ಬೆಂಗಳೂರು,ಜ.12- ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣವೇನು ಎಂಬುದು ಮುರ್ನಾಲ್ಕು ದಿನಗಳಲ್ಲಿ ಬಹಿರಂಗವಾಗಲಿದೆ. ನಾಗವಾರ ಸಮೀಪ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಬಲಿಯಾದ ನಂತರ ಪಿಲ್ಲರ್ ಕುಸಿತಕ್ಕೆ ಕಾರಣವೇನು ಎನ್ನುವುದನ್ನು ಪತ್ತೆ ಹಚ್ಚುವ ಹೊಣೆಯನ್ನು ಭಾರತೀಯ ವಿಜ್ಞಾನ ಸಂಸ್ಥೆಗೆ ವಹಿಸಲಾಗಿದೆ.
ಈಗಾಗಲೇ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ಐಐಎಸ್ಸಿ ವಿಜ್ಞಾನಿಗಳು ಅವಘಡಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಮೂರ್ನಾಲ್ಕು ದಿನಗಳ ಒಳಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಐಐಎಸ್ಸಿ ಮೂಲಗಳು ಖಚಿತಪಡಿಸಿವೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಐಐಎಸ್ ಸಿ ಪ್ರೊಫೆಸರ್ ಜೆ.ಎಂ.ಚಂದ್ರ ಕಿಶನ್ ಅವರು, ಕಾಮಗಾರಿಗೆ ಬಳಸಿದ್ದ ಕಟ್ಟಡ ಸಾಮಾಗ್ರಿಗಳ ಬಗ್ಗೆ ವರದಿ ಕೇಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ದುರಂತಕ್ಕೆ ಕೆಲ ತಪ್ಪುಗಳು ಮಾಡಿರುವುದು ಸಾಬೀತಾಗಿದೆ ಎಂದಿದ್ದಾರೆ.
ಓಮಿಕ್ರಾನ್ನಿಂದ 650 ಉಪತಳಿಗಳ ರೂಪಾಂತರ
ಪಿಲ್ಲರ್ ನಿರ್ಮಾಣಕ್ಕಾಗಿ ನಿಲ್ಲಿಸಲಾಗಿದ್ದ ಕಬ್ಬಿಣದ ತೂಕ ಜಾಸ್ತಿ ಆಗಿ ಪಕ್ಕಕ್ಕೆ ವಾಲಿಕೊಂಡಿತ್ತು ಎನ್ನಲಾಗಿದೆ. ವಾಲಿದ ಪಿಲ್ಲರ್ಗೆ ಸಪ್ರೊರ್ಟಿಂಗ್ ಕೊಡಬೇಕಿತ್ತು. ಸಪೆರ್ಪ್ರೊಟಿಂಗ್ ಕೊಡದೆ ಹಾಗೆ ಬಿಟ್ಟಿರುವುದೇ ದುರಂತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಸಾಬೀತಾಗಿರುವುದನ್ನು ಅವರು ಖಚಿತಪಡಿಸಿದ್ದಾರೆ.
Namma Metro, pillar, collapse IISc, Bangalore, submit, report, fourdays