ಬೆಂಗಳೂರು,ಫೆ.7-ಮೆಟ್ರೋ ನಿಗಮದ ಅವಾಂತರಗಳು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಧರೆಗುರುಳಿ ತಾಯಿ-ಮಗು ಸಾವನ್ನಪ್ಪಿದಾಯ್ತು, ಟ್ರಿನಿಟಿ ಸ್ಟೇಷನ್ ಪಿಲ್ಲರ್ ಬೇರಿಂಗ್ ಬಿಟ್ಟಿದ್ದಾಯಿತು. ಇದೀಗ ಮೆಟ್ರೋ ರೈಲ್ವೆ ಹಳಿಗಳ ಸರತಿ.
ಮೈಸೂರು ರಸ್ತೆಯ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ಕೂಗಳತೆ ದೂರದಲ್ಲಿ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಟ್ರ್ಯಾಕ್ ಹಾಕಿದ ಮೂರು ವರ್ಷದೊಳಗೆ ಹಳಿಯಲ್ಲಿ ಬಿರುಕು ಕಂಡು ಬಂದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಅದಾನಿ ಹಗರಣದ ತನಿಖೆಗೆ ಪ್ರತಿಪಕ್ಷಗಳ ಪಟ್ಟು, ಕಲಾಪ ಮುಂದೂಡಿಕೆ
ಮೆಟ್ರೋ ರೈಲು ಸಂಚಾರದ ಟ್ರಾಕ್‍ನಲ್ಲಿ ಸೌಂಡ್ ಬಂದಿರುವುದು ಹಾಗೂ ಸ್ಪೀಡ್‍ನಲ್ಲಿನ ವ್ಯತ್ಯಾಸದಿಂದ ಹಳಿಯಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಪೈಲಟ್ ಹಾಗೂ ಕೆಳಮಟ್ಟದ ಸಿಬ್ಬಂದಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಇಡೀ ದಿನ ಮತ್ತೊಂದು ಟ್ರ್ಯಾಕ್ ನಲ್ಲಿ ಮೆಟ್ರೋ ಓಡಾಟ ನಡೆಸುವ ಮೂಲಕ ಹಳಿಯನ್ನು ದುರಸ್ತಿಪಡಿಸಲಾಗಿದೆ. ಟ್ರ್ಯಾಕ್ ಸರಿಪಡಿಸಿದ ನಂತರ ಎರಡು ಹಳಿಯಲ್ಲಿ ಎಂದಿನಂತೆ ಮೆಟ್ರೋ ರೈಲು ಸಂಚಾರ ಆರಂಭಿಸಲಾಗಿದೆ.
ಆದಾಯ ಕ್ರೋಢೀಕರಣಕ್ಕೆ ಸಿಎಂ ಬೊಮ್ಮಾಯಿ ಆದ್ಯತೆ
ಒಂದು ವೇಳೆ ಹಳಿ ಹಾಳಾಗಿರುವುದನ್ನು ಗಮನಿಸದಿದ್ದರೆ ಭಾರಿ ಅನಾಹುತವೇ ಸಂಭವಿಸುತ್ತಿತ್ತು. ಹಳಿ ನಿರ್ಮಿಸಿ ಮೂರು ವರ್ಷ ಕಳೆಯುವುದರೊಳಗೆ ಹಳಿ ಹಾಳಾಗಿದ್ದರೂ ಸಂಬಂಧಪಟ್ಟ ಗುತ್ತಿಗೆದಾರರ ಮೇಲೆ ಮೆಟ್ರೋ ಅಧಿಕಾರಿಗಳು ಕ್ರಮ ಕೈಗೊಳ್ಳದಿದರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
namma metro, railway, track, crack,