿ 34 ಘಟಕಗಳ ಸ್ಥಾಪನೆಗೆ ಮುಂದಾಗಿದ್ದೆವು. ಆದರೆ ಘಟಕ ಸ್ಥಾಪನೆಗೆ ಹಣ ಸಾಕಾಗದೆ ಇರುವುದರಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹಿಳೆಯರಿಗೆ ಪ್ರತಿತಿಂಗಳು 2000 ರೂ. ಆರ್ಥಿಕ ನೆರವು : ಕಾಂಗ್ರೆಸ್ ಮಹತ್ವದ ಘೋಷಣೆ

ಹಲವಾರು ಪಂಚಾಯತ್ ಮತ್ತು ತಾಲೂಕು ಮಟ್ಟದ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವ ಸೇವೆಗಳ ಗುಣಮಟ್ಟವು ಉತ್ತಮವಾಗಿರುವುದಿಲ್ಲ. ಮೂಲಭೂತ ಸೇವೆಗಳನ್ನು ಪಡೆಯಲು ನಾಗರಿಕರು ದೂರದ ಪ್ರಯಾಣ ಮಾಡಬೇಕಾಗುತ್ತದೆ. ದೂರದ ಪ್ರದೇಶಗಳಲ್ಲಿರುವ ಜನರಿಗೆ ವೈದ್ಯಕೀಯ ಸೇವೆ ಒದಗಿಸುವ ಎಂಎಂಯುಗಳು ಉತ್ತಮ ಪರಿಕಲ್ಪನೆಯಾಗಿತ್ತು ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಇನೋಸಿಸ್ ಫೌಂಡೇಶನ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಸಿಎಸ್‍ಆರ್ ಯೋಜನೆಯಡಿ ಒದಗಿಸಿರುವ ಲ್ಯಾಬ್ ಬಿಲ್ಟ್ ಆನ್ ವೀಲ್ಸ್ – ಮೊಬೈಲ್ ಕ್ಲಿನಿಕ್‍ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಉದ್ಘಾಟಿಸಿದ್ದರು.

ಐಸಿಎಂಆರ್ ನಿಗದಿಪಡಿಸಿರುವ ಮಾನದಂಡಕ್ಕೆ ಅನುಗುಣವಾಗಿ ಬಿಎಸ್‍ಎಲ್ -2 ಸುರಕ್ಷಾ ಮಟ್ಟದಲ್ಲಿ ಕ್ಲಿನಿಕ್ ನಿರ್ಮಾಣ ಮಾಡಲಾಗಿದೆ. ಒಂದೇ ಸೂರಿನಡೆ ಕ್ಲಿನಿಕ್, ಟೆಲಿ ಮೆಡಿಸಿನ್, ಫಾರ್ಮಸಿ, ವ್ಯಾಕ್ಸಿನ್ ಮತ್ತು ಇತರ ಔಷಧಗಳನ್ನು ಕೊಂಡೊಯ್ಯಲು ಸಹಕಾರಿಯಾಗುವಂತೆ 2 ಡಿಗ್ರಿಯಿಂದ -18 ಡಿಗ್ರಿ ಸೆಲ್ಸಿಯಸ್‍ನ ರೆಫ್ರಿಜರೇಟರ್, ತುರ್ತು ಚಿಕಿತ್ಸೆಗಾಗಿ ಆಕ್ಸಿಜನ್ ನೀಡಿ ಕನಿಷ್ಠ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಮಾಡುವ ಪ್ರತ್ಯೇಕ ಬೆಡ್‍ವುಳ್ಳ ಕೋಣೆ, ವಿದ್ಯುತ್ ಸಂಪರ್ಕ ಇಲ್ಲದಿರುವ ಕಡೆ ಉಪಯೋಗಿಸುವಂತೆ ಕೆಪಿ ಜನರೇಟರ್ ವ್ಯವಸ್ಥೆ ಹೊಂದಿತ್ತು.

ರಾಜ್ಯಕ್ಕೆ ಪ್ರಿಯಾಂಕ ಆಗಮನ, ಕಾಂಗ್ರೆಸ್‌ನಲ್ಲಿ ಸಂಚಲನ

ಈ ಮೊಬೈಲ್ ಕ್ಲಿನಿಕ್ ಸಾಂಕ್ರಾಮಿಕ ರೋಗಗಳಾದ ಕೋವಿಡ್ -19, ಟಿಬಿ, ಮಲೇರಿಯಾ, ಡೆಂಘೀ ಮತ್ತು ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ. ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ನಿರಂತರವಾಗಿ ಗ್ರಾಮೀಣ ಭಾಗದ ಜನರಿಗೆ ಸೂಕ್ತ ಸಮಯದಲ್ಲಿ ನೀಡಿ, ಆಸ್ಪತ್ರೆಗಳ ಒತ್ತಡ ಕಡಿಮೆ ಮಾಡಲಿದೆ.

ಈ ಮಾದರಿಯ ಕನಿಷ್ಠ 20 ಮೊಬೈಲ್ ಕ್ಲಿನಿಕ್‍ಗಳನ್ನು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಅಡಿ ಭರಿಸುವ ಯೋಜನೆ ರೂಪಿಸಿದ್ದು ಸಂಚಾರಿ ಕ್ಲಿನಿಕ್‍ಗಳ ವಿಶೇಷತೆಯಾಗಿತ್ತು.

Namma Clinic, health service, stopped,

Articles You Might Like

Share This Article